ಚಿಕ್ಕಮಗಳೂರು; ದಾರಿ ಬಿಡದ ಕೈ ನಾಯಕ, ಸಿಎಂಗೆ ಬಿಜೆಪಿ ಪ್ರಶ್ನೆ
ಚಿಕ್ಕಮಗಳೂರು, ಫೆಬ್ರವರಿ 04: ಅನಾರೋಗ್ಯಕ್ಕೆ ತುತ್ತಾದ ವೃದ್ಧೆಯನ್ನು ಸುಮಾರು 2 ಕಿ. ಮೀ. ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಪಕ್ಕದ ಮನೆಯವರು ವಾಹನ ಬರಲು ದಾರಿ ಬಿಡದ ಕಾರಣ ಮಗ ವೃದ್ಧೆಯನ್ನು ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆಗೆ ಕರ್ನಾಟಕ ಬಿಜೆಪಿ ಪ್ರತಿಕ್ರಿಯೆ ನೀಡಿದೆ.
ವೃದ್ಧೆಯನ್ನು ಆಸ್ಪತ್ರೆ ಗೆ ಸೇರಿಸಲು ಪಕ್ಕದ ಮನೆಯವರು ದಾರಿ ಬಿಡದ ಹಿನ್ನೆಲೆ ಮಗ ಹಾಗೂ ಕುಟುಂಬಸ್ಥರು ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿರುವ ಘಟನೆ ಕಳಸ ತಾಲೂಕಿನ ಹೊರನಾಡು ಸಮೀಪದ ಹೊಸನೆಲ ಗ್ರಾಮದಲ್ಲಿ ನಡೆದಿದೆ.

ಹೊಸನೆಲ ಗ್ರಾಮದಲ್ಲಿ ವಿಶ್ವಸೇನ್ ಎಂಬುವರ ಕುಟುಂಬ ವಾಸವಾಗಿದೆ. ವಿಶ್ವಸೇನ್ ಅವರ ಕುಟುಂಬಕ್ಕೂ ಮತ್ತು ಪಕ್ಕದ ಮನೆಯವರಿಗೂ ಜಾಗದ ವಿಚಾರವಾಗಿ ತಕರಾರು ಇದೆ. ವಿಶ್ವಸೇನ್ ತಮ್ಮ ಮನೆಯ ಮುಂದೆ ಕಿರಿದಾದ ರಸ್ತೆ ಮಾಡಿಕೊಂಡಿದ್ದು, ಇದು ಗ್ರಾಮದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ.
ಈ ಕಿರಿದಾದ ರಸ್ತೆ ಇರುವ ಜಾಗ ಕೂಡ ವಿಶ್ವಸೇನ್ ಅವರಿಗೆ ಸೇರಿದ್ದಾಗಿದೆ. ಹೀಗಾಗಿ ವಿಶ್ವಸೇನ್ ತಮ್ಮ ಜಾಗಕ್ಕೆ ತಂತಿ ಬೇಲಿ ಹಾಕಿಸಿ, ಗೇಟ್ ಅಳವಡಿಸಿದ್ದರು. ಆದರೆ ವಿಶ್ವಸೇನ್ ಪಕ್ಕದ ಮನೆಯವರು ಈ ಜಾಗ ನಮ್ಮದು ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಶ್ವಸೇನ್ ತಾಯಿ ಪದ್ಮಾವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೂಡ ದಾರಿ ಬಿಡದೆ, ಗೇಟ್ ಹಾಕಲಾಗಿದೆ. ಹೀಗಾಗಿ ಕುಟುಂಬಸ್ಥರು ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಗುಡ್ಡಗಾಡು ರಸ್ತೆಯಲ್ಲಿ ಹೊತ್ತೊಯ್ದರು.
ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ರೀತಿ ಸಾರ್ವಜನಿಕ ರಸ್ತೆಯಲ್ಲಿ ಓಡಾಡೋಕೆ ಕಾಂಗ್ರೆಸ್ ಮುಖಂಡನ ಅಪ್ಪಣೆ ಬೇಕಂತೆ!!
— BJP Karnataka (@BJP4Karnataka) February 4, 2024
ಸ"ಮಜಾವಾದಿ" ಸಿಎಂ @siddaramaiah ಅವರೇ, ನೋಡಿ ನಿಮ್ಮ ಶಿಷ್ಯನ ಆಟಾಟೋಪ. ನಿಮ್ಮ ಸರ್ಕಾರಕ್ಕೂ ಮಾನವೀಯತೆ ಇಲ್ಲ, ನಿಮ್ಮ ಶಿಷ್ಯರಿಗೂ ಮಾನವೀಯತೆ ಇಲ್ಲ.
ಈಗಿನ ಕಾಲದಲ್ಲೂ ಅಸ್ವಸ್ಥಗೊಂಡ ವೃದ್ಧೆಯನ್ನು ಒಂದು ಕಿ. ಮೀ.… pic.twitter.com/FGNFjiG6Ys
ಬಿಜೆಪಿ ಪ್ರತಿಕ್ರಿಯೆ; ವಿಶ್ವಸೇನ್ ತಾಯಿ ಆಸ್ಪತ್ರೆಗೆ ಹೋಗಲು ತಕರಾರು ಮಾಡಿದವ ಕಾಂಗ್ರೆಸ್ ಮುಖಂಡ ಎಂದು ಕರ್ನಾಟಕ ಬಿಜೆಪಿ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದೆ.
ಬಿಜೆಪಿ ತನ್ನ ಪೋಸ್ಟ್‌ನಲ್ಲಿ, 'ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ರೀತಿ ಸಾರ್ವಜನಿಕ ರಸ್ತೆಯಲ್ಲಿ ಓಡಾಡೋಕೆ ಕಾಂಗ್ರೆಸ್ ಮುಖಂಡನ ಅಪ್ಪಣೆ ಬೇಕಂತೆ. ಸ"ಮಜಾವಾದಿ" ಸಿಎಂ ಸಿದ್ದರಾಮಯ್ಯ ಅವರೇ, ನೋಡಿ ನಿಮ್ಮ ಶಿಷ್ಯನ ಆಟಾಟೋಪ. ನಿಮ್ಮ ಸರ್ಕಾರಕ್ಕೂ ಮಾನವೀಯತೆ ಇಲ್ಲ, ನಿಮ್ಮ ಶಿಷ್ಯರಿಗೂ ಮಾನವೀಯತೆ ಇಲ್ಲ' ಎಂದು ಆರೋಪಿಸಿದೆ.
'ಈಗಿನ ಕಾಲದಲ್ಲೂ ಅಸ್ವಸ್ಥಗೊಂಡ ವೃದ್ಧೆಯನ್ನು ಒಂದು ಕಿ. ಮೀ. ಹೊತ್ತು ತರುವ ದರಿದ್ರ ಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ ಎಂದರೆ, ಅದು ನಿಮ್ಮ ಲಜ್ಜೆಗೇಡಿ ಅರಾಜಕತೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿ' ಎಂದು ಟೀಕಿಸಿದೆ.
'ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯ ನಡೆಸಿರುವ ಮೂಡಿಗೆರೆಯ ನಿಮ್ಮ ಪಕ್ಷದ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ಬಿಜೆಪಿ ಒತ್ತಾಯಿಸಿದೆ.












Click it and Unblock the Notifications