Get Updates
Get notified of breaking news, exclusive insights, and must-see stories!

ರಾಷ್ಟ್ರೀಯ ಹಿತದ ಜೊತೆಗೆ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ವಾಜಪೇಯಿ ಅವರದು - ಸಿ.ಟಿ.ರವಿ

ಚಿಕ್ಕಮಗಳೂರು, ಜನವರಿ 4: ಅಟಲ್ ಬಿಹಾರ್ ವಾಜಪೇಯಿ ಅವರನ್ನು ಅಜಾತ ಶತ್ರು ಎಂದು ಕರೆಯುತ್ತಿದ್ದರು. ರಾಷ್ಟ್ರೀಯ ಹಿತದ ಜೊತೆಗೆ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಜಪೇಯಿ ಅವರ ವ್ಯಕ್ತಿತ್ವವನ್ನು ಹೊಗಳಿದರು.

ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಅಟಲ್ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಿ.ಟಿ.ರವಿ, ಅಟಲ್ ಬಿಹಾರ್ ವಾಜಪೇಯಿ ಅವರ ಮನಸ್ಸು ಹೂವಿನಷ್ಟು ಮೃಧುವೂ ಹೌದು, ವಜ್ರದಷ್ಟು ಕಠಿಣವೂ ಹೌದು ಎನ್ನುವಂತಿತ್ತು ಅವರ ಸ್ವಭಾವ. ಅವರು ಭಾವುಕ ಜೀವಿ ಎಂದು ತಿಳಿಸಿದರು.

ನುಡಿದರೆ ಮಾತು ಮುತ್ತಿನಂತೆ ಇರಬೇಕು ಎನ್ನುವಂತೆ ಹೃದಯ ಭಾವ ತುಂಬಿ ಮಾತನಾಡುತ್ತಿದ್ದರು. ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಯುವ ಮೋರ್ಚಾ ವಾಜಪೇಯಿ ಜನ್ಮ ದಿನವನ್ನು ನೆಪವಾಗಿಟ್ಟುಕೊಂಡು ಅಟಲ್ ಭಾಷಣ ಸ್ಪರ್ಧೆ ಏರ್ಪಡಿಸಿದೆ. ಮಾತನಾಡುವವರು ವಿಷಯವನ್ನು ಗ್ರಹಿಸಿಕೊಂಡು ಆತ್ಮವಿಶ್ವಾಸದಿಂದ ಮಾತನಾಡಬೇಕು. ಕೇವಲ ಹುರುಹೊಡೆದು ಮಾತನಾಡುವುದಲ್ಲ. ಅನುಭವಿಸಿ ಮಾತನಾಡಬೇಕು. ನಾವು ಅಧ್ಯಯನ ಮಾಡಿದಾಗ ಅನುಭವಿಸಿ ಮಾತನಾಡಲು ಸಾಧ್ಯ. ಅದರ ಮೂಲಕ ನಾಯಕತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

BJP National General Secretary CT Ravi Praises Atal Bihari Vajpayee

ವಾಜಪೇಯಿ, ಮೋದಿ ಅವರ ರೀತಿಯ ನಾಯಕತ್ವದ ಗುಣಗಳು ಬೆಳೆಯಬೇಕು ಅದರಲ್ಲಿ ರಾಷ್ಟ್ರೀಯತೆಯ ಹಿತಾಸಕ್ತಿ ಇರಬೇಕು. ಆ ರೀತಿ ನಾಯಕತ್ವ ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ ಎಂದರು.

ಯಾವುದೇ ವಿಚಾರ ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ಜೀವನದ ಸಾಧನೆ ವ್ಯಕ್ತಿಗತ ಪ್ರತಿಷ್ಠೆಯನ್ನು ಹೆಚ್ಚಿಸುವುದು ಮಾತ್ರವಲ್ಲ ಸಮಾಜವನ್ನು ದಡಕ್ಕೆ ಮುಟ್ಟಿಸುವಂತಿರಬೇಕು ಎಂದು ಸಿ.ಟಿ ರವಿ ಹೇಳಿದರು.

ಜಿಲ್ಲಾ ಯುವ ಮೊರ್ಚಾ ಪ್ರಭಾರಿ ಅನೂಪ್ ಮಾತನಾಡಿ, ಜೀವನದಲ್ಲಿ ಕೆಲವು ಒಳ್ಳೆ ವ್ಯಕ್ತಿಗಳಿಂದ ಪ್ರೇರಿತರಾಗಲು ಅವಕಾಶಗಳಿರುತ್ತವೆ. ಅಟಲ್ ಭಾಷಣ ಸ್ಪರ್ಧೆಯನ್ನು ಈ ಕಾರಣಕ್ಕೆ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಅಟಲ್‌ ಜಿ ಎಂದರೆ ಕೇವಲ ರಾಜಕಾರಣಿ ಅಷ್ಟೇ ಅಲ್ಲ. ಅವರ ನಡೆ, ನುಡಿ, ಹಾವ ಭಾವ, ಮಾತು ಎಲ್ಲವೂ ನಮ್ಮನ್ನು ಉತ್ತೇಜನಗೊಳಿಸಿದೆ. ದೇಶವನ್ನು ಆಂತರಿಕವಾಗಿ ಬಲಗೊಳಿಸುವುದು ಹಾಗೂ ದೇಶದ ವರ್ಚಸ್ಸನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುವುದು ಹೇಗೆ ಎನ್ನುವುದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್‍ಕೋಟ್ಯಾನ್ ಮಾತನಾಡಿ, ಕೇವಲ ರಾಜಕೀಯ ಮಾಡುವುದೊಂದೇ ಬಿಜೆಪಿ ಉದ್ದೇಶವಲ್ಲ. ಎಲ್ಲಾ ಸ್ಥರದಲ್ಲೂ ಜನರನ್ನು ತಲುಪಬೇಕು ಎನ್ನುವುದು ಧ್ಯೇಯ. ಬೆಂಗಳೂರಿನಲ್ಲಿ ಜನವರಿ 5 ರಂದು ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಚಿಕ್ಕದೇವನೂರು ರವಿ, ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರದೀಪ್, ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ ರಾಜ್ ಅರಸ್ ಇತರರು ಭಾಗವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+