ಸಂಜೆಯಾಗುತ್ತಲೇ ಶಾಸಕರಿಗೆ ಮಾಮೂಲಿ ವಸೂಲಿಗಾಗಿ ಏಜೆಂಟರ ಆಯ್ಕೆ ಮಾಡಿಕೊಂಡಿದ್ದಾರೆ: ಹೀಗಂದಿದ್ದು ಯಾರು?
ಚಿಕ್ಕಬಳ್ಳಾಪುರ ಅಕ್ಟೋಬರ್ 22: ನಮ್ಮ ಸ್ವಗ್ರಾಮ ಪೆರೇಸಂದ್ರ ಗ್ರಾಮದಲ್ಲಿ ಸೋಮವಾರ ನಡೆಯುವ ಸಂತೆಯಲ್ಲಿ ಒಳ್ಳೆ ಬಳೆಗಳು ಸಿಗುತ್ತವೆ, ಕಳುಹಿಸಿಕೊಡುತ್ತೇನೆ ಹಾಕಿಕೊಳ್ಳೋದಕ್ಕೆ ಹೇಳಿ ಎಂದು ಸಂಸದ ಡಾ. ಕೆ. ಸುಧಾಕರ್ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ನಂತರ ಪ್ರತಿಕ್ರಿಯೆ ನೀಡಿದ ಅವರು ಶಾಸಕರಾಗಿದ್ದುಕೊಂಡು ಗಾಣಿಗರಿಕೆಯಿಂದ ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದರೆ ಗಾಣಿಗರಿಕೆ ನಿಲ್ಲಿಸಲು ತನ್ನಿಂದ ಆಗುವುದಿಲ್ಲ ಎನ್ನುವುದಾದರೆ ನಿಮಗೇಕೆ ಈ ಅಧಿಕಾರ ಬುಧವಾರ ಮತ್ತು ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಂತೆ ನಡೆಯುತ್ತದೆ, ಸೋಮವಾ ಪೆರೇಸಂದ್ರ ಗ್ರಾಮದಲ್ಲಿ ಸಂತೆ ನಡೆಯುತ್ತದೆ, ಒಳ್ಳೆ ಬಳೆ ಕೊಡಿಸುತ್ತೇನೆ ತೊಟ್ಟುಕೊಳ್ಳಲಿ ಎಂದು ವ್ಯಂಗ ಮಾಡಿದರು.

ಪರೇಸಂದ್ರ ಸುತ್ತ ಮುತ್ತಲು ಮಿತಿ ಮೀರಿದ ಕ್ವಾರಿ ಹಾಗೂ ಕ್ರಷರ್ ಗಳಿಂದ ಪರಿಸರ ನಾಶ ಹಾಗೂ ಕಲುಷಿತ ಗಾಳಿ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿಬಳುತ್ತಿರುವ ದೂರುಗಳ ಕುರಿತು ಇತ್ತೀಚಿಗೆ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡುವಾಗ, ಕ್ವಾರಿ ಮತ್ತು ಕ್ರಷರ್ ಗಳಿಗೆ ಕಡಿವಾಣ ಹಾಕಲು ನನ್ನೊಬ್ಬನಿಂದ ಆಗುವುದಿಲ್ಲ, ನಾನೇ ಮಾಡಬಹುದು ಎನ್ನುವುದಾದರೆ ಖಂಡಿತ ಮಟ್ಟ ಹಾಕುತ್ತೇನೆ, ಆದರೆ ಇದು ನನ್ನ ಮಟ್ಟದಲ್ಲಿ ಇಲ್ಲ, ಸರಕಾರದ ಮಟ್ಟದಲ್ಲಿ ಮಾಡಬೇಕಾಗಿದ್ದು ನನ್ನಿಂದ ಆಗುವುದಿಲ್ಲ, ಹಾಗಾಗಿ ಕ್ರಷರ್ ಹಾಗೂ ಕ್ವಾರಿಗಳಿಗೆ ಕಡಿವಾಣ ಹಾಕಿ ಕಲ್ಲು ಗಾಣಿಗರಿಕೆಯಿಂದ ಮುಕ್ತಿ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದರ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ ಸಂಸದರು ಶಾಸಕರು ಮಾಮೂಲಿ ವಸೂಲಿ ಮಾಡಲೆಂದೇ ಕೆಲವು ನಂಬಿಕಸ್ತ ಏಜೇಂಟರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರು ವಿವಿಧ ಕಾರು ಗಳಲ್ಲಿ, ಹೋಟೆಲ್ ರೂಮ್ ಗಳಲ್ಲಿ ವಸೂಲಿ ವ್ಯವಹಾರ ಮಾಡುತ್ತಿದ್ದಾರೆ, ಜಮೀನು ಪತ್ರಗಳು ಯಾವುದು ಇರಬೇಕು ಯಾವುದು ಇರಬಾರದು ಎಂದು ನಿರ್ಧಾರ ಮಾಡುತ್ತಿದ್ದು ಕಳೆದ 18 ತಿಂಗಳಲ್ಲಿ ಎಷ್ಟು ದಾಖಲೆ ಕಳೆದ ಹೋದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬುದನ್ನು ನೀವೇ ನೋಡಿ ಎಂದರು.

