Get Updates
Get notified of breaking news, exclusive insights, and must-see stories!

ಹಸಿರು ಹೊದಿಕೆ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ವೀಕ್ಷಣೆಗೆ ಸಜ್ಜಾದ ಕೀಟ-ವಸ್ತು ಸಂಗ್ರಹಾಲಯದ ಮಹತ್ವ ತಿಳಿಯಿರಿ

Poornachandra Tejaswi: ಕನ್ನಡದ ಶ್ರೇಷ್ಠ ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳ ಸಾಕಾರಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕೀಟ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಸಜ್ಜಾಗಿದ್ದು, ಜ್ಞಾನಾಸಕ್ತರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.

ಕೀಟಗಳ ಮಹತ್ವ ಸಾರುವ ಕೀಟ ಸಂಗ್ರಹಾಲಯ: ಮಲೆನಾಡು ಭಾಗದಲ್ಲಿ ಕಂಡುಬರುವ ನೂರಾರು ಅಪೂರ್ವ ಕೀಟಗಳ ಸಂಗ್ರಹಾಲಯವೂ ಕೀಟ ಲೋಕದ ದರ್ಶನಕ್ಕೆ ಸಜ್ಜಾಗಿದ್ದು, ನೈಜ ಕೀಟಗಳ ಜೊತೆಗೆ ಕೀಟಗಳಿಗೆ ಸಂಬಂಧಿಸಿದ ಮಾಹಿತಿಗಳು ಇಲ್ಲಿ ಸಿಗಲಿವೆ. ತೇಜಸ್ವಿ ಅವರು ಬರೆದ ಕೀಟಗಳ ಕುರಿತ ಸಾಲುಗಳನ್ನು ಈ ಸಂಗ್ರಹಾಲಯದಲ್ಲಿ ಹಾಕಲಾಗಿದ್ದು, ಕೀಟಗಳ ಬಗ್ಗೆ ಕುತೂಹಲ ಮೂಡಿಸಿ ಅವುಗಳ ಮಹತ್ವವನ್ನು ಸಾರಿ ಹೇಳಲು ಸಂಗ್ರಹಾಲಯ ಸಜ್ಜಾಗಿದೆ.

Do you know about Poornachandra Tejaswi pratishtana s Insect amp amp Museum specialty

ನುರಿತ ಕೀಟ ಶಾಸ್ತ್ರಜ್ಞರ ತಂಡದ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಕೀಟ ಸಂಗ್ರಹಾಲಯವನ್ನು ಮಾಡಲಾಗಿದ್ದು, ಇದು ಕೀಟ ಜಗತ್ತಿನ ವಿಸ್ಮಯವನ್ನು ತೆರೆದಿಡಲಿದೆ. ಸಾಮಾನ್ಯವಾಗಿ ಕಾಣಸಿಗುವ ಏರೋಪ್ಲೇನ್ ಚಿಟ್ಟೆ, ಹೆಲಿಕ್ಯಾಪ್ಟರ್ ಚಿಟ್ಟೆ, ಜಿರಳೆಗಳು, ಕಣಜಗಳು, ಜೇನುಹುಳು, ವಿವಿಧ ಪತಂಗಗಳು, ಚಿಟ್ಟೆಗಳು, ಜೀರುಂಡೆಗಳ ಜೊತೆಗೆ ಅಪರೂಪವಾಗಿ ಕಾಣ ಸಿಗುವ ಎಲೆ ಹುಳು, ಕಡ್ಡಿ ಹುಳು, ಬಿಸಿಲು ಕುದುರೆ, ವಿವಿಧ ಮಿಡತೆಗಳು ಕೂಡ ಸಂಗ್ರಹಾಲಯದ ಪ್ರಮುಖ ಆಕರ್ಷಣೆಯಾಗಿವೆ.

