ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು; ಕ್ವಾರಂಟೈನ್ ನಲ್ಲಿದ್ದ 485 ಮಂದಿ ಬಿಡುಗಡೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 23: ಗ್ರೀನ್ ಝೋನ್ ಆಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಆತಂಕ ತಂದಿದ್ದ ವೈದ್ಯರೊಬ್ಬರ ವರದಿ ಇದೀಗ ನೆಗೆಟಿವ್ ಬಂದಿದೆ.

Recommended Video

ವರ್ಕ್ ಫ್ರಂ ಹೋಂ‌ನಿಂದ ಆಗ್ತಿರೋ ಸಮಸ್ಯೆಗಳು ಅಷ್ಟಿಷ್ಟಲ್ಲ... | Oneindia Kannada

42 ವರ್ಷದ ಮೂಡಿಗೆರೆಯ ವೈದ್ಯರೊಬ್ಬರಲ್ಲಿ ಕೊರೊನಾ ಸೋಂಕು ಇರುವುದಾಗಿ ಮೂರು ದಿನಗಳ ಹಿಂದೆ ಸುದ್ದಿಯಾಗಿತ್ತು. ಈ ಸೋಂಕಿನ ಶಂಕೆಯಿಂದ ಆರು ಬಾರಿ ವೈದ್ಯನ ಗಂಟಲು ದ್ರವವನ್ನು ಪರೀಕ್ಷೆ ನಡೆಸಲಾಗಿತ್ತು. ಆರು ಬಾರಿಯೂ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗ, ಹಾಸನದ ಲ್ಯಾಬ್ ಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿಯೂ ನೆಗೆಟಿವ್ ಬಂದಿದೆ.

ಚಿಕ್ಕಮಗಳೂರಿಗೂ ಕಾಲಿಟ್ಟಿತು ಕೊರೊನಾ; ವೈದ್ಯ, ಗರ್ಭಿಣಿ ಸೇರಿ ಐವರಿಗೆ ಸೋಂಕುಚಿಕ್ಕಮಗಳೂರಿಗೂ ಕಾಲಿಟ್ಟಿತು ಕೊರೊನಾ; ವೈದ್ಯ, ಗರ್ಭಿಣಿ ಸೇರಿ ಐವರಿಗೆ ಸೋಂಕು

ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈ ವೈದ್ಯನ ಟ್ರಾವೆಲ್ ಹಿಸ್ಟರಿಯನ್ನೂ ಪರಿಶೀಲಿಸಲಾಗಿತ್ತು. ದಿನಕ್ಕೆ ಈ ವೈದ್ಯ ಸುಮಾರು ನೂರು ಮಂದಿಗೆ ಚಿಕಿತ್ಸೆ ನೀಡಿದ್ದ ಸಂಗತಿ ಆತಂಕಕ್ಕೆ ದೂಡಿತ್ತು. ಇದೀಗ ಈ ವೈದ್ಯರ ಸೋಂಕಿನ ಕುರಿತು ಮಾಹಿತಿ ನೀಡಿರುವ ಜಿಲ್ಲಾಡಳಿತ, ಇದು ಫಾಲ್ಸ್ ಪಾಸಿಟಿವ್ ಪ್ರಕರಣ ಎಂದು ಪರಿಗಣಿಸಿ ಕ್ವಾರಂಟೈನ್ ನಿಂದ ವೈದ್ಯನನ್ನು ಬಿಡುಗಡೆ ಮಾಡಿದೆ.

Chikkamagaluru DC Clarified About Doctors False Positive Case

ಫಾಲ್ಸ್ ಪಾಸಿಟಿವ್ ಪ್ರಕರಣ ಇದಾಗಿದೆ, ವೈದ್ಯರನ್ನು ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಗಿದೆ. ವೈದ್ಯರ ಪ್ರಾಥಮಿಕ ಸಂಪರ್ಕದಲ್ಲಿದ್ದ 485 ಮಂದಿಯನ್ನೂ ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ. ಇದೀಗ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಕೊರೊನಾ ಪ್ರಕರಣ ಬಾಕಿ ಇವೆ.

English summary
Chikkamagaluru dc Bagadi Goutham has clarified that doctors coronavirus report is false and decided to release 485 members,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X