ತನ್ನ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದ್ದು ಸಿದ್ದರಾಮಯ್ಯ: ಸಿ.ಟಿ. ರವಿ
ಚಿಕ್ಕಮಗಳೂರು, ಜನವರಿ, 20: ತನ್ನ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದ್ದು ಸಿದ್ಧರಾಮಯ್ಯನವರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಲ್ಲ. ಸಿದ್ದರಾಮಯ್ಯನವರು ಯಾವ ರೀತಿ ನ್ಯಾಯ ಬಯಸುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಆಕ್ರೋಶ ಹೊರಹಾಕಿದರು.
ಸಾವಿರಾರು ಕೋಟಿ ಹಗರಣ
ಗುರುವಾರ ನಗರದಲ್ಲಿ ಸಿದ್ಧರಾಮಯ್ಯನವರ ಟ್ವಿಟ್‍ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಸೋಲಿಸಿದವರನ್ನು ಸೋಲಿಸಿ ನ್ಯಾಯಕೊಡಿ ಎಂದು ಪರಮೇಶ್ವರ್ ಕೇಳಬೇಕು. ನ್ಯಾಯ ಬೇಕೆಂದು ಕೇಳಬೇಕಿರುವುದು ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಸಿದ್ಧರಾಮಯ್ಯನವರು ಅಲ್ಲ ಎಂದರು. ಹಾಗೆಯೇ ಅಧಿಕಾರ ಇದ್ದರೇ ಇರುತ್ತೇನೆ, ಇಲ್ಲ ಬೇರೆ ಪಕ್ಷಕ್ಕೆ ಹೊಗುತ್ತೇನೆ ಅನ್ನುವವರು ಮೋದಿ ಅಲ್ಲ. ಎಸ್‍ಡಿಪಿಐ, ಪಿಎಫ್‍ಐ ಮೇಲಿನ ಕೇಸ್‍ಗಳನ್ನು ಹಿಂಪಡೆದು ಸರಣಿ ಕೊಲೆಗೆ ಕಾರಣವಾಗಿದ್ದು, ಸಿದ್ದರಾಮಯ್ಯನವರು. ಅದಕ್ಕೆ ನ್ಯಾಯ ಕೊಟ್ಟಿದ್ದಾರೆ. ರಿಡ್ಯೂ ಹೆಸರಿನಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಕ್ಕೆ ಜನರು ನ್ಯಾಯಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ಸಮಾಜವಾದಿ ಹೆಸರಿನಲ್ಲಿ ಮಜಾವಾದಿ ರಾಜಕಾರಣ ಮಾಡಿದ್ದು, ಜನ ನ್ಯಾಯ ದೊರಕಿಸುವ ಮೂಲಕ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರು ದೇಶದಲ್ಲಿನ ಬಡವರಿಗೆ, ದಲಿತರಿಗೆ ಮಹಿಳೆಯರಿಗೆ ನ್ಯಾಯ ಒದಗಿಸಲು ಸದಾ ಮುಂದೆ ಇದ್ದಾರೆ ಎಂದರು.

ತೇಜಸ್ವಿ ಸೂರ್ಯ ಪರ ಅಣ್ಣಾಮಲೈ ಬ್ಯಾಟಿಂಗ್
ಇನ್ನು ಸಂಸದ ತೇಜಸ್ವಿ ಸೂರ್ಯ ಅವರು ಬುದ್ಧಿವಂತ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವವರು. ಅವರು ವಿಮಾನದ ತರ್ತು ಬಾಗಿಲು ಓಪನ್ ತೆರೆದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸರ್ಮರ್ಥಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಮುಖಂಡರು ಸಣ್ಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರು ವಿಮಾನದ ಎಮರ್ಜೆಸ್ಸಿ ಡೋರ್ ತೆರೆದಿದ್ದಾರೆಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದದ್ದು. ಅವರು ಪ್ರಯಾಣಿಸುತ್ತಿದ್ದ ಎಟಿಆರ್ 72 ವಿಮಾನ ಸಣ್ಣ ವಿಮಾನವಾಗಿದ್ದು, ಸಣ್ಣ ಫ್ಲೈಟ್‌ನಲ್ಲಿ ಎಮರ್ಜೆಸ್ಸಿ ಡೋರ್ ವಿಮಾನದ ಮುಂಭಾಗದಲ್ಲಿರುತ್ತದೆ. ಸೀಟುಗಳು ಸಣ್ಣದಿರುತ್ತದೆ. ಅವರು ಎಮರ್ಜೆಸ್ಸಿ ಡೋರ್ ಮೇಲೆ ಕೈ ಇಟ್ಟುಕೊಂಡು ಕುಳಿತಿದ್ದರಿಂದ ಡೋರ್ ಸ್ವಲ್ಪ ಮುಂದಕ್ಕೆ ಬಂದಿತ್ತು. ಡೋರ್‌ನ ಬ್ಲೀಡಿಂಗ್ ಸ್ವಲ್ಪ ಓಪನ್ ಆಗಿದ್ದರಿಂದ ವಿಮಾನ ಸಿಬ್ಬಂದಿಯ ಗಮನಕ್ಕೆ ತಂದು ಇನ್ಸಿಡೆಂಟ್ ರಿಪೋರ್ಟ್ ನೀಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications