Get Updates
Get notified of breaking news, exclusive insights, and must-see stories!

ದುರಸ್ಥಿಯಲ್ಲಿರುವ ಮೋಟಾರ್ ಪಂಪು, ಹಣ ದುರ್ಬಳಕೆ : ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು, ಡಿಸೆಂಬರ್‌ 31 : ನಗರದ ಜನತೆಗೆ ನೀರೂಣಿಸುವ ಬೇಲೂರು ಪಂಪ್‌ಹೌಸ್‌ ಹಾಗೂ ಮುಗುಳುವಳ್ಳಿ ನೀರು ಸರಬರಾಜು ಮಧ್ಯಂತರ ರೇಚಕ ಸ್ಥಾವರದ ಕೇಂದ್ರದಲ್ಲಿ ಒಂದೇ ಮೋಟಾರ್ ಪಂಪು ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಸಾರ್ವಜನಿಕರಿಗೆ ತಿಂಗಳಲ್ಲಿ ಹಲವಾರು ದಿನಗಳು ನೀರು ವ್ಯತ್ಯಯವಾಗಿ ಕಿರಿಕಿರಿಯುಂಟಾಗುತ್ತಿದೆ ಎಂದು ನಗರಸಭಾ ಜೆಡಿಎಸ್ ಸದಸ್ಯರು ಆರೋಪಿಸಿದರು.

ಈ ಸಂಬಂಧ ಮುಗುಳುವಳ್ಳಿ ಹಾಗೂ ಬೇಲೂರು ಪಂಪ್‍ಹೌಸ್‌ಗಳಿಗೆ ಭೇಟಿ ನೀಡಿದ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಹಾಗೂ ಗೋಪಿ, ನೀರು ಸರಬರಾಜು ಸ್ಥಾವರಗಳಲ್ಲಿ ಎರಡು ಮೋಟಾರ್‍ಗಳಿದ್ದರೂ ಸಹ ಒಂದೇ ಮೋಟಾರ್ ದಿನವಿಡೀ ಚಲಿಸುತ್ತಿದ್ದು ನಿಗಧಿತ ಸಮಯಕ್ಕಿಂತ ಹೆಚ್ಚು ಒಂದೇ ಮೋಟಾರ್ ಪಂಪು ಚಲಿಸುತ್ತಿರುವುದರಿಂದ ಲಕ್ಷಾಂತರ ಮೌಲ್ಯದ ಮೋಟಾರ್ ಪಂಪುಗಳು ಹಾಳಾಗುವು ದಲ್ಲದೇ ದುರಸ್ಥಿ ಬಂದಾಗ ಜನತೆಗೆ ನೀರು ವ್ಯತ್ಯಯವಾಗಲಿದೆ ಎಂದು ತಿಳಿಸಿದರು.

ಮುಗುಳುವಳ್ಳಿ ಹಾಗೂ ಬೇಲೂರು ಪಂಪ್‌ಹೌಸ್‌ ಅನ್ನು ನೀರು ಸರಬರಾಜು ಸ್ಥಾವರಗಳಲ್ಲಿ ಕಾರ್ಯ ನಿರ್ವಹಿಸುವ ಒಂದು ಮೋಟಾರ್ ಪಂಪುಗಳು ಕನಿಷ್ಟ 10-12 ಗಂಟೆಗಳ ಕಾಲ ಚಾಲನೆಯಲ್ಲಿರಬೇಕು. ನಂತರ ರಾತ್ರಿಪಾಳಯದಲ್ಲಿ ಮತ್ತೊಂದು ಮೋಟಾರ್ ಆರಂಭಿಸಲು ನಿಯಮಗಳಿದ್ದರೂ ಸಹ ಸ್ಥಳೀಯ ಆಪರೇಟರ್‌ಗಳು ನಿಯಮಗಳನ್ನು ಪಾಲಿಸದೇ ಅಸಡ್ಡೆ ತೋರುತ್ತಿದ್ದಾರೆ ಎಂದು ಹೇಳಿದರು.

Chikkamagaluru Belur Pump House Mattendance Problem

ಆದರೆ ಇತ್ತೀಚೆಗೆ ಒಂದು ತಿಂಗಳ ಹಿಂದೆಯೇ ಮುಗುಳುವಳ್ಳಿ ಹಾಗೂ ಬೇಲೂರು ಪಂಪ್‍ಹೌಸ್‍ನ 2ನೇ ಮೋಟಾರ್ ಪಂಪು ದುರಸ್ಥಿಯಲ್ಲಿದ್ದು, ಇದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸದೇ ಆಪರೇಟರ್‌ಗಳಿಗೆ ಒಂದೇ ಮೋಟಾರ್ ಪಂಪಿನಿಂದ ಚಲಾಯಿಸಿ ಎಂದು ಹೇಳಿದ್ದು ಮೋಟಾರ್ ಅತಿಯಾಗಿ ಚಲಿಸಿ ದುರಸ್ಥಿಗೊಂಡಾಗ ನಗರದ ಜನತೆಗೆ ತಿಂಗಳಲ್ಲಿ ಹಲವಾರು ದಿನಗಳು ನೀರು ವ್ಯತ್ಯಯಗಳಾಗಿ ತೊಂದರೆಗಳಾಗುತ್ತಿವೆ ನಗರಸಭಾ ಸದಸ್ಯರು ತಿಳಿಸಿದ್ದಾರೆ.

