ಕಾಫಿನಾಡಲ್ಲಿ ಇಂದು 82 ಮಂದಿಗೆ ಕೊರೊನಾ ಸೋಂಕು ದೃಢ
ಚಿಕ್ಕಮಗಳೂರು, ಜುಲೈ 22: ಕಾಫಿನಾಡಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮುಂದುವರಿದಿವೆ. ಜಿಲ್ಲೆಯಲ್ಲಿ ಇಂದು 82 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Recommended Video
ಟ್ಯಾಂಕರ್ ನಲ್ಲಿ ಇದ್ದ ಹಾಲನ್ನು ರಸ್ತೆಗೆ ಚೆಲ್ಲಿದ ಪ್ರತಿಭಟನಾಕಾರರು | Oneindia Kannada
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕು ಪ್ರಕರಣದಿಂದ ಇಬ್ಬರ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು 500 ರ ಗಡಿ ತಲುಪಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಇಂದಿನ ಪ್ರಕರಣಗಳಲ್ಲಿ ಕಡೂರು 21, ಚಿಕ್ಕಮಗಳೂರು 29, ಶೃಂಗೇರಿ 2, ಕೊಪ್ಪ 5, ಎನ್.ಆರ್ ಪುರ 8, ಮೂಡಿಗೆರೆ 13, ಅಜ್ಜಂಪುರ 1, ತರೀಕೆರೆಯಲ್ಲಿ 3 ಸೋಂಕು ಪ್ರಕರಣ ದಾಖಲಾಗಿವೆ.

256 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 484 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಇಂದು 51 ಜನ ಬಿಡುಗಡೆಯಾಗಿದ್ದಾರೆ.












Click it and Unblock the Notifications