ಚಿಕ್ಕಮಗಳೂರು: ಹುಡುಗಿಗಾಗಿ ಬುರ್ಖಾ ಧರಿಸಿ, ನೈಲ್ ಪಾಲಿಶ್ ಹಾಕಿಕೊಂಡು ಯುವಕನ ಓಡಾಟ

ಚಿಕ್ಕಮಗಳೂರು, ಆಗಸ್ಟ್‌ 13: ತನ್ನ ಹುಡುಗಿಗಾಗಿ ಯುವಕನೋರ್ವ ಬುರ್ಖಾ ಧರಿಸಿ ಬಂದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಯುವಕನೊಬ್ಬ ಬುರ್ಖಾ ತೊಟ್ಟು ಚಿಕ್ಕಮಗಳೂರು ನಗರದಲ್ಲಿ ಓಡಾಡಿದ್ದಾನೆ. ಯುವಕನ ವರ್ತನೆ ಕಂಡು ವಿಚಾರಿಸಿದಾಗ ಬುರ್ಖಾ ಒಳಗೆ ಇರುವುದು ಹುಡುಗಿಯಲ್ಲ ಹುಡುಗ ಎಂದು ತಿಳಿದು ಬಂದಿದ್ದು, ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಬುರ್ಖಾ ತೊಟ್ಟು ಬಂದ ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಬಾಳೆಹೊನ್ನೂರು ಮೂಲದ ಯುವಕನೊಬ್ಬ ಮಹಿಳೆಯಂತೆ ವೇಷ ಧರಿಸಿ ಓಡಾಡುತ್ತಿದ್ದ, ಬುರ್ಖಾ ಧರಿಸಿ, ಕೈ ಬೆರಳುಗಳಿಗೆ ನೈಲ್ ಪಾಲಿಶ್ ಹಾಕಿಕೊಂಡು ನಗರದ ರಸ್ತೆಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯ ಯುವಕರಿಬ್ಬರು ಅನುಮಾನದಿಂದ ಕರೆದು ವಿಚಾರಣೆ ನಡೆಸಿದ್ದಾರೆ.

A Young Man Wearing A Burqa And Running Around Chikkamagaluru

ಈ ವೇಳೆ ಬುರ್ಖಾ ಧರಿಸಿ ಬಂದಿರುವುದು ಯುವಕ, ಯುವತಿಯಲ್ಲ ಎನ್ನುವುದು ತಿಳಿದುಬಂದಿದೆ. ಕೂಡಲೇ ಯುವಕರು ಧರ್ಮದೇಟು ಕೊಟ್ಟು ವಿಚಾರಣೆ ನಡೆಸಿದಾಗ, ನಾನು ನನ್ನ ಹುಡುಗಿಗಾಗಿ ಬುರ್ಖಾ ಧರಿಸಿ ಬಂದಿದ್ದೇನೆ ಎಂದು ಬಾಳೆಹೊನ್ನೂರು ಮೂಲದ ಯುವಕ ಹೇಳಿದ್ದಾನೆ. ಬಳಿಕ ಆತನನ್ನು ಪರಿಶೀಲನೆ ನಡೆಸಿದಾಗ ಆತನ ಬಳಿ ಚಾಕು ಇರುವುದು ತಿಳಿದು ಬಂದಿದೆ.

ನನ್ನನ್ನು ಬಿಟ್ಟು ಬಿಡಿ..ನಾನೇನು ಮಾಡಿಲ್ಲ...ನನ್ನ ಹುಡುಗಿಗಾಗಿ ಬುರ್ಖಾ ಧರಿಸಿ ಬಂದಿದ್ದೇನೆ ಎಂದು ಯುವಕ ಹೇಳಿದ್ದಾನೆ. ಆದರೆ ಆತನ ಮೇಲೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರು ಬುರ್ಖಾ ಧರಿಸಿ ಬಂದ ಯುವಕನನ್ನು ವಿಚಾರಣೆ ನಡೆಸಿದ್ದಾರೆ.

A Young Man Wearing A Burqa And Running Around Chikkamagaluru

ಶಿವಮೊಗ್ಗದಲ್ಲಿ ಪಿಕಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ

ಪಿಕಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಗಸರಕೋಣೆ ಬಳಿ ಘಟನೆ ನಡೆದಿದೆ. ಅಗಸರಕೋಣೆಯ ಶರತ್ ಹಾಗೂ ಕೇರಳದ ಮೂಲದ ವ್ಯಕ್ತಿ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಆಗುಂಬೆ ವ್ಯಾಪ್ತಿಯ ಬಿದರಗೋಡು ಸಮೀಪದ ಅಗಸರಕೋಣೆ ಬಳಿ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಬೈಕ್ ಎದುರಿಗೆ ಬರುತ್ತಿದ್ದ ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್‌ನಲ್ಲಿದ್ದ ಓರ್ವ ಹಾಗೂ ಪಿಕಪ್‌ನಲ್ಲಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+