ಮಳೆಗಾಗಿ ಕಿಗ್ಗಾದಲ್ಲಿ ಪರ್ಜನ್ಯ ಹೋಮ ನಡೆಸಿದ ಡಿ.ಕೆ.ಶಿವಕುಮಾರ್
Recommended Video
ಚಿಕ್ಕಮಗಳೂರು, ಜೂನ್ 6: ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಲಿ ಎಂದು ಬುಧವಾರ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಡಿ.ಕೆ. ಶಿವಕುಮಾರ್, ಗುರುವಾರ ಶೃಂಗೇರಿಯ ಕಿಗ್ಗಾ ಋಷ್ಯಶೃಂಗ ದೇವಾಲಯಕ್ಕೆ ಭೇಟಿ ಕೊಟ್ಟು ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ, ಡಿ.ಕೆ.ಶಿವಕುಮಾರ್, ಪಿ.ಟಿ ಪರಮೇಶ್ವರ್ ನಾಯ್ಕ್ ನೇತೃತ್ವದಲ್ಲಿ ಪರ್ಜನ್ಯ ಹೋಮ, ಜಪ ನಡೆಯಿತು.
ಬೆಳಿಗ್ಗೆ 5.30 ಕ್ಕೆ ಪರ್ಜನ್ಯ ಹೋಮ ಆರಂಭವಾಗಿದ್ದು, 20ಕ್ಕೂ ಹೆಚ್ಚು ಪುರೋಹಿತರು ಪೂಜೆ ನಡೆಸಿಕೊಟ್ಟರು. ದೇವಾಲಯಕ್ಕೆ ಆಗಮಿಸಿದ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರಿಂದ ಮಳೆ ದೇವರು ಋಷ್ಯಶೃಂಗನಿಗೆ ಪೂಜೆ ಸಲ್ಲಿಸಲಾಯಿತು. ಸತತ ಎರಡು ಗಂಟೆ 30 ನಿಮಿಷ ಪರ್ಜನ್ಯ ಜಪ ನಡೆದಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನರಿಂದ ಪರ್ಜನ್ಯ ಜಪ ನಡೆಯಿತು.

ಬಳಿಕ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, 'ಇದು ವಿಶೇಷವಾದ ಪುಣ್ಯಕ್ಷೇತ್ರ. ಋಷ್ಯಶೃಂಗೇಶ್ವರನ ಮೊರೆ ಹೋದರೆ ಮಳೆ ಆಗುತ್ತೆ ಅನ್ನೋ ನಂಬಿಕೆ ನಮ್ಮದು. ಶ್ರಮ ಇದ್ರೆ ಫಲ ಇರುತ್ತೆ. ಪೂಜೆಯಿಂದ ಈ ವರ್ಷ ಉತ್ತಮ ಮಳೆ ಆಗುತ್ತೆ ಅನ್ನೋ ನಂಬಿಕೆ ನನಗಿದೆ. ರಾಜ್ಯಕ್ಕೆ ಉತ್ತಮ ಮಳೆಯಾಗಿ ರಾಜ್ಯದ ಜನ ಬರದಿಂದ ದೂರ ಉಳಿಯುತ್ತಾರೆ. ಋಷ್ಯಶೃಂಗೇಶ್ವರ, ಶಾರದಾಂಬೆ, ಶಾಂತಾದೇವಿ ಬಳಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇನೆ. ಸರ್ಕಾರದ ವತಿಯಿಂದ ಈ ಪೂಜೆ ನಡೆಸಲಾಗಿದೆ' ಎಂದು ಹೇಳಿದರು.












Click it and Unblock the Notifications