ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಮಿಗಳ ದಿನ; ದೇಶ, ವಿದೇಶಕ್ಕೆ ಗುಲಾಬಿ ಕಳಿಸುವ ಚಿಕ್ಕಬಳ್ಳಾಪುರ ರೈತ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಫೆಬ್ರವರಿ 13; ಸೋಮವಾರ ಪ್ರೇಮಿಗಳ ದಿನ. ಗುಬಾಬಿ ಹೋವುಗಳಿಗೆ ಪ್ರತಿದಿನವೂ ಬೇಡಿಕೆ ಹೆಚ್ಚಿರುತ್ತದೆ. ಪ್ರೇಮಿಗಳ ದಿನದಂದು ಕೆಂಪು ಗುಲಾಬಿಗೆ ಬೇಡಿಕೆ ಮತ್ತಷ್ಟು ಹೆಚ್ಚು. ಚಿಕ್ಕಬಳ್ಳಾಪುರದ ರೈತರೊಬ್ಬರು ಬೆಳೆಯುವ ಗುಲಾಬಿ ದೇಶ, ವಿದೇಶಗಳಿಗೆ ತೆರಳುತ್ತದೆ.

ಪ್ರೇಮಿಗಳು ದಿನದಿಂದು ತಮ್ಮ ಪ್ರೇಮವನ್ನು ವಿವಿಧ ರೂಪದಲ್ಲಿ ಪ್ರೇಮಿಗಳು ತೋರಿಸಲು ಈ ಗುಲಾಬಿ ಹೂಗಳು ಪ್ರಮುಖ ಕಾರಣ. ಈ ವರ್ಷವೂ ಪ್ರೇಮಿಗಳ ದಿನಾಚಾರಣೆಗೆ ಗುಲಾಬಿ ಹೂಗಳಿಗೆ ಭಾರೀ ಬೇಡಿಕೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ತುಂಬಿದೆ.

Valentine's Week List 2022: ಪ್ರೇಮಿಗಳ ವಾರ: ಯಾವ್ಯಾವ ದಿನ ಏನೆಲ್ಲಾ ವಿಶೇಷValentine's Week List 2022: ಪ್ರೇಮಿಗಳ ವಾರ: ಯಾವ್ಯಾವ ದಿನ ಏನೆಲ್ಲಾ ವಿಶೇಷ

ಬಯಲು ಸೀಮೆಯ ಯುವ ರೈತ ಪ್ರೇಮಿಗಳ ದಿನಾಚರಣೆಗೆ ಗುಲಾಬಿ ಬೆಳೆದು ಕೈಗಿಡುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಮಚಂದ್ರ ಹೊಸುರು ಗ್ರಾಮದ ನಿವಾಸಿಯಾಗಿರುವ ಯುವ ರೈತ ರವಿಕುಮಾರ್ ತಮ್ಮ 5 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಗುಲಾಬಿ ಹೂವುಗಳನ್ನ ಬೆಳೆದಿದ್ದಾರೆ. ವಿಶೇಷವಾಗಿ ಪ್ರೇಮಿಗಳ ದಿನಾಚರಣೆಗೆ ದೇಶ-ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.

Valentine's Day Horoscope 2022: ಪ್ರೇಮಿಗಳ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?Valentine's Day Horoscope 2022: ಪ್ರೇಮಿಗಳ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?

Valentine Day Chikkaballapur Farmer Busy In Rose Farming

ಫೆಬ್ರವರಿ 14 ಬಂತು ಅಂದರೆ ಪ್ರೆಮಿಗಳಿಗೆ ಗುಲಬಿ ಹೂ ಬಿಟ್ಟರೆ ಬೇರೆ ಏನು ಕಾಣಿಸುವುದಿಲ್ಲ. ಹೀಗಾಗಿ ಪ್ರಮಿಗಳ ದಿನಾಚಾರಣೆ ಬಂತೆಂದರೆ ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ. ಪ್ರೇಮಿಗಳ ದಿನದಂದು ಪ್ರೀತಿಸಿದ ಹುಡುಗಿಗೆ ಕೆಂಪು ಗುಲಾಬಿ ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸೋದು ವಾಡಿಕೆ.

ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ

ಎಲ್ಲರನ್ನು ಸೆಳೆಯುವಂತಹ ಈ ಕೆಂಪು ಗುಲಾಬಿ ಹೂಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಪಾಲಿಹೌಸ್ ಮೂಲಕ ಬೆಳೆಯುತ್ತಾರೆ. ಉತ್ಕೃಷ್ಟ ಗುಣಮಟ್ಟದ ಕೆಂಪು ಗುಲಾಬಿ ಹೂಗಳ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಯುವತಿಯರು ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಾರೆ.

Valentine Day Chikkaballapur Farmer Busy In Rose Farming

ಯಾವ ಹೂವು ಯಾರ ಮುಡಿಗೂ ಅನ್ನೋ ಹಾಡಿನ ಹಾಗೆ ಬಯಲು ಸೀಮೆಯ ರೈತರು ಬೆಳೆಯುವ ಸಂವೃದ್ಧವಾದ ಹೂವುಗಳು ದೇಶ-ವಿದೇಶಗಳಿಗೆ ರಫ್ತಾಗಿ ಯಾವ ಪ್ರೇಮಿಗಳ ಕೈ ಸೇರುತ್ತದೆಯೋ ಯಾರು ಬಲ್ಲರು.

ಗುಲಾಬಿ ಕೃಷಿ ಬಗ್ಗೆ ರೈತ ರವಿಕುಮಾರ್ ಮಾತನಾಡಿದ್ದು, "ಪ್ರೇಮಿಗಳ ದಿನವಾದ್ದರಿಂದ ಗುಲಾಬಿಗೆ ಭಾರೀ ಬೇಡಿಕೆ ಇದೆ. 15 ರಿಂದ 20 ರೂ. ತನಕ ಮಾರಾಟವಾಗುತ್ತಿದೆ. ಕೆಲವರು ಇಲ್ಲೇ ಬಂದು ಖರೀದಿ ಮಾಡುತ್ತಾರೆ" ಎಂದು ಹೇಳಿದರು.

English summary
Chikkaballapur farmer Ravi Kumar busy in rose farming. Huge demand for red rose in the time of valentine day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X