ರಾಜ್ಯದ ಜನತೆಗೆ ಭಾಗ್ಯವನ್ನು ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರಕಾರ ದೌರ್ಭಾಗ್ಯವನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಗಂಗಮ್ಮ ಗುಡಿ, ಬಜಾರ್ ರಸ್ತೆಯನ್ನು ಆಗಲೀಕರಣ ಮಾಡುತ್ತೇನೆ, ರಸ್ತೆ ಅಕ್ಕ ಪಕ್ಕ ಇರುವ ಮನೆಗಳನ್ನು ಒಡೆದು ಹಾಕುತ್ತೇನೆ ಎಂದು ಹೇಳುತ್ತೀರಿ, ರಸ್ತೆ ಆಗಲೀಕರಣ ಮಾಡಲು ಬಿಡಿಗಾಸು ತಂದಿಲ್ಲ. ಹಣವೇ ತರದೇ ಅದು ಹೇಗೆ ಅಂಗಡಿ ತೆರವು ಗೊಳಿಸುತ್ತಿರಿ, ಕಟ್ಟಡ ಮಾಲೀಕರನ್ನು ಬೀದಿ ಪಾಲು ಮಾಡುವುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಮಾಡಲು ಆಗುವುದಿಲ್ಲ, ಅನುದಾನ ತರಲು ಆಗುವುದಿಲ್ಲ, ತಂದ ಅನುದಾನವನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂದ ಮೇಲೆ ಶಾಸಕ ಸ್ಥಾನ ಏಕೆ ಬೇಕು ಎಂದು ಪ್ರಶ್ನಿಸುವಾಗ ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ರಸ್ತೆ ಅಗಲೀಕರಣಕ್ಕೆ ವಿರೋಧ: ನಗರದ ಗಂಗಮ್ಮ ಗುಡಿ ರಸ್ತೆ ಬಜಾರ್ ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಬೆಂಗಳೂರಿನಂತ ಮಹಾನಗರ ಪಾಲಿಕೆಯಲ್ಲೇ ಎಷ್ಟೋ ರಸ್ತೆಗಳು ಆಗಲೀಕರಣ ಮಾಡಿಲ್ಲ. ಇಲ್ಲಿ ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಎರಡೂ ರಸ್ತೆಗಳ ಅಗಲೀಕರಣ ವಿಚಾರ ದೂರದ ಮಾತು.