ಸ್ಥಾವರಗಳಲ್ಲಿ ಅಳವಡಿಸಿರುವ ಮೋಟಾರ್‌ಗೆ ಸಂಬಂಧಪಟ್ಟ ಇಂಜಿನಿಯರ್‍ಗಳು ವಾರಕ್ಕೆ ಒಮ್ಮೆಯಾದರೂ ವೀಕ್ಷಿಸಿ ಪರಿಶೀಲಿಸಬೇಕು. ಆದರೆ ಇಲ್ಲಿನ ಪರಿಸ್ಥಿತಿ ಗಮನಿಸಿದರೆ ಯಾವುದೇ ರೀತಿಯ ಪರಿಶೀಲನೆಯಾದಂತೆ ಕಾಣುತ್ತಿಲ್ಲ. ಜೊತೆಗೆ ಜಿಲ್ಲಾ ಅರ್ಬಲ್ ವಾಟರ್ ಸಪ್ಲೈಯ ಎಇಇ ಹಾಗೂ ಮೋಟಾರ್ ಇಂಜಿನಿಯರ್‍ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರ ಬಗ್ಗೆ ಸಹಿ ಸಮೇತ ಇಲ್ಲ.

ಅರ್ಬಲ್ ವಾಟರ್ ಸಪ್ಲೈ ಇಲಾಖೆಯ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಮಾಹಿತಿ ಕೇಳಿದರೆ ವಾರದಲ್ಲಿ 2-3 ಬಾರಿ ಮುಗುಳುವಳ್ಳಿ ಹಾಗೂ ಬೇಲೂರು ಪಂಪ್‍ಹೌಸ್ ಭೇಟಿ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಸ್ವತಃ ಮುಗುಳವಳ್ಳಿ ಹಾಗೂ ಬೇಲೂರು ಪಂಪ್‍ಹೌಸ್‍ನ ಲಾಗ್‍ಪುಸ್ತಕದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದು ಸ್ಪಷ್ಟವಾಗುತ್ತಿದೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

Chikkamagaluru Belur Pump House Mattendance Problem

ಎಇಇ ಅಧಿಕಾರಿಗಳು ಬೇಲೂರು, ಮುಗುಳುವಳ್ಳಿ ಪಿಕಪ್, ಡ್ರಾಪ್ ಎಂದು ದಿನಚರಿ ವಾಹನದ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಯೇ ಹೊರತು ಸ್ಥಳಕ್ಕೆ ಭೇಟಿ ನೀಡಿಲ್ಲ. ಕೇವಲ ತಮ್ಮ ವೈಯಕ್ತಿಕ ಕೆಲಸಕ್ಕೆ ಸರ್ಕಾರಿ ವಾಹನವನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಸಾರ್ವಜನಿಕರ ಹಣ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪುಕ್ಕಟ್ಟೆಯಾಗಿ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಯಲುಮುಕ್ತ ಶೌಚಾಲಯ ಎಂಬ ಮಹಾತ್ವಾಕಾಂಕ್ಷೆ ಯೋಜ ನೆಯ ಜಾರಿಯಲ್ಲಿದ್ದರೂ ಸಹ ಸ್ಥಾವರಗಳ ಕೆಲಸ ನಿರ್ವಹಿಸುವ ಆಪರೇಟರ್‍ಗಳಿಗೆ ಮೂಲಭೂತ ಶೌಚಾಲಯದ ವ್ಯವಸ್ಥೆಯಿಲ್ಲ. ಇದರಿಂದ ದಿನನಿತ್ಯ ಸಂಕಷ್ಟ ಎದುರಾಗುತ್ತಿದೆ ಎಂದು ತಿಳಿಸಿದರು.

ನಗರಸಭಾ ಸಾಮಾನ್ಯ ಸಭೆಗಳಲ್ಲಿ ಕುಡಿಯುವ ನೀರಿಗಾಗಿ ಮುಗುಳವಳ್ಳಿ ಹಾಗೂ ಬೇಲೂರು ಪಂಪ್‍ಹೌಸ್‌ಗಳಿಗೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸಲಾಗುತ್ತಿದೆ. ಆದರೆ ಇಲ್ಲಿನ ಸ್ಥಾವರಗಳಲ್ಲಿ ಪರಿಸ್ಥಿತಿ ಗಮನಿಸಿದರೆ ಮೇಲ್ನೋಟಕ್ಕೆ ನಗರಸಭಾ ಆಡಳಿತ ಮಂಡಳಿ ಅವ್ಯವಹಾರವಾಗಿರುವುದು ಕಾಣುತ್ತಿದೆ. ಇಷ್ಟೆಲ್ಲಾ ಹಣವನ್ನು ನೀರು ಸರಬರಾಜಿಗೆ ವ್ಯಯಿಸದೇ ಸಾರ್ವಜನಿಕರ ಹಣವನ್ನು ಪೋಲು ಮಾಡ ಲಾಗುತ್ತಿದೆ ಎಂದು ದೂರಿದರು.

ಕೂಡಲೇ ಜಿಲ್ಲಾಡಳಿತ ಹಾಗೂ ನಗರಸಭಾ ಆಡಳಿತ ಮಂಡಳಿಯು ನೀರು ಸರಬರಾಜು ಸ್ಥಾವರ ಗಳಲ್ಲಿ ಕೇವಲ ಒಂದೇ ಮೋಟಾರ್ ಪಂಪು ಚಲಿಸುತ್ತಿದ್ದು ಮತ್ತೊಂದು ಪಂಪನ್ನು ತ್ವರಿತವಾಗಿ ದುರಸ್ಥಿ ಗೊಳಿಸಿ ಸಮಯಕ್ಕಾನುಗುಣವಾಗಿ ಚಲಿಸಲು ಕ್ರಮ ವಹಿಸಬೇಕು ಹಾಗೂ ಈ ಯೋಜನೆಗೆ ಬಿಡುಗಡೆ ಯಾಗಿರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸದಲ್ಲಿ ತೊಡಗಬೇಕು ಎಂದು ಒತ್ತಾಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+