ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ರಾಷ್ಟ್ರದ ಜನತೆಯ ಒಳಿತಿಗಾಗಿ ದೇವಿರಮ್ಮನಲ್ಲಿ ಪಾರ್ಥಿಸಿದ್ದೇನೆ; ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್‌, 24: ಮುಂಬರುವ ದಿನಗಳಲ್ಲಿ ಮಳೆಯಾಗಿ ರೈತರ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ. ಹಾಗೂ ದೇಶಕ್ಕೆ ಬರುವ ಎಲ್ಲಾ ಆಪತ್ತುಗಳನ್ನು ನಿವಾರಣೆ ಮಾಡುವಂತೆ ಶ್ರೀ ಬಿಂಡಿಗ ದೇವಿರಮ್ಮನಲ್ಲಿ ಪಾರ್ಥಿಸಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು.

ಸೋಮವಾರ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಶ್ರೀ ದೇವಿರಮ್ಮ ದರ್ಶನ ಪಡೆದು ಮಾತನಾಡಿದ ಅವರು, ಪ್ರತೀ ವರ್ಷ ದೇವಿಯ ದರ್ಶನ ಪಡೆದು ನಂತರ ದೇವಸ್ಥಾನಕ್ಕೆ ಹೋಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವುದು ಈ ಭಾಗದ ವಾಡಿಕೆಯಾಗಿದೆ. ಭಕ್ತರು ಉಪವಾಸ ಇದ್ದು, ದೇವಿಗೆ ಆರತಿ ಮಾಡಿದ ನಂತರ ಉಪವಾಸ ತ್ಯಜೀಸುವ ಮತ್ತು ಹರಕೆ ಕಟ್ಟಿ ಬೆಟ್ಟ ಹತ್ತುವ ಪ್ರತೀತಿ ಬಹಳ ವರ್ಷಗಳಿಂದ ಇದೆ. ಅದರಂತೆಯೇ ಬಹಳ ವರ್ಷಗಳಿಂದ ಬೆಟ್ಟ ಹತ್ತುತ್ತಿದ್ದೇನೆ ಎಂದರು.

ಚಿಕ್ಕಮಗಳೂರಿನಲ್ಲಿ ದೇವಿರಮ್ಮ ದರ್ಶನ: 3000 ಅಡಿಯ ಬೆಟ್ಟ ಏರಿದ ಸಾವಿರಾರು ಭಕ್ತರು!ಚಿಕ್ಕಮಗಳೂರಿನಲ್ಲಿ ದೇವಿರಮ್ಮ ದರ್ಶನ: 3000 ಅಡಿಯ ಬೆಟ್ಟ ಏರಿದ ಸಾವಿರಾರು ಭಕ್ತರು!

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ

ಕಳೆದು ಎರಡು ವರ್ಷದಲ್ಲಿ ಕೊರೊನಾ ಕಾರಣದಿಂದ ಹೆಚ್ಚನ ಭಕ್ತರು ಆಗಮಿಸಿಲ್ಲ. ಈ ಬಾರಿ ಕೊರೊನಾ ಮಾಯವಾಗಿದ್ದು ಹಾಗೂ ಮಳೆ ಇಲ್ಲದಿರುವುದರಿಂದ ಹೆಚ್ಚಿನ ಪ್ರಮಾಣದ ಭಕ್ತರು ಬಂದಿದ್ದಾರೆ. ಈ ವರ್ಷ ಉತ್ತಮ ಮಳೆ ಆಗಿದೆ. ಅದರಂತೆಯೇ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆ ನೀಡಿ ದೇಶಕ್ಕೆ ಬರುವ ಆಪತ್ತುಗಳನ್ನು ನಿವಾರಿಸಲಿ. ಹಾಗೂ ಭಾರತಕ್ಕೆ ಯಾವುದೇ ಆಪತ್ತುಗಳು ಬರದಂತೆ ನೋಡಿಕೊಳ್ಳಬೇಕು. ಆ ಮೂಲಕ ಭಾರತ ವಿಶ್ವಗುರುವಾಗಿ ಜಗತ್ತಿಗೆ ಮಾರ್ಗದರ್ಶನ ಮಾಡಲಿ ಎಂದು ದೇವಿಯಲ್ಲಿ ಪಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.

Bjp National general Secretary CT Ravi Pray to Bindiga Deviramma Temple

ಕಾಂತಾರ ಚಿತ್ರದ ಬಗ್ಗೆ ಸಿ.ಟಿ ರವಿ ಹೇಳಿದ್ದೇನು?

ಕಾಂತಾರ ಚಿತ್ರದ ಪರ ವಿರೋಧದ ಚರ್ಚೆ ಸಂಬಂಧ ಪ್ರತಿಕ್ರಿಯಿಸಿ, ಕಾಂತಾರ ತುಳುನಾಡಿನ ಮತ್ತು ಮಲೆನಾಡಿನ ಜಾನಪದ ದೇವತೆ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಚಿತ್ರವಾಗಿದೆ. ಸಹಜವಾಗಿ ಜನರನ್ನು ಕಾಂತಾರ ಚಿತ್ರ ಆಕರ್ಷಣೆ ಮಾಡಿದೆ. ಜೀವ ತುಂಬಿ ಅಭಿನಯಿಸಿರುವುದರಿಂದ ಚಲನಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ದೇವರಲ್ಲಿ ಶ್ರದ್ಧೆ ಮತ್ತು ಭಕ್ತಿ ಭಾವವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದೆ. ವಿರೋಧ ಮಾಡುವವರು ಎಲ್ಲಾ ಕಾಲದಲ್ಲೂ ಇದ್ದಾರೆ. ದುಷ್ಟರು, ರಾಕ್ಷಸರು ಇಲ್ಲದಿದ್ದರೇ ದೇವರು ತಮ್ಮ ಪವಾಡವನ್ನು ತೋರಿಸುವುದು ಹೇಗೆ? ದುಷ್ಟರಿರುವ ಕಾರಣ ಕೃಷ್ಣ ನೆನ ಪಾಗುವುದು. ದೇವರು ತನ್ನ ಶಕ್ತಿ ಪ್ರದರ್ಶಿಸಲು ದುಷ್ಟಶಕ್ತಿ ಇರಬೇಕಲ್ಲವೇ ಎಂದರು.

English summary
Today CT Ravi visited Deviramman Hill, darshan of Deviramma of chikkamagaluru district, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X