ಮತ ಎಣಿಕೆ ದಿನದಂದು ಚಿಕ್ಕಮಗಳೂರಿನ ಈ ಕಾಲೇಜು ಸುತ್ತ ವಾಹನ ಸಂಚಾರ ನಿಷೇಧ: ಡಿಸಿ ಆದೇಶ
ಚಿಕ್ಕಮಗಳೂರು, ಮೇ, 09: ಮೇ 10 ರಂದು ವಿಧಾನಸಭೆಗೆ ಚುನವಾಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಿದೆ. ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ಅದೇ ರೀತಿ ಮೇ 13ರಂದು ಚಿಕ್ಕಮಗಳೂರು ನಗರದಲ್ಲಿರುವ ಐಡಿಎಸ್‌ಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಸ್ಥಳದಲ್ಲಿ ಸಾರ್ವಜನಿಕರು ವಾಹನಗಳಲ್ಲಿ ಆಗಮಿಸುವುದರಿಂದ ಅಧಿಕ ಜನಸಂದಣಿ ಏರ್ಪಡಲಿದೆ. ಇದರಿಂದ ಮತ ಎಣಿಕೆಗೆ ಅಡಚಣೆಯಾಗದಂತೆ ಜಿಲ್ಲಾಡಳಿಯ ಸೂಕ್ತ ಕ್ರಮಕ್ಕೆ ಮುದಾಗಿದೆ.
ಸುಗಮ ವಾಹನ ಸಂಚಾರದ ದೃಷ್ಠಿಯಿಂದ ಬೈಪಾಸ್ ರಸ್ತೆಯಲ್ಲಿ ಎಐಟಿ ಸರ್ಕಲ್‌ನಿಂದ ನರಿಗುಡ್ಡನಹಳ್ಳಿವರೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ, ಸದರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡದಂತೆ ಸೂಚಿಸಲಾಗಿದೆ. ಅಲ್ಲದೆ ಐಡಿಎಸ್‌ಜಿ ಕಾಲೇಜಿನಿಂದ ದಂಟರಮಕ್ಕಿ ಸರ್ಕಲ್‌ವರೆಗಿನ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡದಂತೆ, ವಾಹನಗಳನ್ನು ನಿಲುಗಡೆ ಮಾಡಲು ಸ್ಥಳವನ್ನು ಗುರುತಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಮೇ 13 ರ ಬೆಳಗ್ಗೆ 6 ಗಂಟೆಯಿಂದ ಸಂಜೆ 9 ಗಂಟೆಯವರೆಗೆ ಸಂಚಾರವನ್ನು ನಿಷೇಧಿಸಬೇಕಾಗಿರುವ ಮಾರ್ಗಗಳ ವಿವರ ಇಲ್ಲಿದೆ. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 9 ಗಂಟೆಯವರೆಗೆ ಬೈಪಾಸ್ ರಸ್ತೆಯಲ್ಲಿ ಎ.ಐ.ಟಿ. ಸರ್ಕಲ್‌ನಿಂದ ನರಿಗುಡ್ಡನಹಳ್ಳಿ, ಹಾಸನ ಹಾಗೂ ಹಿರೇಮಗಳೂರು ಕಡೆಯಿಂದ ಬರುವ ಹಾಗೂ ಕಡೂರು ಕಡೆಗೆ ಹೋಗುವ ವಾಹನಗಳಿಗೆ ನರಿಗುಡ್ಡನಹಳ್ಳಿ ಸರ್ಕಲ್‌ನಿಂದ ದಂಟರಮಕ್ಕಿ ಸರ್ಕಲ್ ಮೂಲಕ ಕೆ.ಎಂ. ರಸ್ತೆಯಲ್ಲಿ ಸಂಚರಿಸುವಂತೆ, ಬದಲಿ ರಸ್ತೆಯನ್ನು ಕಲ್ಪಿಸಲಾಗುವುದು.
ಕಡೂರು ಕಡೆಯಿಂದ ಹಿರೇಮಗಳೂರು ಕಡೆಗೆ ಹೋಗುವವರು ಅಂಬೇಡ್ಕರ್ ರಸ್ತೆ ಮತ್ತು ಎಂ.ಜಿ. ರಸ್ತೆ ಮೂಲಕ ಹೋಗಬಹುದಾಗಿದೆ. ಬೈಪಾಸ್ ರಸ್ತೆ ಎ.ಐ.ಟಿ. ಸರ್ಕಲ್‌ನಿಂದ ನರಿಗುಡ್ಡೇನಹಳ್ಳಿವರೆಗೆ, ಕೆ.ಎಂ.ರಸ್ತೆ, ಎಐಟಿ ಸರ್ಕಲ್‌ನಿಂದ ದಂಟರಮಕ್ಕಿ ಸರ್ಕಲ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಿದೆ.
ಪಾರ್ಕಿಂಗ್ ಸ್ಥಳಗಳ ವಿವರ
ಇನ್ನು ಎಂಎಲ್‌ಎಂ ಎನ್ ಶಾಲಾ ಆವರಣ, ಒಕ್ಕಲಿಗರ ಸಂಘದ ಜಾಗ, ತರಳಬಾಳು ಸಮುದಾಯ ಭವನ ಪಾರ್ಕಿಂಗ್ ಸ್ಥಳಗಳಾಗಿವೆ. ಮತ ಎಣಿಕೆ ಕಾರ್ಯವನ್ನು ಯಾವುದೇ ಅಡಚಣೆಯಿಲ್ಲದೆ ಸುಲಲಿತವಾಗಿ ನಡೆಸುವ ದೃಷ್ಠಿಯಿಂದ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ಸ್ಥಳಗಳಲ್ಲಿ ವಾಹನಗಳ ಸಂಚಾರ, ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications