ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಕತ್ತೆ ಹಾಲಿಗೂ ಬಂತು ಭಾರೀ ಡಿಮ್ಯಾಂಡ್: ಲೀಟರ್ ಹಾಲಿನ ಬೆಲೆ ಎಷ್ಟು?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 29: ನಿಮ್ಮಮ್ಮ ನಿನಗೆ ಕತ್ತೆ ಹಾಲು ಕುಡಿಸಿದ್ರೆನೋ ಅಂತಾ ಬೈಯುವ ಮಂದಿಯೆಲ್ಲಾ ಈ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕತ್ತೆ ಹಾಲಿಗೆ ಮುಗಿಬಿದ್ದಿದ್ದಾರೆ.

ಚಿಕ್ಕಮಗಳೂರು ನಗರದ ಬೀದಿ ಬೀದಿಗಳಲ್ಲಿ ಕತ್ತೆ ಹಾಲು ಕುಡಿಯುವವರು ಕಳೆದ ಒಂದು ವಾರದಿಂದ ಕಂಡು ಬರುತ್ತಿದ್ದಾರೆ. ದೊಡ್ಡವರು, ಸಣ್ಣವರು ಎನ್ನದೇ ಆನ್‌ಸ್ಪಾಟ್ ಕತ್ತೆ ಹಾಲನ್ನು ಕರೆದ ತಕ್ಷಣ ಹೊಳ್ಳೆಗೆ 50 ರೂಪಾಯಿ ಕೊಟ್ಟು ಕುಡಿಯುವ ದೃಶ್ಯ ಸಾಮಾನ್ಯವಾಗಿದೆ.

ಕಾಫಿನಾಡಲ್ಲಿ ಈಗ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಕತ್ತೆ ಹಾಲಿನ ತಾಕತ್ತಿನ ಬಗ್ಗೆ ಬೀದಿ ಬೀದಿಗಳಲ್ಲಿ ಸಾರುತ್ತಾ ಹಾಲನ್ನು ಮಾರಾಟ ಮಾಡುವ ಮಂದಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಡಾಂಕಿಗೆ ಫುಲ್ ಡಿಮ್ಯಾಂಡ್ ಮತ್ತು ನಗರದಲ್ಲಿ ಇಮೇಜ್ ಕ್ರಿಯೇಟ್ ಆಗಿದೆ.

Heavy Demand For Donkey Milk In Chikkamagaluru: How Much For 1 Liter Milk?

ಕತ್ತೆ ಹಾಲನ್ನು ಯಾರು ಬೇಕಾದರೂ ಕುಡಿಯಬಹುದಾಗಿದ್ದು, ಮಕ್ಕಳ ಎಲ್ಲಾ ತರಹದ ವ್ಯಾದಿಗೆ ಇದು ರಾಮಬಾಣ ಅಂತೆ. ಕೆಮ್ಮು, ಶೀತ, ನೆಗಡಿ, ಕಫ ಹೀಗೆ ಹಲವು ಸಣ್ಣಪುಟ್ಟ ಖಾಯಿಲೆಗಳಿಗೆ ಕತ್ತೆ ಹಾಲು ಸಂಜೀವಿನಿ ಎಂಬ ಮಾತು ಕತ್ತೆ ಬೀದಿಗೆ ಬರುತ್ತಿದ್ದಂತೆ ಪ್ರತಿ ಬೀದಿಗಳಲ್ಲಿ ಶುರುವಾಗುತ್ತದೆ.

ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆಂದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ ಎಂಬ ಅಭಿಪ್ರಾಯದಿಂದ ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದೆ.

Heavy Demand For Donkey Milk In Chikkamagaluru: How Much For 1 Liter Milk?

ಡೈರಿಯಲ್ಲಿ ಒಂದು ಲೀಟರ್ ಹಾಲಿಗೆ 48 ರೂಪಾಯಿ ಕೊಟ್ಟು ಹಾಲು ಖರೀದಿಸಲು ಹಿಂದೆ ಮುಂದೆ ನೋಡುವ ಮಂದಿ ಕತ್ತೆ ಹಾಲಿಗೆ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ದರಿದ್ದಾರೆ. ಹೊಳ್ಳೆಗೆ 50 ರೂಪಾಯಿ, ಒಂದು ಕಾಫಿ ಕುಡಿಯುವ ಲೋಟದಷ್ಟು ಹಾಲಿಗೆ 100 ರೂಪಾಯಿ ಕೊಟ್ಟು ಕುಡಿಯುತ್ತಿದ್ದಾರೆ. ಹೀಗೆ ಲೆಕ್ಕಾಚಾರ ಮಾಡಿದರೆ ಒಂದು ಲೀಟರ್ ಕತ್ತೆ ಹಾಲಿಗೆ ಐದು ಸಾವಿರ ಆಗುತ್ತದೆ.

ಆಂಧ್ರ ಪ್ರದೇಶದಿಂದ ಚಿಕ್ಕಮಗಳೂರಿಗೆ ಬಂದಿರುವ ಜನ ಕತ್ತೆ ಹಾಲಿನ ಮಾರಾಟದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 20 ಜನ 20 ಕತ್ತೆಯೊಂದಿಗೆ ಚಿಕ್ಕಮಗಳೂರು ನಗರಕ್ಕೆ ಬಂದಿದ್ದಾರೆ. ಒಬ್ಬೊಬ್ಬರು ಒಂದೊಂದು ಕತ್ತೆಯೊಂದಿಗೆ ಒಂದೊಂದು ಏರಿಯಾಗೆ ಭೇಟಿ ನೀಡುತ್ತಿದ್ದಾರೆ. ಇಡೀ ದಿನ ನಗರ ಸೇರಿದಂತೆ ಹಳ್ಳಿ- ಹಳ್ಳಿ ಸುತ್ತುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಹೋಗಿ 10- 11 ಗಂಟೆಗೆ ವೇಳೆಗೆ 800- 1000 ದುಡಿಯುತ್ತಿದ್ದಾರೆ.

Heavy Demand For Donkey Milk In Chikkamagaluru: How Much For 1 Liter Milk?

Recommended Video

ನೋಡನೋಡ್ತಿದ್ದಂತೆ ಪ್ರಯಾಣಿಕರಿದ್ದ ಬಸ್ ನೀರು ಪಾಲಾದ ವಿಡಿಯೋ | Oneindia Kannada

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಕತ್ತೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯ ಗುಣ ಇದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವುದರಿಂದ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಕತ್ತೆ ಹಾಲನ್ನು ಕುಡಿಯಲು ಮುಗಿಬಿದ್ದಿದ್ದಾರೆ. ಒಟ್ಟಾರೆ "ಅತ್ತೆಗೆ ಒಂದು ಕಾಲ, ಸೊಸೆಗೆ ಒಂದು ಕಾಲ' ಅನ್ನುವ ಹಾಗೆ ಕತ್ತೆಗೂ ಒಂದು ಕಾಲ ಬಂದಿದೆ.

English summary
Huge Demand For Donkey Milk In Chikkamagaluru: Here is the price for 1 Liter Milk?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X