• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತಿವೃಷ್ಟಿ ಹಾನಿ; ಚಿಕ್ಕಮಗಳೂರಿಗೆ 37.81 ಕೋಟಿ ಪರಿಹಾರ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಜನವರಿ 08: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ನಷ್ಟಕ್ಕೆ ಕರ್ನಾಟಕ ಸರ್ಕಾರ 37.81 ಕೋಟಿ ರೂ. ಪರಿಹಾರ ನೀಡಿದೆ. ಜಿಲ್ಲಾಡಳಿತ 281.26 ಕೋಟಿ ರೂ. ಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಿಂದ ಪ್ರಾಣಹಾನಿ ಮತ್ತು ಜಾನುವಾರುಗಳು ಸಾವಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಿಹಾರವನ್ನು ನೀಡಲಾಗಿದೆ. ಭಾಗಶಃ ಮತ್ತು ಪೂರ್ಣಪ್ರಮಾಣದಲ್ಲಿ ಹಾನಿಯಾಗಿದ್ದ ಮನೆಗಳಿಗೂ ಪರಿಹಾರವನ್ನು ಜಿಲ್ಲಾಡಳಿತ ನೀಡಿದೆ.

ಅಕಾಲಿಕ ಮಳೆ; ಸಂಕಷ್ಟಕ್ಕೆ ಸಿಲುಕಿದ ಕಾಫಿ ಬೆಳೆಗಾರರು

ಲೋಕೋಪಯೋಗಿ ಇಲಾಖೆಗೆ ರಸ್ತೆ ದುರಸ್ತಿ ಕಾಮಗಾರಿಗೆ 71.65 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆಗೆ 141.06 ಕೋಟಿ, ಸಣ್ಣನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ 1.07 ಕೋಟಿ ರೂ., ಮೆಸ್ಕಾಂ ಇಲಾಖೆಯಲ್ಲಿ ಹಾನಿಯಾಗಿರುವ ವಿದ್ಯುತ್ ಕಂಬಗಳ ಬದಲಾವಣೆಗೆ 2.59 ಕೋಟಿ ರೂ., ಹಾನಿಯಾಗಿರುವ ಸರ್ಕಾರಿ ಕಟ್ಟಡಗಳ ದುರಸ್ಥಿತಿಗೆ 7.54 ಕೋಟಿ ರೂ., ಮನೆ ಹಾನಿ ಪರಿಹಾರಕ್ಕೆ 6.37 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ದುರಸ್ಥಿಗೆ 2.76 ಕೋಟಿ ರೂ., ಮೆಸ್ಕಾಂಗೆ 2.89 ಕೋಟಿ ರೂ., ಆರೋಗ್ಯ ಇಲಾಖೆಗೆ ಕಟ್ಟಡ ಹಾನಿಗೆ 1.20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

30 ವರ್ಷಗಳಲ್ಲೇ ಕಾಣದಂಥ ಮಳೆ ಸುರಿಯಲು ಕಾರಣವೇನು?

ಅಧಿಕ ಮಳೆಯಿಂದ ಜಿಲ್ಲೆಯಲ್ಲಿ 2 ಹೆಕ್ಟೇರ್ ಕಡಿಮೆ ಹೊಂದಿರುವ ರೈತರು ಸೇರಿದಂತೆ 3786.21 ಹೆಕ್ಟೇರ್ ಬೆಳೆನಾಶಕ್ಕೆ 11.71 ಕೋಟಿ ರೂ., ಎರಡು ಹೆಕ್ಟೇರ್‌ಗೆ ಮೇಲ್ಪಟ್ಟ ಬೆಳೆಹಾನಿಯಾಗಿದ್ದ 1957.18 ಹೆಕ್ಟೇರ್ ಪ್ರದೇಶಕ್ಕೆ 14.67 ಕೋಟಿ ರೂ.ಗಳಿಗೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿತ್ತು.

ಕಳೆದ ತಿಂಗಳ ಅಂತ್ಯಕ್ಕೆ 17, 322 ರೈತರಿಗೆ ಬೆಳೆ ಪರಿಹಾರವಾಗಿ 25.85 ಕೋಟಿ ರೂ.ಗಳ ಪರಿಹಾರವನ್ನು ಬಿಡುಗಡೆಮಾಡಿದ್ದು, ನೇರವಾಗಿ ರೈತರ ಖಾತೆಗೆ ಹಣಜಮೆಯಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ, ಜಿಲ್ಲಾಡಳಿತಕ್ಕೆ ಸಲ್ಲಿಸುತ್ತಿದ್ದಂತೆ ಜಿಲ್ಲಾಡಳಿತ ಯೋಜನೆಗೆ ಅನುಮತಿ ನೀಡುತ್ತಿದ್ದು, ಕೂಡಲೇ ಆಗಬೇಕಾಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇದರಿಂದ ಸಹಕಾರಿಯಾಗಲಿದೆ.

English summary
Karnataka government released 37.81 crore for the Chikkamagaluru district. Fund used for repair work of road and buildings which effected from heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X