Get Updates
Get notified of breaking news, exclusive insights, and must-see stories!

ಹೊಸತೊಡಕು, ರಂಜಾನ್‌ ಹೊತ್ತಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಕುರಿಗಳು ಮಂಗಮಾಯ

ಯುಗಾದಿ ಹಾಗೂ ರಂಜಾನ್‌ ಹಬ್ಬಗಳು ಸಾಲಾಗಿ ಬಂದಿದೆ. ಹೊಸತೊಡಕು ಹಾಗೂ ರಂಜಾನ್‌ಗೆ ಕುರಿ ಹಾಗೂ ಮೇಕೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡು. ಕುರಿ ಸಾಕುವವರು ಕೂಡ ಯುಗಾದಿಗಾಗಿ ವರ್ಷವಿಡೀ ಕುರಿಗಳನ್ನು ಮೇಯಿಸಿ, ಚೆನ್ನಾಗಿ ದಷ್ಟಪುಷ್ಟವಾಗಿ ಬೆಳೆಸಿರುತ್ತಾರೆ. ಹಬ್ಬದ ವೇಳೆ ಕೈತುಂಬಾ ಲಾಭ ನೋಡೋಣ ಅಂತ ಬೆವರು ಹರಿಸಿರುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಚಾಲಾಕಿ ಕಳ್ಳರು ಕುರಿ ಮೇಕೆಗಳನ್ನು ಕದಿಯಲು ಮುಂದಾಗಿದ್ದಾರೆ ಎಂಬ ಸಂಗತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೇಳಿಬಂದಿದೆ.

ಈ ಬಾರಿ ಯುಗಾದಿ ಹಬ್ಬವು ಭಾನುವಾರದಂದು ಬಂದಿರುವುದರಿಂದ ಪ್ರತಿ ವರ್ಷದಂತೆ ಯುಗಾದಿ ಮರುದಿನವೇ ಹೊಸತೊಡಕು ಮಾಡಲು ಸಾಧ್ಯವಾಗಿಲ್ಲ. ಬದಲಿಗೆ ಮಂಗಳವಾರದಂದು ಹೊಸ ತೊಡಕು ನಿಗದಿಯಾಗಿದೆ. ಯುಗಾದಿ ಆಚರಿಸುವ ಹೆಚ್ಚಿನ ಸಂಖ್ಯೆಯ ಜನರು ಆ ದಿನ ಮಾಂಸಾಹಾರದ ಖಾದ್ಯಗಳನ್ನು ಮನೆಯಲ್ಲಿ ಸಿದ್ಧಪಡಿಸಿ, ತಿಂದು ತೇಗುತ್ತಾರೆ. ಹಾಗಾಗಿ ಈ ಹಬ್ಬದ ವೇಳೆ ಮಟನ್‌ ದರ ಕೂಡ ಸಾಮಾನ್ಯ ದಿನಕ್ಕಿಂತ ತುಸು ದುಬಾರಿಯಾಗಿರುತ್ತೆ. ಹೀಗಾಗಿ ಕಳ್ಳರು ಕಾಸಿಗಾಗಿ ಕುರಿ ಹಾಗೂ ಮೇಕೆಗಳನ್ನು ಕದಿಯಲು ದೊಡ್ಡ ಸಂಚು ನಡೆಸಿದ್ದಾರೆ ಎನ್ನಲಾಗಿದೆ.

Sheep Theft Cases In Chikkaballapur Ahead Of Ugadi Ramadan

ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಗ್ರಾಮಗಳು ಹಾಗು ಶಿಡ್ಲಘಟ್ಟ ಗ್ರಾಮಾಂತರ ಭಾಗದ ಹಲವೆಡೆ ಕಳ್ಳರು ರಾತ್ರೋರಾತ್ರಿ ದೊಡ್ಡಿಗಳಿಗೆ ನುಗ್ಗಿ ಕುರಿಗಳನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಇನ್ನು ನಂದಿಗಿರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೆ 15ಕ್ಕೂ ಹೆಚ್ಚು ಕುರಿಗಳು ಕಣ್ಮರೆಯಾಗಿವೆ. ಈ ಸಂಬಂಧ ಕೇಸ್‌ಗಳು ಕೂಡ ದಾಖಲಾಗಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಎಸ್‌ಪಿ ಕುಶಲ್‌ ಚೌಕ್ಸೆ, ಚಿಂತಾಮಣಿ ಉಪವಿಭಾಗ, ಭಟ್ರಹಳ್ಳಿ, ಶಿಡ್ಲಘಟ್ಟ ಸೇರಿ ನಾಲ್ಕು ಠಾಣಾ ವ್ಯಾಪ್ತಿಗಳಲ್ಲಿ ಈ ಕುರಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ. ಅಲ್ಲದೆ ಭಾರಿ ಡಿಮ್ಯಾಂಡ್‌ನಲ್ಲಿರೋ ಬನ್ನೂರು ಕುರಿಗಳನ್ನು ಎಗರಿಸಲು ಸ್ಕೆಚ್‌ ಹಾಕಿದ್ದ ಎರಡು ಗ್ಯಾಂಗ್‌ಗಳನ್ನು ಪೊಲೀಸರು ಲಾಕ್‌ ಮಾಡಿದ್ದಾರೆ. ಎರಡು ಗ್ಯಾಂಗ್‌ ಬಂಧಿಸಿ, ಅವರಿಂದ ಹಣ, ಮೊಬೈಲ್‌, ವಾಹನ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಆರೋಪಗಳನ್ನ ಬಂಧಿಸಿರುವ ಪೊಲೀಸರು ಅವರಿಂದ ಕದ್ದ ಕುರಿಗಳನ್ನು ಪತ್ತೆ ಹಚ್ಚಲು ವಿಫಲರಾಗಿದ್ದಾರೆ. ಆದರೆ ಆ ಕುರಿಗಳ ಮೊತ್ತವನ್ನು ವಸೂಲಿ ಮಾಡಿ ಆ ಹಣವನ್ನು ಮಾಲೀಕರಿಗೆ ಹಿಂದಿರುಗಿಸುವ ಕೆಲಸ ನಡೆದಿದೆ. ಇನ್ನು ಈ ದಿಢೀರ್‌ ಕಳ್ಳತನದಿಂದ ಕುರಿ ಸಾಕುವವರು ಕಂಗಾಲಾಗಿದ್ದಾರೆ. ವರ್ಷವೆಲ್ಲ ಹಬ್ಬಕ್ಕಾಗಿ ಸಾಕಿ ಬೆಳೆಸಿದ ಕುರಿಗಳನ್ನು ಕಳ್ಳರು ಸಲೀಸಾಗಿ ಎಗರಿಸುತ್ತಿರುವುದು ಅವರ ಆತಂಕಕ್ಕೂ ಕಾರಣವಾಗಿದೆ. ಕಳ್ಳತನದ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ರೈತರು ತಮ್ಮ ಕುರಿಗಳನ್ನು ಹಗಲು ರಾತ್ರಿಯೆನ್ನದೆ ಕಾಯುತ್ತಿದ್ದಾರೆ. ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ವಿವಿಧ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಹೊಸ ತೊಡಕು ದಿನ ಗ್ರಾಮೀಣ ಭಾಗದಲ್ಲಿ ಕುರಿ ಹಾಗೂ ಮೇಕೆ ಮಟನ್‌ಗೆ ಬಲು ಬೇಡಿಕೆ ಇರುತ್ತೆ. ಕೆಲವರು ಕುರಿಗಳನ್ನು ತಂದು ಗುಡ್ಡೆಮಾಂಸವಾಗಿ ಹಂಚಿಕೊಳ್ಳುತ್ತಾರೆ. ಮಂಗಳವಾರ ಹೊಸತೊಡಕು ಇರುವ ಹಿನ್ನೆಲೆ ಸೋಮವಾರ ಮಧ್ಯರಾತ್ರಿಯಿಂದಲೇ ಎಲ್ಲ ಮಾಂಸದ ಅಂಗಡಿಗಳು ಓಪನ್‌ ಆಗಲಿವೆ. ಗ್ರಾಹಕರಿಗಾಗಿ ಪೆಂಡಾಲ್‌ ಹಾಗೂ ಝಗಮಗಿಸುವ ಲೈಟಿಂಗ್‌ ಹಾಕಿಕೊಂಡು ಮಾಂಸದಂಗಡಿ ಮಾಲೀಕರು ಕಾಯುತ್ತಿದ್ದಾರೆ.

ಇತ್ತೀಚೆಗೆ ಹಕ್ಕಿಜ್ವರ ಹೆಚ್ಚಾದ ಹಿನ್ನೆಲೆ ಚಿಕನ್‌ ದರ ದಿಢೀರ್‌ ಕಡಿಮೆಯಾಗಿತ್ತು. ಈಗ ಯುಗಾದಿ ಹಬ್ಬ ಬಂದ ಕಾರಣಕ್ಕೆ ದರಗಳು ತುಸು ಏರಿವೆ. ಮಟನ್‌ ರೇಟ್‌ ಕೂಡ ಒಂದು ಸಾವಿರ ರೂಪಾಯಿಯ ಅಂಚಿನಲ್ಲಿದೆ. ಹೊಸತೊಡಕು, ರಂಜಾನ್‌ ಇರುವುದರಿಂದ ಸಹಜವಾಗಿಯೇ ಮಾಂಸದ ದರಗಳು ಏರಿಕೆ ಕಂಡಿವೆ. ಏನೇ ಆಗಲಿ ಮಂಗಳವಾರದಂದು ಮಾಂಸಹಾರಿಗಳಿಗೆ ಮಂಗಳವಾರವೇ ನಿಜವಾದ ಹಬ್ಬ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+