ರಂಗೇನಹಳ್ಳಿ: ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ: ಸ್ಟೇಟಸ್‌ ಹಾಕಿದ್ದ ಬಜರಂಗದಳ ಕಾರ್ಯಕರ್ತನಿಗೆ ಗೂಸಾ

ಚಿಕ್ಕಮಗಳೂರು, ಮೇ, 11: ನಿನ್ನೆಯಷ್ಟೇ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ನಡೆದಿದ್ದು, ಈ ವೇಳೆ ಹಲವು ಕ್ಷೇತ್ರಗಳ ಮತಗಟ್ಟೆಗಳ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಗಲಾಟೆಗಳು ನಡೆದವು. ಅದೇ ರೀತಿ ರಂಗೇನಹಳ್ಳಿಯಲ್ಲಿ ಮತದಾನ ಮಾಡಿದ ತಕ್ಷಣ ಬಜರಂಗದಳ ಕಾರ್ಯಕರ್ತನೊಬ್ಬ ಯಾರ ಹೆಂಡತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ತರೀಕೆರೆ ತಾಲೂಕಿನ ರಂಗೇನಹಳ್ಳಿಯ ಗ್ರಾಮದ ನಿವಾಸಿಯಾದ ಹಾಗೂ ಭಜರಂಗದಳ ಕಾರ್ಯಕರ್ತ ಕಾರ್ತಿಕ್ ಎಂಬಾತ ತನ್ನ ವ್ಯಾಟ್ಸಪ್‌ ಸ್ಟೇಟಸ್‌ನಲ್ಲಿ ಯಾರ ಹೆಂಡತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದೀಗ ಇದೇ ವ್ಯಾಟ್ಸಪ್‌ ಸ್ಟೇಟಸ್ ಕಾಂಗ್ರೆಸ್ಸಿಗರನ್ನು ನಿದ್ದೆಗೆಡುವಂತೆ ಮಾಡಿದೆ. ಅಲ್ಲದೆ ಜನಾಕ್ರೋಶಕ್ಕೂ ಕಾರಣವಾಗಿದೆ.

chikkamagaluru

ಅಲ್ಲದೆ ಈ ಸ್ಟೇಟಸ್ ನೋಡಿ ರೊಚ್ಚಿಗೆದ್ದ ಸ್ಥಳೀಯರು ರಾತ್ರೋ ರಾತ್ರಿ ಲಕ್ಕವಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ಮತ್ತೊಂದೆಡೆ ಈ ರೀತಿ ವಿವಾದಾತ್ಮಕ ವ್ಯಾಟ್ಸಪ್‌ ಸ್ಟೇಟಸ್‌ ಹಾಕೊಕೊಂಡ ಕಾರ್ತಿಕ್ ಬಂಧನಕ್ಕಾಗಿ ಮುಸ್ಲಿಂ ಸಂಘಟನೆಗಳು ಒತ್ತಾಯ ಮಾಡಿವೆ.

ಒಟ್ಟಿನಲ್ಲಿ ಹೇಳುವುದಾದರೆ ನಮ್ಮದು ಮೊದಲೇ ಪ್ರಜಾಪ್ರಭುತ್ವ ರಾಷ್ಟ್ರ ಆಗಿದೆ. ಅದರಲ್ಲೂ ಹೆಣ್ಣು ಮಕ್ಕಳನ್ನು ಅತೀ ಹೆಚ್ಚಾಗಿ ಗೌರವದಿಂದ ಕಾಣುವ ರಾಷ್ಟ್ರ ನಮ್ಮದು. ಆದರೆ ಇಂತಹ ಕೆಲ ಬುದ್ಧಿಗೇಡಿಗಳಿಂದ ಎಲ್ಲೋ ಒಂದು ಕಡೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದೆಂದರೆ ಪೊಲೀಸರು ಇಂತಹ ತಿಳಿಗೇಡಿಗಳನ್ನು ಬಂಧಿಸಬೇಕು ಎಂಬುದು ಜನರ ಒತ್ತಾಯ ಆಗಿದೆ.

ಮತದಾನ ಬಹುಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಒಂದು ವೇಳೆ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದರೆ ಸುಮಾರು ದಾರಿಗಳಿವೆ. ಆದರೆ ಒಂದು ಪಕ್ಷವನ್ನು ಇಟ್ಟುಕೊಂಡು ಅದೇ ಪಕ್ಷಕ್ಕೆ ವೋಟ್‌ ಹಾಕಬೇಕೆಂಬುದು ಯಾವ ರೀತಿಯ ಕಾನೂನು. ಹೀಗೆ ವ್ಯಾಟ್ಸಪ್‌ ಸ್ಟೇಟಸ್‌ಗಳಲ್ಲಿ ಒಂದು ಪಕ್ಷವನ್ನು ಬಿಂಬಿಸುವುದಲ್ಲದೆ, ವಿವಾದಾತ್ಮಕ ಬರಹಗಳನ್ನು ಬರೆಯುವವರಿಗೆ ತಕ್ಕ ಪಾಠ ಕಲಿಸುವುದು ಪೊಲೀಸರ ಕೈಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+