ಶೃಂಗೇರಿ ಯಾತ್ರಿ ನಿವಾಸಕ್ಕೂ ನುಗ್ಗಿದೆ ತುಂಗಾ ನೀರು
ಚಿಕ್ಕಮಗಳೂರು, ಆಗಸ್ಟ್ 8: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಶೃಂಗೇರಿಯಲ್ಲೂ ಮಳೆ ಕ್ಷೀಣಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಪಾಯದ ಮಟ್ಟವನ್ನು ಮೀರಿ ತುಂಗೆ ಉಕ್ಕಿ ಹರಿಯುತ್ತಿದ್ದು, ಶಾರದಾಂಬೆ ನೆಲೆಗೂ ಪ್ರವೇಶಿಸಿದೆ.
ಮಳೆ ಹೆಚ್ಚುತ್ತಿದ್ದಂತೆ ತುಂಗಾ ನದಿ ನೀರಿನ ಮಟ್ಟವೂ ಏರಿಕೆಯಾಗುತ್ತಿರುವುದರಿಂದ ನದಿ ನೀರು ಎಲ್ಲೆಡೆ ನುಗ್ಗುತ್ತಿದೆ. ನಿನ್ನೆ ಶೃಂಗೇರಿ ಶಾರದಾಂಬೆ ದೇವಸ್ಥಾನದ ಸ್ನಾನ ಘಟ್ಟ, ಕಪ್ಪೆ ಶಂಕರ ದೇವಸ್ಥಾನ, ಸಂಧ್ಯಾ ವಂದನಾ ಮಂಟಪ ಮುಳುಗಡೆಯಾಗಿತ್ತು. ಇದೀಗ ಶೃಂಗೇರಿ ದೇವಾಲಯದ ಗಾಂಧಿ ಪಾರ್ಕ್ ಹಾಗೂ ಯಾತ್ರಿ ನಿವಾಸಗಳಿಗೂ ನೀರು ನುಗ್ಗಿದ್ದು, ಜಲಾವೃತವಾಗಿವೆ.

ಮಠದ ಊಟದ ಹಾಲಿನ ಕೇಳ ಅತಂಸ್ತಿಗೂ ನೀರು ನುಗ್ಗಿದೆ. ನಿನ್ನೆಯಿಂದ ನಿರಂತರವಾಗಿ ಶೃಂಗೇರಿ ವ್ಯಾಪ್ತಿಯ ಕಿಗ್ಗಾ, ಎಸ್.ಕೆ.ಬಾರ್ಡರ್, ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.













Click it and Unblock the Notifications