Get Updates
Get notified of breaking news, exclusive insights, and must-see stories!

ಮುಗಿಯದ ದತ್ತಪೀಠದ ವಿವಾದ: ಕಾಫಿನಾಡಿನಲ್ಲಿ ಮತ್ತೊಂದು ದರ್ಗಾ-ದೇವಾಲಯ ಚರ್ಚೆ

ಚಿಕ್ಕಮಗಳೂರು ತಾಲೂಕು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಟ್ಟೆಗದ್ದೆ ಗ್ರಾಮದ ಹಜರತ್ ಸೈಯದ್ ಬೂದ್‍ಶಾ ದರ್ಗಾ ದರ್ಗಾ ಅಲ್ಲ. ಅದು ಪುರಾತನ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಎಂದು ಹಿಂದೂ ಸಂಘಟನೆಗಳು ದರ್ಗಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚಿಕ್ಕಮಗಳೂರು, ಮಾರ್ಚ್ 14: ಎರಡು-ಮೂರು ದಶಕಗಳಿಂದ ನಿರಂತರವಾಗಿ ಹೋರಾಡಿಕೊಂಡು ಬರುತ್ತಿದ್ದರು ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಉಮೇದುವಾರಿಕೆಗೆ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ಈ ಮಧ್ಯೆ ಮತ್ತೊಂದು ಸುತ್ತಿನ ಧರ್ಮ ದಂಗಲ್‍ಗೆ ಜಿಲ್ಲೆಯಲ್ಲಿ ಆರಂಭವಾಗಿದೆ.

ಚಿಕ್ಕಮಗಳೂರು ತಾಲೂಕು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಟ್ಟೆಗದ್ದೆ ಎಂಬ ಕುಗ್ರಾಮವೇ ಈ ಹೋರಾಟದ ಕೇಂದ್ರ ಬಿಂದುವಾಗಿದೆ. ಕಟ್ಟೆಗದ್ದೆ ಗ್ರಾಮದ ಹಜರತ್ ಸೈಯದ್ ಬೂದ್‍ಶಾ ದರ್ಗಾ ದರ್ಗಾ ಅಲ್ಲ. ಅದು ಪುರಾತನ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಎಂದು ಹಿಂದೂ ಸಂಘಟನೆಗಳು ದರ್ಗಾ ವಿರುದ್ಧ ಆಕ್ರೋಶ ಹೊರಹಾಕಿ, ಇದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿವೆ.

Another Dargah Controversy Started In Chikkamagaluru

ಹಿಂದೂ ದೇವಾಲಯ ಎನ್ನಲು ಹಲವು ಸಾಕ್ಷಿ!

ಹಿಂದೂ ದೇವಾಲಯಗಳ ಆಕಾರದಲ್ಲೇ ಇರುವ ಈ ದರ್ಗಾವನ್ನು, ದರ್ಗಾ ಎಂದು ಹಿಂದೂ ಸಂಘಟನೆಗಳು ಒಪ್ಪುತ್ತಿಲ್ಲ. ಇದು ಹಿಂದೂ ದೇವಾಲಯದ ಮಾದರಿಯಲ್ಲೇ ಇದೆ. ಇಲ್ಲಿನ ಕಂಬಗಳು, ಕಂಬಗಳ ಮೇಲಿರೋ ಹೂವಿನ ಚಿತ್ರದ ಕೆತ್ತನೆ ಇದೆಲ್ಲಾ ಹಿಂದೂ ದೇವಾಲಯವನ್ನೇ ಹೋಲುತ್ತಿದೆ. ಆದರೆ, ಮುಸ್ಲಿಮರು ಇದು ದರ್ಗಾ ಎಂದು ಗುಂಬಂಜ್ ನಿರ್ಮಿಸಿ ದರ್ಗಾ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಹಾಗೂ ದೇಶದಲ್ಲಿ ನೂರಾರು ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ, ದರ್ಗಾ ಮಾಡಿದಂತೆಯೇ ಇದನ್ನು ಮಾಡಿದ್ದಾರೆ. ಅಲ್ಲಿ ಹಿಂದೂ ದೇವಾಲಯ ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಆದರೆ, ದರ್ಗಾವನ್ನು ಹೊರತುಪಡಿಸಿ ದರ್ಗಾ ಎಂದು ಹೇಳೋದಕ್ಕೆ ಒಂದೇ ಒಂದು ಕುರುಹು ಇಲ್ಲ ಎಂದು ದರ್ಗಾ ವಿರುದ್ಧ ಆಕ್ಷೇಪ ಹೊರಹಾಕಿದ್ದಾರೆ.

