ಕಾಂಗ್ರೆಸ್ ನಾಯಕರ ಮಾನಸಿಕತೆ ತುಂಬಾ ಅಪಾಯಕಾರಿ: ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಆರೋಪ
ಚಿಕ್ಕಮಗಳೂರು, ಡಿಸೆಂಬರ್, 18 : ಇದು ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್ಲ. ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ. ಒಂದೊಂದು ಇಂಚು ಜಾಗಕ್ಕೂ ಸ್ವಾಭಿಮಾನದಿಂದ ಹೋರಾಡುವ ಭಾರತ ಎಂದು ಶಾಸಕ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದರು.
ರಾಹುಲ್ ಗಾಂಧಿ ವಿರುದ್ಧ ಸಿ.ಟಿ. ರವಿ ಆಕ್ರೋಶ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿದ್ದೆಗೆ ಜಾರಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ರಾಹುಲ್ ಗಾಂಧಿಯವರ ಮುತ್ತಾತನ ಕಾಲದ ಭಾರತ ಅಲ್. ಎಚ್ಚರಿಸಿದಾಗಲೂ ಹಿಮದಲ್ಲಿ ಓಡಾಡಲು ಸೈನಿಕರಿಗೆ ಅಗತ್ಯವಿರುವ ಶೂ, ಬಂದೂಕು ಕೊಡದದಿರುವ ಅವರ ಮುತ್ತಾತನ ಕಾಲದ ಭಾರತವಲ್ಲ. ಒಂದೊಂದು ಇಂಚಿಗೂ ಕೂಡ ಸ್ವಾಭಿಮಾನದಿಂದ ಹೋರಾಡುವ ಭಾರತ ಎಂದು ತಿರುಗೇಟು ನೀಡಿದರು. ಮಾನಸಿಕತೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿಯಾಗಿದೆ. ಕುಕ್ಕರ್ ಸ್ಫೋಟಗೊಂಡಿದ್ದು ಸತ್ಯ. ಕುಕ್ಕರ್ ಬಾಂಬ್ ತಯಾರಿಸಿ ಮುಖ್ಯಮಂತ್ರಿಗಳನ್ನು, ಅವರ ಸಭೆಯನ್ನು ಟಾರ್ಗೆಟ್ ಮಾಡಿದ್ದವನೂ ಆಸ್ಪತ್ರೆಯಲ್ಲಿದ್ದಾನೆ. ಬಾಂಬ್ ಇಲ್ಲದಿದ್ದರೆ ಸಾಮಾನ್ಯ ಕುಕ್ಕರ್ ಬ್ಲಾಸ್ಟ್ ಆಗಲು ಸಾದ್ಯವೇ? ಎಂದು ಪ್ರಶ್ನಿಸಿದರು.
ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ
ಇಂತಹ ಸಂದರ್ಭದಲ್ಲಿ ಆರೋಪಿಗಳ ಪರವಾಗಿರುವ ಮಾನಸಿಕತೆಯನ್ನು ಪ್ರದರ್ಶನ ಮಾಡಿದರೆ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗುತ್ತದೆ. ಹೊರಗಿನ ಶತೃಗಳನ್ನು ನಿಗ್ರಹಿಸುವುದು ಬಹಳ ಸುಲಭ ಆದರೆ, ಆಂತರಿಕ ಶತೃಗಳು, ಶತೃಗಳಿಗೆ ಬೆಂಬಲಿಸುವ ಮಾನಸಿಕತೆ ಬಹಳ ಅಪಾಯಕಾರಿ ಆಗಿದೆ.

ಕಾಂಗ್ರೆಸ್ ಅಧ್ಯಕ್ಷರು ಅಂತಹ ಅಪಾಯಕಾರಿ ವರ್ತನೆಯನ್ನು ತೋರಿಸಿದ್ದಾರೆ.ಅವರು ಬೇಷರತ್ ಕ್ಷಮೆಯಾಚಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಮೊಂಡು ಸಮರ್ಥನೆಗಿಳಿದಿರುವುದು ಮತ್ತು ಅವರ ಸಮರ್ಥನೆಗೆ ಉಳಿದವರು ನಿಂತಿರುವುದು, ಇದು ಕಾಂಗ್ರೆಸ್‍ನ ಇಂದಿನ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ ಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಓಲೈಸುವ ಡಿಎನ್‍ಎ ಅನ್ನೇ ಕಾಂಗ್ರೆಸ್ ಪಾಲಿಸುತ್ತಿದೆ. ರಾಹುಲ್ ಗಾಂಧಿ ಹೇಳಿದ್ದನ್ನೇ ಬಿಲಾವಲ್ ಬುಟ್ಟಾ ಹೇಳುವುದು. ಅವರು ಹೇಳಿದ್ದನ್ನೇ ರಾಹುಲ್ ಗಾಂಧಿ ಹೋಳುತ್ತಾರೆ. ಇದು ಬಹು ದೊಡ್ಡ ಅಪಾಯಕಾರಿ ಸಂಗತಿಯಾಗಿದೆ. ಇವರಿಬ್ಬರ ನಡುವಿನ ಹೊಂದಾಣೀಕೆ ಏನೆಂದು ಗೊತ್ತಿಲ್ಲ. ಆದರೆ ಇಬ್ಬರೂ ಕೂಡ ವಂಶ ಪಾರಂಪರ್ಯದ ಕುಡಿಗಳು ಎಂದು ವ್ಯಂಗ್ಯವಾಡಿದರು. ಪಾಕಿಸ್ತಾನದ ಮಾನಸಿಕತೆಯಲ್ಲಿ ಕಾಂಗ್ರೆಸ್ ಮಾತನಾಡುತ್ತಿದೆ.

ಹೀಗೆ ಕಾಂಗ್ರೆಸ್ ಮಾನಸಿಕತೆಯಲ್ಲಿ ಪಾಕಿಸ್ತಾನ ಮಾತನಾಡುತ್ತಿರುವುದನ್ನು ನೋಡಿದರೆ ಯಾವುದಾದರೂ ಒಳ ಒಪ್ಪಂದ ನಡೆದಿದೆಯಾ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ಸಿಗರಿಗೆ ನಮ್ಮ ದೇಶದ ಸೈನಿಕರ ಮೇಲೆ ನಂಬಿಕೆ ಇಲ್ಲ. ನಮ್ಮ ದೇಶದ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದರೆ ಸಾಕ್ಷಿ ಕೇಳುತ್ತಾರೆ. ಆ ಸಾಕ್ಷಿಯನ್ನು ಪಾಕಿಸ್ತಾನ ಬಹಳ ದಿನಗಳ ನಂತರ ಸಂಸತ್‍ನಲ್ಲಿ ಒಪ್ಪಿಕೊಳ್ಳುತ್ತದೆ ಎಂದರು.












Click it and Unblock the Notifications