ಸೋಮ್ಲಾಪುರದಲ್ಲಿ 13 ಅಡಿ ಉದ್ದವಿರುವ ಬೃಹತ್ ಕಾಳಿಂಗ ಸರ್ಪ ಸೆರೆ
Recommended Video

ಚಿಕ್ಕಮಗಳೂರು, ನವೆಂಬರ್.20: ಕೊಪ್ಪ ತಾಲೂಕಿನ ಸೋಮ್ಲಾಪುರ ಗ್ರಾಮದ ಚೈತ್ರಾ ಕುಮಾರ್ ಮನೆಯಲ್ಲಿ ಒಂದು ವಾರದಿಂದ ವಾಸವಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
13 ಅಡಿಯಿರುವ ಈ ಕಾಳಿಂಗ ಸರ್ಪ ಅಡಿಕೆ ಮರದ ಲಾಟಿನಲ್ಲಿ ಅಡಗಿ ಕೂತಿತ್ತು. ಇದನ್ನು ಕಂಡೊಡನೆ ಭಯಗೊಂಡ ಮನೆಯವರು ಉರಗ ತಜ್ಞ ಸ್ನೇಕ್ ಹರೀಂದ್ರ ಅವರಿಗೆ ಕರೆ ಮಾಡಿದ್ದಾರೆ. ಸ್ನೇಕ್ ಹರೀಂದ್ರ ಅವರು ಒಂದು ಗಂಟೆ ಕಾರ್ಯಚರಣೆ ನಡೆಸಿದ ನಂತರ ಕಾಳಿಂಗ ಸರ್ಪ ಸೆರೆಯಾಗಿದೆ.
ಕೊನೆಗೆ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಹರೀಂದ್ರ ಸರ್ಪವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ.

ಕೆಲವು ವಾರಗಳ ಹಿಂದೆಯಷ್ಟೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತ್ತು. ಈ ಹಿಂದೆಯೂ ಇದೇ ಹಾವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಆದರೆ ಈ ಬಾರಿ ಉರಗತಜ್ಞರ ಸಹಾಯದಿಂದ ಹಾವನ್ನು ಸೆರೆಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾದರು.

ಎರಡು ತಿಂಗಳ ಹಿಂದೆ ಕಾರ್ಕಳ ತಾಲೂಕಿನ ಜಾರ್ಕಳ, ಅರ್ಜೆಡ್ಡು ಗ್ರಾಮದಲ್ಲಿ ಈ ಕಾಳಿಂಗ ಹಾವು ಮರವೇರಿ ಕುಳಿತು ಗ್ರಾಮಸ್ಥರ ನಿದ್ದೆಗೆಡಿಸಿತ್ತು.












Click it and Unblock the Notifications