ಕಾಫಿ ಎಸ್ಟೇಟಿನ ಕಾರ್ಮಿಕರ ಬಗ್ಗೆ ಎಚ್ಡಿಕೆ ಟ್ವೀಟ್, ರವಿ ತಿರುಗೇಟು

ಚಿಕ್ಕಮಗಳೂರು, ಜನವರಿ 07: ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪರ ವಿರೋಧ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಸಿಎಎ, ಎನ್ ಆರ್ ಸಿ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ವಿಪಕ್ಷಗಳು ತಿರುಗೇಟು ನೀಡುತ್ತಾ ಬಂದಿವೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿಕೊಂಡು ನೀಡಿರುವ ಹೇಳಿಕೆ ಬಗ್ಗೆ ಟ್ವಿಟ್ಟರಲ್ಲಿ ಚರ್ಚೆ ನಡೆದಿದೆ.

CT Ravi reaction to HD Kumaraswamy tweet on Bangladeshi workers

ಸಿದ್ದರಾಮಯ್ಯ, ಸಿಟಿ ರವಿ ಬ್ಯಾಲೆಟ್-ಬುಲೆಟ್ ಟ್ವಿಟ್ಟರ್ ವಾರ್

"ಬಾಂಗ್ಲಾದವರು ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿದ್ದಾರೆ. ಅವರನ್ನು ಖಾಲಿ ಮಾಡಿಸಿದರೆ ಅಲ್ಲಿ ಕೆಲಸ ಮಾಡುವವರು ಯಾರು?" ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಮುಖಂಡ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಗಮನಿಸಿರಬಹುದು. ಅವರ ಮಾತಿನ ಪ್ರಕಾರ ಹೋಗುವುದಾದರೆ, ಈ ಉದ್ಯೋಗ ಕನ್ನಡಿಗರಿಗೆ ಲಭ್ಯವಾಗಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಉದ್ಯೋಗ ಖಾತ್ರಿಯಾಗಲು ಎನ್ ಆರ್ ಸಿ ಅಗತ್ಯವಿಲ್ಲವೇ? ಇದರಿಂದ ಅಕ್ರಮ ವಲಸಿಗರನ್ನು ಗುರುತಿಸಿ ಹೊರಗಟ್ಟಬಹುದಲ್ಲವೇ? ಎಂದಿದ್ದಾರೆ. ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+