ಬಾಳೆಹೊನ್ನೂರು ಪೊಲೀಸರಿಂದ ಬೀದಿ ನಾಟಕ: ಅಣ್ಣಾಮಲೈ ಮೆಚ್ಚುಗೆ
ಚಿಕ್ಕಮಗಳೂರು, ಏಪ್ರಿಲ್ 27: ಚಿಕ್ಕಮಗಳೂರಿನಲ್ಲಿ ಜನರಿಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಲು ಪೊಲೀಸರು ವಿಶೇಷ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಬೀದಿ ನಾಟಕ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ.
ಮಹಾರಾಜ, ಸೇನಾಧಿಪತಿ, ಮಂತ್ರಿ ಈ ರೀತಿಯ ಪಾತ್ರಗಳ ಮೂಲಕ ಬೀದಿ ನಾಟಕ ಮಾಡಿದ್ದಾರೆ. ಜಿಲ್ಲಾಡಳಿತದ ಕ್ರಮಗಳನ್ನು ನಾಟಕದಲ್ಲಿ ಮೆಚ್ಚಿಕೊಳ್ಳಲಾಗಿದೆ. ಸೀಲ್ ಡೌನ್, ಲಾಕ್‌ಡೌನ್, ಸಾಮಾಜಿಕ ಅಂತರ ಹೀಗೆ ಎಲ್ಲ ಕ್ರಮಗಳನ್ನು ಪಾಲನೆ ಮಾಡುತ್ತಿದ್ದು, ಇಲ್ಲಿ ಕೊರೊನಾದ ಆಟ ನಡೆಯುತ್ತಿಲ್ಲ ಎಂದಿದ್ದಾರೆ.

''ಮಾಡಲು ಕೊರೊನಾ ಸಂಹಾರ, ಪಾಲಿಸಿ ಸಾಮಾಜಿಕ ಅಂತರ'' ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಬೀದಿ ನಾಟಕ ನಡೆದಿದೆ. ಒಂದುವರೆ ಗಂಟೆಯ ಕಾಲ ನಾಟಕ ಪ್ರದರ್ಶನ ಮಾಡಲಾಗಿದೆ. ಯಕ್ಷಗಾನ ಶೈಲಿಯಲ್ಲಿ ನಾಟಕ ಮಾಡಲಾಗಿದೆ. ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹೀಗೆ ಜನರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.
Saw this amazing awareness drama done by @spckmofficial police about COVID -19. Some of these talented police performers are my ex colleagues as well. Kudos to the hardworking dist admin, police and the dist min @CTRavi_BJP. Video courtesy: Journo Praveen of @TV5kannada #StaySafe pic.twitter.com/oQIx5AHwwZ
— K.Annamalai (@annamalai_k) April 26, 2020
ಸಾಕಷ್ಟು ಸಂಖ್ಯೆಯ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ನಾಟಕವನ್ನು ನೋಡಿದರು. ಪೊಲೀಸರ ಈ ಪ್ರಯತ್ನಕ್ಕೆ ಚಪ್ಪಾಳೆ ತಟ್ಟಿದರು. ವಿಶೇಷ ಅಂದರೆ, IPS ಅಧಿಕಾರಿ, ವೀ ದಿ ಲೀಡರ್ಸ್ ಸಂಸ್ಥೆಯ ಸಂಸ್ಥಾಪಕ ಅಣ್ಣಾಮಲೈ ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೊಲೀಸರ ಬೀದಿ ನಾಟಕದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications