ಈ ಜಿಲ್ಲೆಯ 305 ಪಂಚಾಯಿತಿ ಸದಸ್ಯರಿಗಿಲ್ಲ ಅಕ್ಷರ ತಿಳುವಳಿಕೆ! ಅಕ್ಷರಸ್ಥರನ್ನಾಗಿಸಲು ಪ್ರಯತ್ನ..
ಚಿಕ್ಕಬಳ್ಳಾಪುರ ಫೆಬ್ರವರಿ 3: ಯಾವುದೇ ಒಬ್ಬ ಚುನಾಯಿತ ಪ್ರತಿನಿಧಿ ತನ್ನ ಪಾಲಿನ ಹೊಣೆಗಾರಿಕೆಗಳನ್ನು ನಿರ್ವಹಿಸಲು ಕನಿಷ್ಠ ಮಟ್ಟದ ಓದು, ಬರಹ ತಿಳುವಳಿಕೆ ಇರಬೇಕಾಗುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಅವರ ಅಧಿಕಾರವನ್ನು ಮತ್ತೊಬ್ಬರು ಚಲಾವಣೆ ಮಾಡುವ ಸಾಧ್ಯತೆ ಇರುತ್ತಡದೆ.
ಆಡಳಿತ ವಿಕೇಂದ್ರೀಕರಣದ ಮೊದಲ ಹಂತವಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಓದು, ಬರಹ ಅತಿ ಮುಖ್ಯ. ಆದರೆ ರಾಜ್ಯ ಹಾಗೂ ಜಿಲ್ಲೆಯ ಬಹಳಷ್ಟು ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರಿಗೆ ಓದು, ಬರಹ ತಿಳಿದಿಲ್ಲ. ಈ ಕಾರಣದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಈ ಅನಕ್ಷರಸ್ಥ ಸದಸ್ಯರಿಗೆ ಓದು, ಬರಹ ಕಲಿಸಲು ಮುಂದಾಗಿದೆ.

ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 305 ಮಂದಿ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಈ ಫೈಕಿ ಚಿಂತಾಮಣಿ ತಾಲೂಕಿನಲ್ಲಿ 91, ಗುಡಿಬಂಡೆ ತಾಲ್ಲೂಕಿನಲ್ಲಿ 8, ಗೌರಿಬಿದನೂರು ತಾಲ್ಲೂಕಿನಲ್ಲಿ 57. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 32, ಬಾಗೇಪಲ್ಲಿ 73 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 44 ಗ್ರಾಮ ಪಂಚಾಯಿತಿ ಸದಸ್ಯರು ಓದು, ಬರಹ ತಿಳಿಯದ ಅನಕ್ಷರಸ್ಥರಿದ್ದಾರೆ.
ಗುಡಿಬಂಡೆ ತಾಲ್ಲೂಕಿನ ಉಲ್ಲೋಡು, ದಪ್ಪರ್ತಿ, ಹಂಪಸಂದ್ರ, ಸೋಮೇನಹಳ್ಳಿ, ವರ್ಲಕೊಂಡ, ಗೌರಿಬಿದನೂರು ತಾಲ್ಲೂಕಿನ ತಾಲ್ಲೂಕಿನ ಅಲೀಪುರ, ಬಿ. ಬೊಮ್ಮಸಂದ್ರ, ಬೈಚಾಪುರ, ಚಿಕ್ಕಕುರುಗೋಡು, ಡಿಪಾಳ್ಯ, ಜಿ.ಬೊಮ್ಮಸಂದ್ರ, ಜಿ ಕೊತ್ತೂರು, ಗೆದರೆ, ಹಲಗಾನಹಳ್ಳಿ, ಹುದಗೂರು, ಹಳೆಹಳ್ಳಿ, ಕಾದಲವೇಣಿ, ಕಲ್ಲಿನಾಯಕನಹಳ್ಳಿ, ಕುರುಬರಹಳ್ಳಿ, ಕುರುಡಿ, ಮುದುಗೆರೆ, ನಕ್ಕಲಹಳ್ಳಿ, ನಗರಗೆರೆ, ನ್ಯಾಮಗೊಂಡ್ಲು, ಪುರ, ರಾಮಪುರ, ಸೊಣಗಾನಹಳ್ಳಿ, ವಾಟದಹೊಸ ಹಳ್ಳಿ ಪಂಚಾಯಿತಿಯಲ್ಲಿ ಅನಕ್ಷರಸ್ಥ ಸದಸ್ಯರನ್ನು ಗುರುತಿಸಲಾಗಿದೆ.

ಚಿಂತಾಮಣಿ ತಾಲ್ಲೂಕಿನ ಅನೂರು, ಭತ್ತಲಹಳ್ಳಿ, ಭೂಮಿಶೆಟ್ಟಿಹಳ್ಳಿ, ಬುರಡಗುಂಟೆ, ಚಿನ್ನಸಂದ್ರ, ಎನಿಗದಲೆ, ಹಿರೇಕಟ್ಟಿಗೇನಹಳ್ಳಿ, ಇರಗಂಪಲ್ಲಿ, ಚಿಲಕಲನೆರವು. ಕಡದನಮರಿ, ಕಾಗತಿ. ಕತ್ತರಿಗುಪ್ಪೆ, ಕೆಂಚಾರ್ಲಹಳ್ಳಿ, ಕೋನಪಲ್ಲಿ, ಕೊರ್ಲಪರ್ತಿ,ಕೋಟಗಲ್, ಎಂ. ಗೊಲ್ಲಹಳ್ಳಿ, ಮತ್ತೇನ ಹಳ್ಳಿ, ಮಿಂಡಗಲ್, ಮಿತ್ತಹಳ್ಳಿ, ಮುರಗಮಲ್ಲ, ನಂದಿಗಾನಹಳ್ಳಿ ಪೆರುಮಾಚಲಹಳ್ಳಿ, ರಾಗುಟ್ಟಹಳ್ಳಿ, ಶೆಟ್ಟಹಳ್ಳಿ, ಉಪ್ಪರಪೇಟೆ.
ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್, ಅಗಲಗುರ್ಕಿ, ಅಜ್ಜವಾರ, ಅಂಗರೇಕನಹಳ್ಳಿ, ಅವಲಗುರ್ಕಿ, ದಿಬ್ಬುರು, ದೊಡ್ಡಪೈಲಗುರ್ಕಿ, ಗೊಲ್ಲಹಳ್ಳಿ, ಹಾರೋಬಂಡೆ , ಹೊಸಹುಡ್ಯ, ಕಮ್ಮಗುಟ್ಟಹಳ್ಳಿ, ಮಂಚನಬಲೆ, ಪೆರೇಸಂದ್ರ, ಪೋಶೆಟ್ಟಿಹಳ್ಳಿ, ತಿಪ್ಪೇನಹಳ್ಳಿ ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು, ಚಾಕವೇಲು, ಚೇಳೂರು, ದೇವರಗುಡಿ- ಪಲ್ಲಿ, ಗಂಟುವಾರದಲ್ಲಿ, ಗೂರ್ತಪಲ್ಲಿ, ಗೂಳೂರು, ಜೂಲಪಾಳ್ಯ, ಕಾನಗಮಾಕಲಪಲ್ಲಿ, ಕೊತ್ತಕೋಟೆ, ಮಿಟ್ಟಿಮಿರಿ, ನಲ್ಲಗುಟ್ಟಪಲ್ಲಿ, ನಲ್ಲಪ್ಪರೆಡ್ಡಿಪಲ್ಲಿ, ನಾರ ಮುದ್ದೇಪಲ್ಲಿ, ಪಾಳ್ಯಕೆರೆ, ಪರಗೋಡು, ಪಾತಪಾಳ್ಯ, ಪುಲಿಗಲ್, ರಾಚ್ಚರವು, ಸೋಮನಾಥಪುರ, ತೋಳ್ಳಪಲ್ಲಿ, ಯಲಂಪಲ್ಲಿಯಲ್ಲಿ ಅನಕ್ಷರಸ್ಥ ಸದಸ್ಯರು ಇದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ, ಬಶೆಟ್ಟಿಹಳ್ಳಿ, ಚಿಮಂಗಲ, ದೇವರ ಮಳ್ಳೂರು, ದಿಬ್ಲೂರಹಳ್ಳಿ, ದೊಡ್ಡತೇಕಹಳ್ಳಿ, ಎಸ್. ದೇವಗಾನಹಳ್ಳಿ, ತಾಳಕಾಯಲ ಬೆಟ್ಟ, ತುಮ್ಮನಹಳ್ಳಿ, ತಿಮ್ಮಸಂದ್ರ, ಹಂಡಿಗನಾಳ, ಕುಂಬಿಗಾನಹಳ್ಳಿ, ಮೇಲೂರು, ನಾಗಮಂಗಲ, ಪಂಚಾಯಿತಿಯಲ್ಲಿ ಅನಕ್ಷರಸ್ಥ ಸದಸ್ಯರು ಇದ್ದಾರೆ.
ಅನಕ್ಷರಸ್ಥ ಎಂದು ಪರಿಗಣಿಸಲ್ಪಟ್ಟ ಗ್ರಾಮ ಪಂಚಾಯತಿ ಸದಸ್ಯರಿಗೆ ಕೇವಲ ಸಹಿ ಮಾಡಲು ಮಾತ್ರ ತಿಳಿಯುತ್ತಿದೆ. ಆದರೆ, ಅಕ್ಷರಗಳನ್ನು ಓದಿ ಅರ್ಥೈಸಿಕೊಳ್ಳಲು, ಬರೆಯಲು ತಿಳಿಯುತ್ತಿಲ್ಲ. ಈ ಕಾರಣಕ್ಕೆ ಅವರನ್ನು ಅನಕ್ಷರಸ್ಥ ಎಂದು ಪರಿಗಣಿಸಲಾಗುತ್ತಿದೆ.
ಬೋಧಕರ ಗುರುತು:
ಒಬ್ಬ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರಿಗೆ ಒಬ್ಬ ಬೋಧಕರನ್ನು ಗುರು ತಿಸಲಾಗುತ್ತದೆ. ಹೀಗೆ ಗುರುತಿಸುವ ಬೋಧಕರು ಅನಕ್ಷರಸ್ಥ ಪಂಚಾಯಿತಿ ಸದಸ್ಯರು ವಾಸಿಸುತ್ತಿರುವ ಗ್ರಾಮದ ನಿವಾಸಿ ಆಗಿರಬೇಕು. ಕನಿಷ್ಠ ಎಸ್ಸೆಸ್ಸೆಲ್ಸಿ ಉತ್ತಿರ್ಣರಾಗಿರಬೇಕು, ಸರಳ ಓಧು, ಬರಹ, ಲೆಕ್ಕ ಕಲಿಸಲು ಸಮರ್ಥರಾಗಿ ಇರಬೇಕು ಎಂದು ಅನಕ್ಷರಸ್ಥ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಕುರಿತ ಆದೇಶದಲ್ಲಿ ತಿಳಿಸಲಾಗಿದೆ.
ಸಂಜೀವಿನಿ ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಅರ್ಥಿಕ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ, ನರೇಗಾ ಗ್ರಾಮ ಸಂಪನ್ಮೂಲ ವ್ಯಕ್ತಿ, ಸಾಕ್ಷರತಾ ಪ್ರೇರಕರು, ಗ್ರಂಥಪಾಲಕರು, ವಯಸ್ಕರ ಕಲಿಕೆ ಬೋಧನೆಯಲ್ಲಿ ಅನುಭವವುಳ್ಳ ಸ್ವಯಂಸೇವಕರು, ನಿವೃತ್ತ ಶಿಕ್ಷಕರು, ಕಲಿಕೆ ಬೋಧನೆಯಲ್ಲಿ ಆಸಕ್ತ ನಿವೃತ್ತ ನೌಕರರರನ್ನು ಪಂಚಾಯಿತಿ ಸದಸ್ಯರಿಗೆ ಬೋಧಿಸಲು ನೇಮಿಸಲಾಗುತ್ತಿದೆ.
ಕೆಲವು ಗ್ರಾಮ ಪಂಚಾಯತಿಗಳಲ್ಲಿ ಮೂರ್ನಾಲ್ಕು ಮಂದಿ ಅನಕ್ಷರಸ್ಥ ಸದಸ್ಯರು ಇದ್ದಾರೆ, ಕೆಲವು ಪಂಚಾಯಿ- ತಿಗಳಲ್ಲಿ ಒಬ್ಬರು ಅನಕ್ಷರಸ್ಥ ಸದಸ್ಯರು ಇರುವ ಕುರಿತು ಮಾಹಿತಿ ಲಭ್ಯವಾಗಿದೆ.
ಪಟ್ಟಿ ಸಿದ್ದ:
ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯ ಕೊನೆಯ ಕೊಂಡಿಯಾಗಿರುವ ಗ್ರಾಮ ಪಂಚಾಯಿತಿಗಳ ಅನಕ್ಷರಸ್ಥ ಜನ ಪ್ರತಿನಿಧಿಗಳಿಗೆ ಸದ್ಯದಲ್ಲೇ ಅಕ್ಷರಾಭ್ಯಾಸ ಭಾಗ್ಯ ಸಿಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯ ಹಾಗೂ ಆಯಾ ಜಿಲ್ಲೆಗಳ ವ್ಯಾಪ್ತಿಯ ಗ್ರಾಪಂನಲ್ಲಿರುವ ಅನಕ್ಷರಸ್ಥ ಜನ ಪ್ರತಿನಿಧಿಗಳ ಪಟ್ಟಿ ಸಿದ್ದಪಡಿಸಿ ಕೊಂಡಿದೆ.
ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸಿಗಲಿದೆ ಅಕ್ಷರಾಭ್ಯಾಸ:- ಅನಕ್ಷರಸ್ಥರಿಗೆ ಎರಡು ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ದಿನ ಒಂದು ಅಥವಾ ಎರಡು ಗಂಟೆಯಂತೆ ಮೂರ್‍ನಾಲ್ಕು ತಿಂಗಳ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಭಾಗವಹಿಸಿದವರಿಗೆ ಎರಡನೇ ಹಂತದ ತರಬೇತಿ ನೀಡಲಾಗುತ್ತದೆ. ಆದರೆ, ಗ್ರಾಪಂನ ಅನಕ್ಷರಸ್ಥ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಸದಸ್ಯರು ನಿತ್ಯ ಕಲಿಕಾ ಕೇಂದ್ರ ಹೋಗಿ ಅಕ್ಷರಾಭ್ಯಾಸ ಮಾಡುವುದು ಕಷ್ಟ.. ಹೀಗಾಗಿ ಒಂದು ಅಥವಾ 2 ತಿಂಗಳ ಶಿಬಿರ ಮಾಡಿ ಶಿಕ್ಷಣ ನೀಡಲು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.
-
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು












Click it and Unblock the Notifications