ಶಾಸಕ ಪ್ರದೀಪ್ ಈಶ್ವರ್ ಆ ಮನೆ ಒಡೀತೀನಿ, ಈ ಅಂಗಡಿ ಒಡೆಸ್ತೀನಿ ಅಂತ ಬೊಗಳೆ ಬಿಡುತಿದ್ದಾರೆ ಎಂದರು. ಇದೆ ವೇಳೆ ರಸ್ತೆ ಆಗಲೀಕರಣಕ್ಕೆ ಸರ್ಕಾರದಲ್ಲಿ ಅನುದಾನ ಏನಾದ್ರು ತಂದಿದ್ದಾರೆ ಎಲ್ಲಿ ತಂದಿದ್ದಾರೆ ತೋರಿಸಲಿ ಎಂದರು ಅಕ್ರಮ ಕೃಷರ್‌ಗಳನ್ನು ನಿಲ್ಲಿಸೋ ಅಧಿಕಾರ ನನ್ನ ಕೈಯಲಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿ ವುದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಶನಿವಾರ ಭಾನು ವಾರ ಮತ್ತು ಬುಧವಾರ ಎಲ್ಲಿ ಸಂತೆ ನಡೆಯುತ್ತೋ ಅಲ್ಲಿ ಒಳ್ಳೆ ಬಳೆ ಸಿಗುತ್ತೋ ಅಲ್ಲಿಗೆ ಬರಲಿ ತೊಡಿಸಿ ಕಳಿಸ್ತೇವೆ ಎಂದು ಚುಚ್ಚಿದರು.
ಪ್ರದೀಪ್ ಈಶ್ವರ್ ಶಾಸಕರಾದ ಹದಿನೇಳು ತಿಂಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಯಾವುದೆ ಕಚೇರಿಗಳಲ್ಲಿ ನೋಡಿದರೂ ಲಂಚಾವತಾರ ದಲ್ಲಾಳಿಗಳ ಮೂಲಕ ನಡೆಯುತ್ತಾ ಇದೆ. ಕ್ರಷರ್ ಲಾರಿಗಳ ಸಂಚಾರ ಈತನು ಹೇಳಿದ ಲಾರಿಗಳಿಗೆ ಯಾವುದೆ ಅಡೆತಡೆ ಇಲ್ಲ ಅವರಿಂದಲೂ ವಸೂಲಿ, ಕ್ರಷರ್‌ಗಳಿಂದಲೂ ವಸೂಲಿ ಮಾಡ್ತಿರೋದು ಗೊತ್ತು. ಮಾಮೂಲಿ ವಸೂಲಿಗೆ ಇಳಿದಿದ್ದಾರೆ. ನಗರಸಭೆಗೆ ಮೂರು ತಿಂಗಳಿಂದ ಪೌರಾ ಯುಕ್ತರನ್ನ ಹುಡುಕಿ ನೇಮಕ ಮಾಡಿಸುವ ಒಂದು ಸಣ್ಣ ಕೆಲಸ ಮಾಡೊಲಿಕ್ಕೂ ಶಾಸಕರಿಂದ ಆಗಿಲ್ಲ ಎಂದರು.
ಆಸ್ಪತ್ರೆಗೆ ಸೇರಿದೆ 40 ಎಕರೆ ಇದೆ: ಟ್ರಾಮಾ ಸ್ಕೀಮ್ ನಲ್ಲಿ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿಗೆ ಮಂಜೂರಾಗಿರೋ 30 ಬೆಡ್ ಆಸ್ಪತ್ರೆ ಸ್ಥಾಪನೆಗೆ ಸ್ಥಳವಾಕಾಶ ಎರಲಿಲ್ಲ ಎನ್ನುತ್ತಿದ್ದಾರೆ. ಮೆಡಿಕಲ್ ಕಾಲೇಜ್ ಆಸತ್ರೆಲಿ 40 ಎಕರೆ ಜಮೀನಿದೆ. ಐಸಿಯು ಘಟಕ ನಿರ್ಮಾಣಕ್ಕೆ ಒಂದುಎಕರೆ ಜಮೀನಷ್ಟೆ ಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇನ್ನೊಂದು 6 ತಿಂಗಳು ಮಾತ್ರ ಇರ್ತೀರಾ. ಇವರ ರಾಜಕೀಯ ಎಲ್ಲೀವರೆಗೂ ನಡೆಯುತ್ತೆ ನೋಡೋಣವೆಂದರು. ಈ ವೇಳೆ ನಗರಸಭಾ ಅಧ್ಯಕ್ಷ.ಎ.ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications