ಸಿ.ಟಿ.ರವಿ ನಿಮಗೆಲ್ಲಾ ಗೊತ್ತು ದಿಶಾರವಿ ಹೆಸರು ಯಾರಿಗೆ ಗೊತ್ತಿತ್ತು?

ಚಿಕ್ಕಮಗಳೂರು, ಫೆಬ್ರವರಿ 16; " ಸಿ. ಟಿ. ರವಿ ನಿಮಗೆಲ್ಲಾ ಗೊತ್ತು. ದಿಶಾರವಿ ಹೆಸರು ಯಾರಿಗೆ ಗೊತ್ತಿತ್ತು?. ಅರಾಜಕತೆ ಹುಟ್ಟಿ ಹಾಕುವುದು ಪ್ರಜಾಪ್ರಭುತ್ವದ ಲಕ್ಷಣನಾ?. ದಿಶಾರವಿ ಬೆಂಬಲಿಸುವ ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು" ಎಂದು ಸಿ. ಟಿ. ರವಿ ಹೇಳಿದರು.

ಮಂಗಳವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, "ಪ್ರಜಾಪ್ರಭುತ್ವ ಹೋರಾಟಕ್ಕಾಗಿ ಅವಳ ಬಂಧನವಾಗಿಲ್ಲ. ಅರಾಜಕತೆ ಸೃಷ್ಟಿ ಮಾಡಿದ್ದಕ್ಕಾಗಿ ಬಂಧನವಾಗಿದೆ. ದಿಶಾರವಿ ಬಗ್ಗೆ ವೈಭವೀಕರಿಸಿ ಮಾತಾನಾಡುತ್ತಿದ್ದಾರೆ" ಎಂದರು.

"ದಿಶಾರವಿ ಬಗ್ಗೆ ತನಿಖೆಯಾಗುತ್ತಿದೆ. ಪ್ರಾರ್ಥಮಿಕ ವರದಿಯಲ್ಲಿ ಅರಾಜಕತೆ ಸೃಷ್ಟಿ ಬಗ್ಗೆ ಇದ್ದ ಕಾರಣ ಬಂಧನವಾಗಿದೆ. ನಮಗೆ ನಮ್ಮ ದೇಶದ ಸಂವಿಧಾನ ದೊಡ್ಡದು, ದೇಶದ ಅಖಂಡತೆ ದೊಡ್ಡದು" ಎಂದು ಸಿ. ಟಿ. ರವಿ ತಿಳಿಸಿದರು.

BJP General Secretary CT Ravi On Disha Ravi Arrest

"ಇಂತಹ ಕೃತ್ಯ ಬೆಂಬಲಿಸಿ ಕಾಂಗ್ರೆಸ್‌ ತನ್ನ ನಾಯಕರನ್ನು ಕಳೆದುಕೊಂಡಿದೆ. ಅಂತಹದ್ದೇ ಪರಿಸ್ಥಿತಿ ತಂದಿಡುವ ಹೀನಾ ಕೆಲಸ ಕಾಂಗ್ರೆಸ್ ಮಾಡಬಾರದು. ದೇಶದ ಅಖಂಡತೆಗೆ ಭಂಗ ತರುವ ಯಾವ ಶಕ್ತಿಯನ್ನು ಬೆಂಬಲಿಸಲ್ಲ, ಕ್ಷಮಿಸಲ್ಲ" ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ವಿರುದ್ಧ ಅಸಮಾಧಾನ; "ಮನಸ್ಸಿಗೆ ಮೊಳೆ ಹೊಡೆಯುವ ವಿಚಾರ ಕುಮಾರಸ್ವಾಮಿಗೆ ಶ್ರೇಯಸ್ಸಲ್ಲ" ಎಂದು ಸಿ. ಟಿ. ರವಿ ಹೇಳಿದರು.

ರಾಮ ಮಂದಿರ ದೇಣಿಗೆ ವಿಚಾರವಾಗಿ ಹೇಳಿಕೆ ನೀಡಿದ್ದ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸಿ. ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದರು. "ಸಣ್ಣ ಮಟ್ಟಕ್ಕೆ ಆಲೋಚನೆ ಮಾಡ್ತಾರೆ ಅಂತಾ ನನಗೆ ಅನಿಸಿರಲಿಲ್ಲ ಎಲ್ಲಿ, ಯಾರು ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ?" ಎಂದು ಪ್ರಶ್ನಿಸಿದರು.

"ಎಲ್ಲಾ ಜಾತಿಯ ಜನ ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಜನರು ಹಣ ಕೊಡುತ್ತಿದ್ದಾರೆ. ಜನರು ಭಕ್ತಿಯಿಂದ ಕೊಡುವ ಹಣ ಬೇಕೇ ಹೊರತು ದಬ್ಬಾಳಿಕೆಯಿಂದ ಪಡೆಯುವಂತದಲ್ಲ. ಕುಮಾರಸ್ವಾಮಿ ಯಾಕೆ ಹೀಗೆ ಮಾತನಾಡುತ್ತಿದ್ದಾರೆ?. ಇದು ಅವರಿಗೆ ಗೌರವ ತರುವ ಸಂಗತಿಯಲ್ಲ, ಸುಳ್ಳು ಹೇಳುವ ಕೆಲಸ ಖಂಡನೀಯ" ಎಂದರು.

ಸಿದ್ದರಾಮಯ್ಯ ನಿಲುವು; ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ. ಟಿ. ರವಿ, "ಇದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತೆಗೆದುಕೊಂಡಿದ್ದ ನಿಲುವು. ಈ ನಿಯಮದ ಪುನರುಚ್ಚಾರವನ್ನು ಈಗಿನ ಸಚಿವರು ಹೇಳಿದ್ದಾರೆ. ಆಗ ನಿಯಮ ಮಾಡಬೇಕಾದರೆ ಕಾಂಗ್ರೆಸ್‌ನವರು ಅರೆ ಪ್ರಜ್ಞಾವಸ್ಥೆಯಲ್ಲಿದ್ರಾ?" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+