ಅಷ್ಟೇ ಅಲ್ಲದೆ, ರಾಜ್ಯದ ಚಿಟ್ಟೆಯಾದ ಸದರ್ನ್ ಬರ್ಡ್ ವಿಂಗ್, ಮಹಾರಾಷ್ಟ್ರದ ಬ್ಲೂ ಮಾರ್ಮನ್ ಚಿಟ್ಟೆ, ಪ್ರಪಂಚದ ಅತ್ಯಂತ ದೊಡ್ಡ ಪತಂಗಗಳಲ್ಲಿ ಒಂದಾದ ಅಟ್ಲಾಸ್ ಪತಂಗ, ಬೆಳದಿಂಗಳ ಪತಂಗಗಳನ್ನು ಕೂಡ ಇಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಜ್ಞಾನಾಸಕ್ತರನ್ನು ಸೆಳೆಯುವ ವಸ್ತು ಸಂಗ್ರಹಾಲಯ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಸಕ್ತಿ, ಹವ್ಯಾಸಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಕ್ಯಾಮರಾ ಬೆಳೆದು ಬಂದ ಹಾದಿಯನ್ನು ಪರಿಚಯಿಸುವ ವಿವಿಧ ಬಗೆಯ ಕ್ಯಾಮರಾಗಳು, 19ನೇ ಶತಮಾನದಿಂದ 21ನೇ ಶತಮಾನದವರೆಗಿನ ವಿವಿಧ ಟೈಪ್ ರೈಟರ್‌ಗಳನ್ನು ಕಾಣಬಹುದಾಗಿದೆ. ಜೊತೆಗೆ ತೇಜಸ್ವಿ ಅವರು ಬಳಸುತ್ತಿದ್ದ ಸ್ಕೂಟರ್‌ನ ಮಾದರಿಯೂ ಕೂಡ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಮಲೆನಾಡಿನ ಕಲೆ, ಸಂಸ್ಕೃತಿ, ಜನಜೀವನವನ್ನು ಬಿಂಬಿಸುವ ವಿವಿಧ ವಸ್ತುಗಳು, ಲೇಖನಿ ಪರಿಕರಗಳು, ಕಾರುಗಳ ಚಿಕ್ಕ ಮಾದರಿಗಳು, ತಾಳೆಗರಿ, ವಿವಿಧ ಕಲಾವಿದರ ಕಲಾಕೃತಿಗಳನ್ನು ನೋಡಬಹುದಾಗಿದೆ. ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಅವರ ನೇತೃತ್ವದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಗತಕಾಲದ ಜನಜೀವನ, ಸಂಸ್ಕೃತಿ, ಕಲೆ, ತಂತ್ರಜ್ಞಾನ ಮುಂತಾದವುಗಳ ಅನಾವರಣಕ್ಕೆ ವಸ್ತು ಸಂಗ್ರಹಾಲಯ ಸಜ್ಜಾಗಿದೆ.

ತೇಜಸ್ವಿ ಕೃತಿಗಳ ಓದಿಗೆ ಗಾಜಿನ ಓದಿನ ಮನೆ: ಸುತ್ತ ಕಣ್ಣು ಹಾಯಿಸಿದಲ್ಲೆಲ್ಲಾ ಗಾಜಿನ ಗೋಡೆಯಿಂದ ಕಾಣುವ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ. ತೇಜಸ್ವಿ ಅವರ ಕೃತಿಗಳನ್ನು ಓದುವ ಅಪೂರ್ವ ಅನುಭವವನ್ನು ನೀಡಲು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಓದಿನ ಗಾಜಿನ ಮನೆಯನ್ನು ನಿರ್ಮಿಸಲಾಗಿದ್ದು, ಪ್ರಶಾಂತವಾದ ಪರಿಸರದಲ್ಲಿ ತೇಜಸ್ವಿ ಅವರ ಕೃತಿಗಳನ್ನು ಓದಬಹುದಾಗಿದೆ. ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ಇದು ಪ್ರಮುಖ ಆಕರ್ಷಣೆಯಾಗಿದೆ.

ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಚಿಟ್ಟೆ ಉದ್ಯಾನವನ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಚಿಟ್ಟೆಗಳನ್ನು ಆಕರ್ಷಿಸಲು ಚಿಟ್ಟೆ ಉದ್ಯಾನವನವನ್ನು ಮಾಡಲಾಗುತ್ತಿದ್ದು, ಉತ್ತರಾಣಿ, ನಾಗಲಿಂಗ ಪುಷ್ಪ, ನೇರಳೆ, ಅತ್ತಿ, ಕಣಗಿಲೆ, ಆರ್ಕಿಡ್ ಸೇರಿದಂತೆ ನೂರಾರು ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳನ್ನು ನೆಡಲಾಗುತ್ತಿದೆ. ಇದರಿಂದಾಗಿ ಕೀಟ ಸಂಗ್ರಹಾಲಯಕ್ಕೆ ಆಗಮಿಸುವ ವೀಕ್ಷಕರು ತೇಜಸ್ವಿ ಪ್ರತಿಷ್ಠಾನದ ಆವರಣದ ಈ ಉದ್ಯಾನವನದಲ್ಲಿ ಚಿಟ್ಟೆಗಳನ್ನು ವೀಕ್ಷಣೆ ಮಾಡಹುದಾಗಿದೆ.

ಅಲ್ಲದೇ ತೇಜಸ್ವಿ ಪ್ರತಿಷ್ಠಾನದ ಮುಂಭಾಗದಲ್ಲಿ ನಿರ್ಮಾಣವಾಗಿರುವ ಉದ್ಯಾನವನದ ಕಾಲುದಾರಿಯಲ್ಲಿ ಸಾಗಿ ರಾಣಿಝರಿ, ಜಲಪಾತ ಮುಂತಾದ ಕಲಾಕೃತಿಗಳನ್ನು ವೀಕ್ಷಿಸುತ್ತಾ ಹುಲ್ಲುಹಾಸು, ನೀರಿನ ಕಾರಂಜಿ, ಸಸ್ಯ ವೈವಿಧ್ಯದ ನಡುವೆ ಕೆಲಹೊತ್ತು ಕಾಲ ಕಳೆಯಬಹುದಾಗಿದೆ.

ಆರ್ಕಿಡೇರಿಯಂ ನಿರ್ಮಾಣಕ್ಕೆ ಚಿಂತನೆ: ಪಶ್ಚಿಮ ಘಟ್ಟಗಳಲ್ಲಿ ಕಾಣ ಗುವ ಆರ್ಕಿಡ್ ಸಸ್ಯಗಳ ಆರ್ಕಿಡೇರಿಯಂ ನಿರ್ಮಿಸಲು ಉದ್ದೇಶಿಸಲಾಗಿದೆ. ಅಪರೂಪದ ವಿನಾಶದ ಅಂಚಿನಲ್ಲಿರುವ ನಿಸರ್ಗದ ಜೀವಜಾಲದ ಅಮೂಲ್ಯ ಕೊಂಡಿಗಳೆನಿಸಿರುವ ಆರ್ಕಿಡ್ ಪ್ರಭೇದಗಳನ್ನು ಸಂರಕ್ಷಿಸುವ ಆರ್ಕಿಡ್‌ಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಆರ್ಕಿಡೇರಿಯಂ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

"ಕೀಟ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಸಜ್ಜಾಗಿದ್ದು, ಕೊನೆಯ ಹಂತದ ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಚಿಟ್ಟೆ ಉದ್ಯಾನವನ ಮತ್ತು ಆರ್ಕಿಡೇರಿಯಂ ನಿರ್ಮಾಣ ಆಗಲಿದೆ. ಮಾನ್ಯ ಜಿಲ್ಲಾಧಿಕಾರಿಗಳನ್ನು ಸರ್ಕಾರವೂ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನೇಮಿಸಿದ್ದು, ಚುನಾವಣೆ ನೀತಿಸಂಹಿತೆ ಮುಗಿದ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ವೇಳೆ ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ನಡೆಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು," ಎಂದು ಸದಸ್ಯ ಕಾರ್ಯದರ್ಶಿಗಳು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಕೊಟ್ಟಿಗೆಹಾರ ಮತ್ತು ಸಹಾಯಕ ನಿರ್ದೇಶಕರು ಡಾ.ಸಿ ರಮೇಶ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+