ಚಿಕ್ಕಮಗಳೂರಿನ ಚಿನ್ನದಂಗಡಿಯಲ್ಲಿ ಹಾಡಹಗಲೇ ಫೈರಿಂಗ್
ಚಿಕ್ಕಮಗಳೂರು, ಜುಲೈ 11: ನಗರದ ಎಂ.ಜಿ ರಸ್ತೆಯ ಕೇಸರಿ ಜ್ಯುವೆಲ್ಲರ್ಸ್ ಅಂಗಡಿ ಮೇಲೆ ಹಾಡಹಗಲೇ ಮೂವರು ದಾಳಿ ನಡೆಸಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಬಂದ ಮೂರು ಜನ ಅಂಗಡಿಗೆ ನುಗ್ಗಿ ಏಕಾಏಕಿ ದಾಳಿಗೆ ಮುಂದಾಗಿದ್ದಾರೆ.
Recommended Video
ಈ ವೇಳೆ ಅಂಗಡಿ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದಾಗ ಮಾಲೀಕನ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ಮೂರು ಗುಂಡುಗಳನ್ನು ಹಾರಿಸಿದ್ದು, ಒಂದು ಗುಂಡು ಅಂಗಡಿಯ ಗಾಜಿಗೆ ತಗುಲಿದೆ. ಇನ್ನೆರಡು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಲಾಗಿದೆ. ಮಾಲೀಕ ಸೇರಿದಂತೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಯಾವುದೇ ಅಪಾಯವಾಗಿಲ್ಲ.
ಗಾಜಿಗೆ ಬಿದ್ದ ಗುಂಡಿನಿಂದ ಅಂಗಡಿ ಮಾಲೀಕ ಜಯಪ್ರಕಾಶ್ ಜೈನ್ ಅವರ ಕಾಲಿಗೆ ಗಾಯವಾಗಿದೆ. ಮೂವರು ಮುಖಕ್ಕೆ ಮಾಸ್ಕ್ ಧರಿಸಿದ್ದು, ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಗುಂಡು ಹಾರಿಸುತ್ತಲೇ ಬೈಕ್ ನಲ್ಲಿ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ಅಕೈ ಅಕ್ಷಯ್ ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನೆಡೆಸಿದ್ದಾರೆ.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಹ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಎಂ.ಜಿ ರಸ್ತೆಯಲ್ಲಿ ಆತಂಕ ಉಂಟಾಗಿದೆ.












Click it and Unblock the Notifications