ಶೃಂಗೇರಿ: ಉಚಿತ ಬಸ್ ಪ್ರಯಾಣ, ಡ್ರೈವರ್ ಸೀಟ್ ಕೂಡ ಬಿಡದ ಮಹಿಳೆ!
ಚಿಕ್ಕಮಗಳೂರು, ಜೂನ್ 18: ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಆರಂಭವಾಗಿ ಮೊದಲ ವೀಕೆಂಡ್‌ನಲ್ಲಿ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿವೆ. ಬಸ್ ಹತ್ತಲು ಹಾಗೂ ಸೀಟ್‌ಗಳಿಗಾಗಿ ಮಹಿಳೆಯರು ಪರದಾಡುತ್ತಿದ್ದು, ಮಹಿಳೆಯೊಬ್ಬರು ಡ್ರೈವರ್ ಸೀಟ್‌ನಿಂದಲೇ ಬಸ್ ಹತ್ತಿರುವ ಪ್ರಸಂಗ ಶೃಂಗೇರಿಯಲ್ಲಿ ನಡೆದಿದೆ.
ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರಗಳಿಗೆ ತೆರಳುವ ಸಾರಿಗೆ ಬಸ್‌ಗಳು ಫುಲ್ ರಶ್ ಆಗಿದ್ದು, ಸಾವಿರಾರು ಮಹಿಳೆಯರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಆಗಮಿಸಿದ್ದಾರೆ. ಶೃಂಗೇರಿ ಬಸ್ ನಿಲ್ದಾಣ ಸಂಪೂರ್ಣವಾಗಿ ಮಹಿಳೆಯರಿಂದ ತುಂಬಿದ್ದು, ಸಾರಿಗೆ ಬಸ್ ಹತ್ತಲು ಮಹಿಳೆಯರು ಪರದಾಡುತ್ತಿದ್ದಾರೆ.

ಈ ವೇಳೆ ಮಹಿಳೆಯೊಬ್ಬರು ಡ್ರೈವರ್ ಸೀಟ್‌ನಿಂದಲೇ ಬಸ್ ಹತ್ತಿದ ಘಟನೆ ನಡೆದಿದೆ. ಮೊದಲು ಮಕ್ಕಳನ್ನು ಡ್ರೈವರ್ ಸೀಟ್‌ನಲ್ಲಿ ಕೂರಿಸಿದ ಮಹಿಳೆ, ಬಳಿಕ ತಾನೂ ಡ್ರೈವರ್ ಸೀಟ್‌ನಿಂದಲೇ ಬಸ್ ಏರಿದ್ದಾರೆ.
ಇನ್ನು ಹೊರನಾಡು ಅನ್ನಪೂಣೇಶ್ವರಿ ದರ್ಶನಕ್ಕೂ ಮಹಿಳೆಯರ ದಂಡು ಹೊರಟ್ಟಿದ್ದು, ಧಾರವಾಡ, ಹುಬ್ಬಳ್ಳಿ, ಹರಿಹರ, ಚಿತ್ರದುರ್ಗ, ಹರಿಹರ, ಹಾಸನದಿಂದ ಸುಮಾರು 400ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದಾರೆ. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗಲು ಉಚಿತ ಬಸ್‌ಗಾಗಿ ಮಹಿಳೆಯರು ಇಡೀ ದಿನ ಕಾದಿದ್ದು, ಖಾಸಗಿ ಬಸ್ ಏರಲು ಮಹಿಳೆಯರು ಹಿಂದೇಟು ಹಾಕಿದ್ದಾರೆ.
ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಉಚಿತ ಬಸ್‌ಗಾಗಿ ಮಹಿಳೆಯರು ಕಾದಿದ್ದು, ಬಸ್ ನಿಲ್ದಾಣದಲ್ಲಿಯೇ ತಾವು ತಂದ ರೊಟ್ಟಿ, ಚಟ್ನಿ ತಿಂದು ಸಮಯ ಕಳೆಯುತ್ತಿದ್ದಾರೆ. ಸುಮಾರು 400-500 ಮಹಿಳೆಯರು ಬಸ್ ನಿಲ್ದಾಣದಲ್ಲಿಯೇ 100-200 ರೂಪಾಯಿ ಖರ್ಚು ಮಾಡುತ್ತಿದ್ದರೂ, 60-70 ರೂ ಟಿಕೆಟ್ ಹಣ ನೀಡಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕಿದ್ದಾರೆ.

ಹೊರನಾಡು ಅನ್ನಪೂಣೇಶ್ವರಿ ದರ್ಶನಕ್ಕೆ ಆಗಮಿಸಿದ ಮಹಿಳೆಯರ ದಂಡು ಸ್ಥಳೀಯ ಪ್ರಯಾಣಿಕರು ದಂಗಾಗಿದ್ದು, ಖಾಸಗಿ ಬಸ್‌ಗಳನ್ನೇರಿ ಪ್ರಯಾಣ ನಡೆಸಿದ್ದಾರೆ.












Click it and Unblock the Notifications