ಅರಸೀಕೆರೆ: ಸಿಲಿಂಡರ್ ಸ್ಫೋಟದಿಂದ ಧಗಧಗಿಸಿದ ಮೂರು ಮನೆಗಳು
ಹಾಸನ, ಅಕ್ಟೋಬರ್, 06: ಸಿಲಿಂಡರ್ ಸ್ಫೋಟವಾಗಿ ಮೂರು ಮನೆಗಳು ಹೊತ್ತಿ ಉರಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಸೊಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಚನ್ನಬಸವಯ್ಯ ಎಂಬುವವರ ಮನೆಯಲ್ಲಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ನಂತರ ಅಕ್ಕಪಕ್ಕದ ರಾಮಣ್ಣ, ರೇಣುಕಪ್ಪ ಎಂಬುವರ ಮನೆಗಳಿಗೂ ಬೆಂಕಿ ವ್ಯಾಪಿಸಿದ್ದು, ಮನೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸ್ಥಳೀಯರ ಮಾಹಿತಿ ಆಧಾರದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
8 ಮನೆಗಳು ಭಸ್ಮ
ಇನ್ನು ಇತ್ತೀಚೆಗಷ್ಟೇ ಸಿಲಿಂಡರ್ ಸ್ಫೋಟಗೊಂಡು 8 ಮನೆಗಳು ಭಸ್ಮವಾಗಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಅನಂತಪುರದ ಬಳಿ ನಡೆದಿತ್ತು. ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಿಲಿಂಡರ್ ಸ್ಪೋಟದ ತೀವ್ರತೆಗೆ 8 ಶೀಟ್ ಮನೆಗಳು ಭಸ್ಮವಾಗಿದ್ದು, ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಸ್ಥಳೀಯರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನದಿಸುವ ಕಾರ್ಯವನ್ನು ಮಾಡಿದ್ದರು.
ಬೆಂಗಳೂರಿನ ವಿನಾಯಕ ಸಿನೆಮಾ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದ್ದು, ಚಾಮರಾಜಪೇಟೆ ಆನಂದಪುರ ಬಳಿ 8 ಮನೆಗಳ ಶೀಟ್‌ಗಳು ಬೆಂಕಿಯಲ್ಲಿ ಭಸ್ಮವಾಗಿದ್ದವು. ಈ ಅವಘಡದಲ್ಲಿ ಗೋಧಾಮು ಸೇರಿದಂತೆ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದ್ದು, ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕನ್ನಡ ನ್ಯೂಸ್ ವರದಿ ಮಾಡಿತ್ತು.
ವಿನಾಯಕ ಸಿನಿಮಾ ಥಿಯೇಟರ್ ಎದುರುಗಡೆ ಇರುವ ಗೋದಾಮಿಗೆ ಬೆಂಕಿ ತಲುಗಿದ ಹಿನ್ನೆಲೆ ಸಿಲಿಂಡರ್‌ಗಳು ಬ್ಲಾಸ್ಟ್ ಆಗಿರಬಹುದು ಎಂದು ಶಂಕಿಸಲಾಗಿತ್ತು. ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳ ಗೋದಾಮಿಗೆ ಬೆಂಕಿ ತಗುಲಿದ್ದು, ಬೆಂಕಿ ತಗಲುತ್ತಿದ್ದಂತೆ ಅದರ ಪಕ್ಕದಲ್ಲಿರುವ ಸುಮಾರು 8 ಶೀಟ್ ಮನೆಗಳಿಗೂ ಬೆಂಕಿ ಆವರಿಸಿದೆ ಎನ್ನಲಾಗಿತ್ತು.












Click it and Unblock the Notifications