ಅರಸೀಕೆರೆ: ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಸಾರಿಗೆ (KSRTC) ಬಸ್‌

ಹಾಸನ, ಅಕ್ಟೋಬರ್‌, 16: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ (KSRTC) ಬಸ್ ಮನೆಗೆ ನುಗ್ಗಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಆಗುಂದ ಗ್ರಾಮದಲ್ಲಿ ನಡೆದಿದೆ.

ಅರಸೀಕೆರೆಯಿಂದ ಹುಳಿಯಾರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಆಗುಂದ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ್ದು, ಈ ವೇಳೆ ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಭಾರೀ ಅನಾಹುತ ತಪ್ಪಿದೆ. ಸದ್ಯ ಅರಸೀಕೆಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಎಂದು ತಿಳಿದುಬಂದಿದೆ.

Arsikere: KSRTC bus entered into house

ಪ್ರಯಾಣಿಕರ ನೆರವಿಗೆ ಧಾವಿಸಿದ ಶಾಸಕಿ

ಇನ್ನು ಓವರ್ ಲೋಡ್‌ನಿಂದ ಸರ್ಕಾರಿ ಬಸ್‌ಮ ಪರ್ಚ್ ಕಟ್ ಆಗಿ ಸರ್ಕಾರಿ ಬಸ್ ರಸ್ತೆ ಮಧ್ಯೆ ನಿಂತು ಪ್ರಯಾಣಿಕರು ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ಬುಧವಾರ (ಸೆಪ್ಟೆಂಬರ್‌ 21) ನಡೆದಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕಿ ನಯನಾ ಮೋಟಮ್ಮ ಪ್ರಯಾಣಿಕರಿಗೆ ಬೇರೆ ಬಸ್‌ ಕಲ್ಪಿಸುವ ಕೆಲಸವನ್ನು ಮಾಡಿದ್ದರು.

ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ 60 ಸೀಟ್ ಸರ್ಕಾರಿ ಬಸ್‌ನಲ್ಲಿ 110ಕ್ಕೂ ಹೆಚ್ಚು ಜನ ಇದ್ದರು. ಅದರಲ್ಲಿ, ಧಾರ್ಮಿಕ ಕ್ಷೇತ್ರದ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೇ ಹೆಚ್ಚಾಗಿದ್ದರು. ಬಸ್‌ ಘಾಟಿ ರಸ್ತೆಯ ತಿರುವಿನಲ್ಲಿ ಓವರ್ ಲೋಡ್‌ನಿಂದ ಸಂಚರಿಸಲಾಗದೆ ಪರ್ಚ್ (ಬ್ಲೇಡ್) ಕಟ್ ಆಗಿ ಅಲ್ಲೇ ನಿಂತಿತ್ತು. ಇದರಿಂದ ಹತ್ತಾರು ಮಹಿಳೆಯರು ಇಳಿ ಸಂಜೆಯಲ್ಲಿ ರಸ್ತೆ ಮಧ್ಯೆಯೇ ಕಾಲ ಕಳೆದ ಘಟನೆ ಬುಧವಾರ (ಸೆಪ್ಟೆಂಬರ್‌ 21) ನಡೆದಿತ್ತು.

ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್‌ಗಳ ಸಂಖ್ಯೆ ತೀರಾ ಕಡಿಮೆ. ಬೆರಳೆಣಿಕೆಯಷ್ಟು ಬಸ್‌ಗಳಷ್ಟೇ ಇವೆ. ಬೇರೆ-ಬೇರೆ ಭಾಗದಿಂದ ಬಂದು ಕೊಟ್ಟಿಗೆಹಾರದಲ್ಲಿ ಕಾಯುತ್ತಿದ್ದ ಜನ ಬಸ್ ಬರುತ್ತಿದ್ದಂತೆ ತುಂಬಿಕೊಂಡಿದ್ದರು. ಕೊಟ್ಟಿಗೆಹಾರದಿಂದ ಸಾಕಷ್ಟು ಮಹಿಳೆಯರು ಬಸ್ ಹತ್ತಿದ ಪರಿಣಾಮ ಕೊಟ್ಟಿಗೆಹಾರದಿಂದ 12 ಕಿ.ಮೀ. ದೂರ ಹೋಗುತ್ತಿದ್ದಂತೆ ಬಸ್‌ನ ಪರ್ಚ್ ಕಟ್ ಆಗಿ ಅಲ್ಲೆ ನಿಂತಿತ್ತು. ಪರಿಣಾಮ ಬೇರೆ ಬಸ್ಸಿಲ್ಲದೆ ಜನ ರಸ್ತೆ ಬದಿ ಕೂತು ಕಾಯುತ್ತಿದ್ದರು.

ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ ರಸ್ತೆ ಬದಿ ಕೂತಿದ್ದ ಮಹಿಳೆಯರ ಕಷ್ಟ ಕೇಳಿ ಕೂಡಲೇ ಕೆ.ಎಸ್.ಆರ್.ಟಿ.ಸಿ. ಡಿಸಿಗೆ ಫೋನ್ ಮಾಡಿ ಕೂಡಲೇ ಬೇರೆ ಬಸ್ ಕಳಿಸುವಂತೆ ಸೂಚನೆ ನೀಡಿದ್ದರು. ಒಂದು ವೇಳೆ ಬಸ್ ಬರದಿದ್ದರೆ ನನಗೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+