ಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲ

ಚಿಕ್ಕಮಗಳೂರು, ಜನವರಿ 24: ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಗುರುವಾರ ರಾತ್ರಿ ಭಾರೀ ಸ್ಪೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ 5 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ ಭಾನುವಾರ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. "ಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ, ತನಿಖೆ ಮಾಡುತ್ತಾರೆ" ಎಂದರು.

"ಶಿವಮೊಗ್ಗ ಹುಣಸೋಡುಗೆ ಸ್ಫೋಟಕಗಳು ಗಣಿಗಾರಿಕೆಗಾಗಿ ಬಂದಿದೆ. ಬೇರೆ ಉದ್ದೇಶಕ್ಕೆ ಬಂದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಬೇರೆ ರಾಜ್ಯದಿಂದ ಯಾರು ತಂದು ಕೊಡುತ್ತಾರೆ. ಯಾರು ತರ್ತಾರೆ ಅದೂ ತನಿಖೆಯಾಗಬೇಕು" ಎಂದು ಅಶೋಕ ಹೇಳಿದರು.

Gelatin Sticks Blast In Shivamogga No CBI Probe Says Ashok

"ಸ್ಫೋಟ ನಡೆದ ದಿನವೇ ಕಂದಾಯ ಇಲಾಖೆಯಿಂದ ಡಿಸಾಸ್ಟರ್ ಟೀಂ ಕಳಿಸಿದ್ದೇವೆ. ಸ್ಫೋಟಕಗಳ ಸಾಗಣೆಗೆ ಸಂಬಂಧಿಸಿದಂತೆ ಮತ್ತಷ್ಟ ಕಠಿಣ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಭರವಸೆ ನೀಡಿದರು.

"ಸ್ಫೋಟದ ಶಬ್ಧ 60 ಕಿ. ಮೀ. ವರೆಗೂ ಹೋಗಿದೆ. ಹಲವು ವರ್ಷಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಸ್ಫೋಟಕ ಸಾಮಾಗ್ರಿಗಳ ಶೇಖರಣೆಗೆ ಬಗ್ಗೆ ನೋಡಿ ಅನುಮತಿ ಕೊಡಬೇಕು. ಆಂಧ್ರ ಪ್ರದೇಶದಿಂದ ಸ್ಫೋಟಕ ಬಂದಿದೆ ಎಂಬ ಮಾಹಿತಿ ಇದೆ" ಎಂದು ಅಶೋಕ ತಿಳಿಸಿದರು.

ಯಾವುದೇ ಗೊಂದಲವಿಲ್ಲ: ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಚಿವರು, "ಖಾತೆಯ ಕ್ಯಾತೆ ಮುಗಿದ ಅಧ್ಯಾಯ, ಎಲ್ಲವೂ ನಿನ್ನೆಯೇ ಮುಗಿದ ಅಧ್ಯಾಯವಾಗಿದೆ. ಎಲ್ಲರೂ ಸಿಎಂ ಜೊತೆಯೇ ಇದ್ದಾರೆ ಗೋಪಾಲಯ್ಯ, ಎಂಟಿಬಿ, ಸುಧಾಕರ್, ಶಂಕರ್ ಜೊತೆ ಮೊನ್ನೆಯೇ ಮಾತನಾಡಿದ್ದೇನೆ. ಎಲ್ಲರೂ ಸಮಧಾನವಾಗಿ, ಶಾಂತವಾಗಿ ಇದ್ದಾರೆ, ಯಾವುದೇ ಗೊಂದಲವಿಲ್ಲ" ಎಂದರು ಅಶೋಕ ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+