• search
 • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ಸೂಪರ್ ಸಿಎಂ, ಪರಮೇಶ್ವರ್ ಹಾಫ್ ಸಿಎಂ: ಅಮಿತ್ ಶಾ

|
   ಸಿದ್ದರಾಮಯ್ಯ ಸೂಪರ್ ಸಿಎಂ, ಪರಮೇಶ್ವರ್ ಹಾಫ್ ಸಿಎಂ..!

   ಚಿಕ್ಕಬಳ್ಳಾಪುರ, ಫೆಬ್ರವರಿ 21: ಕರ್ನಾಟಕದಲ್ಲಿ ಸಿದ್ದರಾಮಯ್ಯ ಸೂಪರ್ ಸಿಎಂ ಆಗಿ ಮೆರೆಯುತ್ತಿದ್ದಾರೆ, ಪರಮೇಶ್ವರ್ ಹಾಫ್ ಸಿಎಂ ಆಗಿದ್ದಾರೆ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದರೂ ಲೆಕ್ಕಕ್ಕಿಲ್ಲದಂತಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.

   ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮುಂದೆ ಹಲವು ಪ್ರಶ್ನೆ ಇಟ್ಟ ಕೆಪಿಸಿಸಿ

   ದೇವನಹಳ್ಳಿ ಸಮೀಪದ ಆವತಿ ಬಳಿ ಅನಂತವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಬೂತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಸಿಎಂ ಮಾಡಿದ್ದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಎಂದು ಹೇಳುವ ಕುಮಾರಸ್ವಾಮಿ, ರಾಜ್ಯದ ಜನಕ್ಕೆ ನಿಷ್ಠರಾಗಿಲ್ಲ, ರಾಹುಲ್ ಗಾಂಧಿಗೆ ನಿಷ್ಟರಾಗಿದ್ದಾರೆ ಎಂದು ಹೇಳಿದರು.

   ಕಾಂಗ್ರೆಸ್‌ಗೆ ದೇಶಭಕ್ತಿ ಇಲ್ಲ, ಅವರಿಂದ ನಾವು ಕಲಿಯಬೇಕಿಲ್ಲ: ಅಮಿತ್ ಶಾ

   ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಗೆ ಜನರು ಆಶೀರ್ವಾದ ಮಾಡಿ 104 ಸ್ಥಾನಗಳನ್ನು ನೀಡಿದ್ದರು, ಆದರೆ ಅಪವಿತ್ರ ಮೈತ್ರಿ ಮೂಲಕ ಕಡಿಮೆ ಸ್ಥಾನ ಗಳಿಸಿದ ಜೆಡಿಎಸ್ ಅಧಿಕಾರ ಅನುಭವಿಸುತ್ತಿದೆ. ಕುಮಾರಸ್ವಾಮಿ ಅವರ ನಿಷ್ಠೆ ಸೋನಿಯಾ, ರಾಹುಲ್ ಪಾದಕ್ಕಾ ಅಥವಾ ರಾಜ್ಯದ ಜನರಿಗಾ ಎಂದು ಪ್ರಶ್ನೆ ಮಾಡಿದರು.

   ಮಹಾಘಟಬಂಧನ್‌ನಲ್ಲಿ ಎಲ್ಲರಿಗೂ ಪ್ರಧಾನಿ ಆಗುವ ಆಸೆ ಇದೆ, ಜನರಿಗೆ ಅಭದ್ರ ಸರ್ಕಾರ ಬೇಕೋ ಅಥವಾ ಸುಭದ್ರ ಸರ್ಕಾರ ಬೇಕೋ ಎಂದು ಅವರೇ ನಿರ್ಣಯಿಸುತ್ತಾರೆ ಎಂದು ಅಮಿತ್ ಶಾ ಹೇಳಿದರು.

   ಲೋಕ ಸಮರ: ಬಿಜೆಪಿ-ಶಿವಸೇನಾ ಮೈತ್ರಿ, ಅಮಿತ್ ಶಾ ಚಾಣಾಕ್ಷ ನಡೆ

   ಕರ್ನಾಟಕದಲ್ಲಿ 48,000 ಕೋಟಿ ರೂ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಆದರೆ, ಕೇವಲ 1600 ಕೋಟಿ ರೂ. ಮಾತ್ರ ಮನ್ನಾ ಮಾಡಿದ್ದಾರೆ ಎಂದು ಕುಟುಕಿದರು. ರಾಹುಲ್‌ ಗಾಂಧಿಗೆ ಆಲೂಗಡ್ಡೆ ನೆಲದ ಮೇಲೆ ಬೆಳೆಯುತ್ತೋ, ನೆಲದ ಒಳಗೆ ಬೆಳೆಯುತ್ತದೆಯೋ ಗೊತ್ತಿಲ್ಲ ಎಂದು ಹಾಸ್ಯ ಮಾಡಿದರು.

   English summary
   BJP national president Amit Shah visited Karnataka today. He addressed party workers near Devenahalli and said 'In Karnataka Siddaramaiah behaving like super CM and Parameshwar as half CM.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X