Raksha Ramaiah V/s Sudhakar: ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಸಕತ್ ಫೈಟ್, ಕ್ಷೇತ್ರ ಉಳಿಸಿಕೊಳ್ತಾರಾ ಕೆ.ಸುಧಾಕರ್?
ಚಿಕ್ಕಬಳ್ಳಾಪುರ, ಏಪ್ರಿಲ್. 22: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಫಲಿತಾಂಶ ನೀಡಿ ರಾಜ್ಯದ ಜನಕ್ಕೆ ಅಚ್ಚರಿ ನೀಡಿದ್ದ ಕ್ಷೇತ್ರ ಚಿಕ್ಕಬಳ್ಳಾಪುರ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಒಕ್ಕಲಿಗರ ಮತಗಳಿಂದ ಬಿಜೆಪಿ ಮೊದಲ ಬಾರಿಗೆ ಕಸಿದುಕೊಂಡಿತ್ತು.
ಕಳೆದ ಬಾರಿಯ ವಿಧಾನಸಭಾ ಚುನಾವಣೆಲ್ಲಿ ಸೋಲು ಕಂಡ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಈ ಸಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಯುವ ನಾಯಕ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಿದೆ. ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ವರ್ಚಸ್ಸು ಹೆಚ್ಚುತ್ತಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರ ಉಳಿಸಿಕೊಳ್ಳಲು ಸುಧಾಕರ್ ಪರದಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಮಿಂಚು
ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ಹೊಸ ಮುಖ. ಆದರೆ, ಶ್ರೀಮಂತ ಮತ್ತು ಪ್ರಭಾವಿ ರಾಜಕೀಯ ಕುಟುಂಬ, ಎಂ ಎಸ್ ರಾಮಯ್ಯ ಮನೆತನದಿಂದ ಬಂದವರು. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಇವರು ಭಾರೀ ಪ್ರಭಾವವನ್ನು ಹೊಂದಿದೆ. ಜನರ ಅಭಿಮಾನಕ್ಕೆ ಪಾತ್ರವಾಗಿದೆ.
ರಕ್ಷಾ ರಾಮಯ್ಯ ಸೇರಿರುವ ಬಲಿಜ ಸಮುದಾಯದ ಸದಸ್ಯರು ಬಿಜೆಪಿಯ ಕಟ್ಟಾ ಬೆಂಬಲಿಗರು ಎಂದೇ ಪರಿಗಣಿಸಲಾಗಿದೆ. ಆದರೆ ಈ ಬಾರಿ ಅವರೆಲ್ಲಾ ತಮ್ಮದೆ ಸಮುದಾಯದ ರಕ್ಷಾ ರಾಮಯ್ಯ ಹಿಂದೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಕ್ಷೇತ್ರದಲ್ಲಿ ಮುಸ್ಲಿಮರು, ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರ ಸೂಕ್ಷ್ಮ ಸಮುದಾಯಗಳ ಗಣನೀಯ ಜನಸಂಖ್ಯೆಯನ್ನು ಹೊಂದಿದೆ ಇವರೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ.
ಕಾಂಗ್ರೆಸ್‌ನತ್ತ ಗ್ರಾಮೀಣ ಮತದಾರರು
ಚಿಕ್ಕಬಳ್ಳಾಪುರ ವ್ಯಾಪ್ತಿಯ ಗ್ರಾಮೀಣ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಗ್ರಾಮೀಣ ಭಾಗದ ಮತಗಳು ಹೆಚ್ಚಾಗಿರುವುದಿಂದ ರಕ್ಷಾ ರಾಮಯ್ಯ ಅವರಿಗೆ ಅನುಕೂಲವಾಗಲಿದೆ. ಆದರೆ, ಯಲಹಂಕ ಮತ್ತು ದೊಡ್ಡಬಳ್ಳಾಪುರದಂತಹ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ಅಲೆ ಕಾಣಿಸುತ್ತಿದೆ.

ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಅವರ ಕೈಯಲ್ಲಿ ಸೋತ ನಂತರ, ಒಕ್ಕಲಿಗರಾದ ಸುಧಾಕರ್ ಕೂಡ ತಮ್ಮ ಸಮುದಾಯವನ್ನು ಮತ್ತೆ ತಮ್ಮತ್ತ ಸೆಳೆದಿದ್ದಾರೆ. ಜೊತೆಗೆ ಜೆಡಿಎಸ್ ಜೊತೆ ಮೈತ್ರಿ ಇರುವ ಕಾರಣ ಅವರ ಮತಗಳು ತನಗೆ ಬರುವುದರಿಂದ ತನ್ನ ಗೆಲುವು ಖಚಿತ ಎಂದು ವಿಶ್ವಾಸದಲ್ಲಿದ್ದಾರೆ.
ರಕ್ಷಾ ರಾಮಯ್ಯ ಗೆಲುವಿಗೆ ಸಿದ್ದರಾಮಯ್ಯ ಪ್ರಭಾವ
ಚಿಕ್ಕಬಳ್ಳಾಪುರದಲ್ಲಿ ಕುರುಬರ ಸಂಖ್ಯೆಯು ಹೆಚ್ಚಿದೆ. ಸಿದ್ದರಾಮಯ್ಯ ಕಾರಣಕ್ಕೆ ಸುಧಾಕರ್‌ಗೆ ಮತ ಹಾಕಿದ್ದೆ ಎಂದು ಹೇಳುವ ಅನೇಕ ಮಂದಿಯಿದ್ದಾರೆ. ಈ ಬಾರಿಯ ಚುನಾವಣೆ ಬಳಿಕವು ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುವ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ, ಅವರ ಕುರುಬ ಸಮುದಾಯವು ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.
ರಾಮಯ್ಯ ಕುಟುಂಬದ ವರ್ಚಸ್ಸು
ಇನ್ನು, ರಕ್ಷಾ ರಾಮಯ್ಯ ಅವರ ಗೆಲುವಿಗೆ ಪ್ರಮುಖವಾಗಿ ಸಹಾಯಕವಾಗುವ ಅಂಶ ಅವರ ಕುಟುಂಬದ ವರ್ಚಸ್ಸು. ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಸವಾಲುಗಳು ದೊಡ್ಡದಾಗಿಯೇ ಇವೆ. ಆದರೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯ ರಾಜಕೀಯದೊಂದಿಗೆ ರಾಮಯ್ಯ ಕುಟುಂಬದ ಒಡನಾಟ ಅದನ್ನು ಮೀರಿಸಲು ಸಹಾಯ ಮಾಡುತ್ತದೆ.
ಇನ್ನು, 1996ರಲ್ಲಿ ಜನತಾದಳ ಹಾಗೂ 2019ರಲ್ಲಿ ಬಿಜೆಪಿಯಿಂದ ಎರಡು ಬಾರಿ ಮಾತ್ರ ಸೋತಿರುವ ಕ್ಷೇತ್ರವು 1962ರಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈವರೆಗಿನ 13 ಚುನಾವಣೆಗಳಲ್ಲಿ, ಒಬಿಸಿ ಅಭ್ಯರ್ಥಿಗಳು 1996 ರಿಂದ ಸತತವಾಗಿ ಆರು ಚುನಾವಣೆಗಳನ್ನು ಗೆದ್ದಿದ್ದಾರೆ. ಸಂಖ್ಯಾಬಲದ ಪ್ರಕಾರ ಒಕ್ಕಲಿಗರು ಲೋಕಸಭಾ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರೂ, ಅದು ಎರಡು ಬಾರಿ ಬ್ರಾಹ್ಮಣ ಅಭ್ಯರ್ಥಿಗಳನ್ನು ಮತ್ತು ಒಮ್ಮೆ ಆರ್ಯ ವೈಶ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ.












Click it and Unblock the Notifications