ನಟ ಸುದೀಪ್ ಗೆ ಚಿಕ್ಕಮಗಳೂರು ಜೆಎಂಎಫ್ಸಿ ಕೋರ್ಟ್ನಿಂದ ಅರೆಸ್ಟ್ ವಾರೆಂಟ್ ಜಾರಿ
Recommended Video

ಚಿಕ್ಕಮಗಳೂರು, ಮಾರ್ಚ್ 27:ನಟ ಸುದೀಪ್ ಗೆ ಚಿಕ್ಕಮಗಳೂರು ಜೆಎಂಎಫ್ ಸಿ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಸುದೀಪ್ ನಿನ್ನೆ ಮಂಗಳವಾರ (ಮಾ.26) ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೀಪಕ್ ಮಯೂರ್ ಎಂಬುವವರು ಸುದೀಪ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಸುದೀಪ್ ಖಾಸಗಿ ವಾಹಿನಿಯಲ್ಲಿ 'ವಾರಸ್ದಾರ' ಧಾರಾವಾಹಿ ನಿರ್ಮಾಣ ಮಾಡಿದ್ದರು. ಈ ಧಾರಾವಾಹಿಯ ಶೂಟಿಂಗ್ ಗಾಗಿ ದೀಪಕ್ ಅವರ ಮನೆ ಹಾಗೂ ತೋಟವನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ಆದರೆ ಸುದೀಪ್ ಅವರು ಬಾಡಿಗೆ ಹಣ ನೀಡದೆ, ತೋಟ ನಾಶ ಮಾಡಿದ್ದಾರೆ ಎಂದು ಸುದೀಪ್ ವಿರುದ್ಧ ದೀಪಕ್ ದೂರು ದಾಖಲಿಸಿದ್ದರು.

ಪ್ರಕರಣದ ವಿವರ
ಖಾಸಗಿ ವಾಹಿನಿಯೊಂದರಲ್ಲಿ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣದ ಅಡಿಯಲ್ಲಿ 'ವಾರಸ್ದಾರ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಈಗ ಈ ಧಾರಾವಾಹಿ ಪ್ರಸಾರ ನಿಂತಿದೆ. ಇದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಅವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆಗೆ ಪಡೆಯಲಾಗಿತ್ತು.
ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದ್ದು, ಹಾನಿಯಾದ ಹಿನ್ನೆಲೆಯಲ್ಲಿ ಒಟ್ಟು 1.50 ಕೋಟಿ ರೂ. ನಷ್ಟವಾಗಿದೆ. ಈ ಹಣವನ್ನು ನೀಡಬೇಕೆಂದು ಧಾರಾವಾಹಿ ನಿರ್ಮಾಣ ತಂಡಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಈ ಬೇಡಿಕೆಯನ್ನು ಸುದೀಪ್ ಕ್ರಿಯೇಶನ್ಸ್ ತಿರಸ್ಕರಿಸಿತ್ತು.












Click it and Unblock the Notifications