Another Dargah Controversy Started In Chikkamagaluru

ಕಟ್ಟೆಗದ್ದೆ ಗ್ರಾಮದಲ್ಲಿ ಐದು ಈಶ್ವರ ದೇವಾಲಯ

ಇತಿಹಾಸ ಪ್ರಕಾರ ಕಟ್ಟೆಗದ್ದೆ ಗ್ರಾಮದಲ್ಲಿ ಐದು ಈಶ್ವರ ದೇವಾಲಯಗಳಿದ್ದವು. ಅದರಲ್ಲಿ ನಾಲ್ಕು ದೇವಾಲಯಗಳು ಸಿಕ್ಕಿವೆ. ಆದರೆ, ಐದನೇ ಚಂದ್ರಮೌಳೇಶ್ವರ ದೇವಾಲಯ ಇಂದಿಗೂ ಸಿಕ್ಕಿಲ್ಲ. ಆ ದೇವಾಲಯವೇ ಇಂದು ದರ್ಗಾವಾಗಿದೆ ಎಂದು ಹಿಂದೂ ಸಂಘಟನೆಗಳು ದರ್ಗಾದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈಶ್ವರನಿಗೆ ಜಲಾಭೀಷೇಕದ ಬಳಿಕ ನೀರು ಹೋಗುತ್ತಿದ್ದ ಗುರುತುಗಳು ಅಲ್ಲಿ ಇದ್ದವು. ಎರಡು ದಶಕಗಳ ಹಿಂದಿಯೇ ಅದನ್ನು ನಾಶ ಮಾಡಿದ್ದಾರೆ. ಅದನ್ನ ನೋಡಿರುವ ಜನರೂ ಇದ್ದಾರಂತೆ. ಹೀಗಿರುವಾಗ ಇದು ಹೇಗೆ ದರ್ಗಾವಾಗುತ್ತದೆ. ಇದು ಸಂಪೂರ್ಣ ಹಿಂದೂ ದೇವಾಲಯ. ಅದನ್ನು ಆಕ್ರಮಣ ಮಾಡಿ ದರ್ಗಾ ಮಾಡಿಕೊಂಡಿದ್ದಾರೆ. ಇದನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಹಿಂದೂ ಸಂಘಟನೆಗಳು ಹೋರಾಟಕ್ಕೆ ಅಣಿಯಾಗಿವೆ.

Another Dargah Controversy Started In Chikkamagaluru

ಹಿಂದೆ ಇದ್ದ ಚಂದ್ರಮೌಳೇಶ್ವರ ದೇವಾಲಯವನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ಧ್ವಂಸ ಮಾಡಿ ದರ್ಗಾ ಮಾಡಿಕೊಂಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಕಟ್ಟೆಗದ್ದೆ ಗ್ರಾಮದಲ್ಲಿ ಐದು ಶಿವನ ದೇವಾಲಯಳಿರುವುದು ಇತಿಹಾಸ. ಆದರೆ, ಆ ಐದರಲ್ಲಿ ನಾಲ್ಕು ಪತ್ತೆಯಾಗಿವೆ. ಇನ್ನೊಂದು ಸಿಕ್ಕಿಲ್ಲ. ಅದು ಇದೇ ಚಂದ್ರಮೌಳೇಶ್ವರ ದೇವಾಲಯ. ಆದರೆ, ಅದನ್ನ ನಾಶ ಮಾಡಿ ದರ್ಗಾ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಮುಸ್ಲಿಮರು ಕೂಡಲೇ ಇದನ್ನ ಬಿಟ್ಟುಕೊಡಬೇಕು. ಇಲ್ಲವಾದರೆ ಕಾನೂನು ಮೂಲಕ ಹೋರಾಟ ನಡೆಸೋದಾಗಿ ಹಿಂದೂ ಸಂಘನೆಗಳು ಎಚ್ಚರಿಕೆ ನೀಡಿವೆ.

ದರ್ಗಾ ನವೀಕರಣ ನಿಲ್ಲಿಸುವಂತೆ ಒತ್ತಾಯ

ಪ್ರಸ್ತುತ ವಕ್ಫ್ ಬೋರ್ಡ್ ಅದೀನದಲ್ಲಿರುವ ಈ ದರ್ಗಾದ ನವೀಕರಣಕ್ಕೆ ಸರ್ಕಾರದಿಂದ 8 ಲಕ್ಷ ಹಣ ಬಿಡುಗಡೆಯಾಗಿದೆ. ದರ್ಗಾದ ನವೀಕರಣ ಸಂದರ್ಭದಲ್ಲಿ ಈ ದರ್ಗಾದ ಮೇಲೆ ಗುಂಬಜ್ ನಿರ್ಮಾಣ ಮಾಡಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ.

ಈ ದರ್ಗಾದಲ್ಲಿ ಉರುಸ್ ಕೂಡ ನಡೆಯಲಿದ್ದು, ಹಿಂದೂ ಸಂಘಟನೆಗಳ ಎಚ್ಚರಿಕೆ ಹಿನ್ನಲೆ ದರ್ಗಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಿದ್ದಾರೆ. ಮಂಗಳೂರು ಮಳಲಿ ದೇವಸ್ಥಾನ ವಿವಾದ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮಸೀದಿ ಗಲಾಟೆ ಬಳಿಕ ಮತ್ತೊಂದು ಧರ್ಮ ದಂಗಲ್‍ಗೆ ಕಾಫಿನಾಡು ಸಾಕ್ಷಿಯಾಗುತ್ತಾ ಎನ್ನುವ ಅನುಮಾನ ಜನರನ್ನು ಕಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+