ಸಿದ್ದರಾಮಯ್ಯ, ಸಿಟಿ ರವಿ ಬ್ಯಾಲೆಟ್-ಬುಲೆಟ್ ಟ್ವಿಟ್ಟರ್ ವಾರ್
ಬೆಂಗಳೂರು, ಜನವರಿ 7: ನಿಮಗೆ ಬ್ಯಾಲೆಟ್ ಮೇಲೆ ನಂಬಿಕೆ ಇದೆಯೋ ಅಥವಾ ಬುಲೆಟ್ ಮೇಲ್ ನಂಬಿಕೆ ಇದೆಯೋ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಸಚಿವ ಸಿ.ಟಿ.ರವಿ ನಿರ್ಧಾರ ಕನ್ನಡ ನಾಡು-ನುಡಿಗೆ ಬಗೆದ ದ್ರೋಹವಾಗಿದೆ.
ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆಯನ್ನು ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಟಿ ರವಿ ಕಾನೂನು ಸುವ್ಯವಸ್ಥೆ ನಿರ್ವಹಿಸಬೇಕಾದ ಹೊಣೆಗಾರಿಕೆ ವಿರೋಧ ಪಕ್ಷದವರದ್ದಲ್ಲ, ನಿಮ್ಮದೇ 20-20 ಸರಕಾರ ರಾಜ್ಯೋತ್ಸವ ಪ್ರಶಸ್ತಿ ನಿಲ್ಲಿಸಿತ್ತು.

ನಕ್ಸಲರು ಪ್ರಜಾಪ್ರಭುತ್ವವಾದಿಗಳಾ? ನಕ್ಸಲರು ಅಂಬೇಡ್ಕರ್ ರವರ ಸಂವಿಧಾನವನ್ನು ಒಪ್ಪಿಕೊಂಡಿರುವವರಾ? ನಕ್ಸಲರನ್ನು ಬೆಂಬಲಿಸುವವರು ಪ್ರಜಾಪ್ರಭುತ್ವವಾದಿಗಳೇ? ಅವರಿಗೆ ಬೆಂಬಲಿಸುವವರೆಲ್ಲಾ ನಿಮ್ಮ ಆತ್ಮೀಯರಾ? ಅವರನ್ನು ಬೆಂಬಲಿಸುವ ನೀವು ಯಾವ ಪ್ರಜಾಪ್ರಭುತ್ವವಾದಿಗಳು ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications