Pradeep Eshwar: ಸುಧಾಕರ್ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?
ಚಿಕ್ಕಬಳ್ಳಾಪುರ, ಮೇ 14: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಪಡೆಯುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. ಬಿಜೆಪಿಯ ಅನೇಕ ಸಚಿವರು ಈ ಬಾರಿ ಹೀನಾಯ ಸೋಲು ಕಂಡಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಸಚಿವ ಸುಧಾಕರ್ ಅವರನ್ನು ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದಾರೆ.
ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಸ್ಪರ್ಧಿಸಿದ ಪ್ರದೀಪ್ ಈಶ್ವರ್ ಗೆಲುವು ಕಂಡಿದ್ದಾರೆ. ಗೆಲುವಿನ ನಂತರ ಪ್ರತಿಕ್ರಿಯೆ ನೀಡಿದ ಅವರು ನಾನು ಕೇವಲ 27 ಲಕ್ಷ ಖರ್ಚು ಮಾಡಿ ಸುಧಾಕರ್ ಅವರನ್ನು ಸೋಲಿಸಿದ್ದೇನೆ ಎಂದು ಹೇಳಿದ್ದಾರೆ.

"ಟಿವಿ ಪೇಪರ್ ನಲ್ಲಿ ಕಾಣಿಸಿಕೊಂಡ ತಕ್ಷಣ ಸುಧಾಕರ್ ಅವರನ್ನು ಪ್ರಬಾವಿ ರಾಜಕಾರಣಿ ಎನ್ನಲು ಆಗಲ್ಲ, ಆದರೆ ವಾಸ್ತವ ಬೇರೆನೆ ಇತ್ತು, ನಾನು ಅದೇ ಊರಿನಲ್ಲಿ ಹುಟ್ಟಿದವನು ಅವರನ್ನು 30 ವರ್ಷದಿಂದ ಗಮನಿಸಿದವನ, ಒಳ್ಳೆಯದು ಮಾಡಿದ್ರೆ ಏನುಕ್ಕೆ ಸೋಲೋರು, ಅವರು ಒಳ್ಳೆಯದು ಮಾಡಿಲ್ಲ ಅದಕ್ಕೆ ಜನ ಅವರಿಗೆ ಪಾಠ ಕಲಿಸಿದ್ದಾರೆ" ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಸುಧಾಕರ್ ಗೆಲ್ಲಿಸಲು ಸೆಲೆಬ್ರೆಟಿಗಳು, ರಾಷ್ಟ್ರಮಟ್ಟದ ನಾಯಕರು ಬಂದಿದ್ದರು. ಸುಧಾಕರ್ ಅವರನ್ನ ಸೋಲಿಸಲು ನಾನೊಬ್ಬನೆ ಸಾಕಿತ್ತು, ನನ್ನ ಆತ್ಮವಿಶ್ವಾಸ ಒಂದೇ ಸಾಕಿತ್ತು ಅವರನ್ನು ಸೋಲಿಸಲು ಎಂದು ಹೇಳಿದರು.
ಹಣ ಇಲ್ಲ, ಅಧಿಕಾರ ಇಲ್ಲದೆ ಸುಧಾಕರ್ ಅವರನ್ನು ಸೋಲಿಸಿದ್ದೇನೆ, ಚುನಾವಣೆ
ಗಾಗಿ ನನ್ನ ಬಳಿ ಇದ್ದದ್ದು ಕೇವಲ 27 ಲಕ್ಷ ರುಪಾಯಿ ಅಷ್ಟೆ, ನಂತರ ಸ್ನೇಹಿತರು, ಸಂಬಂಧಿಕರ ಬಳಿ 3 ಲಕ್ಷ ಸಾಲ ಮಾಡಿದ್ದೇನೆ ಒಟ್ಟು 30 ಲಕ್ಷ ರುಪಾಯಿ ಖರ್ಚಾಗಿದೆ ಎಂದು ಹೇಳಿದರು. ಸುಧಾಜರ್ 200-300 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾನು ಯಾರಿಗೂ ಒಂದು ರುಪಾಯಿ ಕೊಟ್ಟಿಲ್ಲ ಆದರೂ ನಾನು ಗೆದ್ದಿದ್ದೇನೆ ಅಂದ್ರೆ ಚಿಕ್ಕಬಳ್ಳಾಪುರದಲ್ಲಿ ಪ್ರಜಾಪ್ರುಭುತ್ವ ಗೆದ್ದಿದೆ ಎಂದರ್ಥ ಎಂದು ಹೇಳಿದರು. ನಾನು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದೇನೆ, 22 ಜನ ಅನಾಥ ಮಕ್ಕಳನ್ನು ಓದಿಸಿದ್ದೇನೆ, ಕಳೆದ 10 ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿ ಡಾಕ್ಟರ್, ಇಂಜಿನಿಯರ್ ಆದ ಬಹುತೇಕರು ನನ್ನ ವಿದ್ಯಾರ್ಥಿಗಳಾಗಿದ್ದರು, ಸ್ಥಳೀಯ ವಾಹಿನಿಯಲ್ಲಿ ಸಂಪಾದಕನಾಗಿದ್ದೆ, ನಾನು ಜನರನ್ನು ತಲುಪಿದ್ದೆ, ರಾತ್ರೋ ರಾತ್ರಿ ನಾನು ಗೆದ್ದಿಲ್ಲ, 15 ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು.












Click it and Unblock the Notifications