ಬಜರಂಗದಳ ನಿಷೇಧ: ಹೀಗಾಗಿಯೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಂಗ್ರೆಸ್ ಕಣ್ಮರೆ ಎಂದ ಸುಧಾಕರ್
ಚಿಕ್ಕಬಳ್ಳಾಪುರ, ಮೇ 04: ಯಾವುದೇ ಸಂಘಟನೆಯಾಗಲೀ ದೇಶದ್ರೋಹಿ ಕೆಲಸ ಮಾಡಿದರೆ ನಿಷೇಧ ಮಾಡಬೇಕು, ದೇಶ ಪ್ರೇಮಿ ಸಂಘಟನೆಗಳನ್ನು ಯಾಕೆ ನಿಷೇಧ ಮಾಡುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಜರಂಗದಳ ನಿಷೇಧ ಎನ್ನುವ ಕಾಂಗ್ರೆಸ್ ಭರವಸೆ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಮಾತನಾಡಿದ ಅವರು, ಪಿಎಫ್ಐ, ಭಜರಂಗದಳಕ್ಕೆ ಹೋಲಿಕೆ ಮಾಡಲು ಸಾಧ್ಯವೇ, ದೇಶ ದ್ರೋಹ ಮಾಡುವ ಸಂಘ ಸಂಸ್ಥೆಗಳನ್ನು ನ್ಯಾಯಾಲಯಗಳೇ ನಿಷೇಧ ಮಾಡಿವೆ. ಭಜರಂಗದಳದ ಮೇಲೆ ಅಂತಹ ಯಾವುದೇ ನಿದರ್ಶನಗಳಿದ್ದರೆ ಹೇಳಿ, ಇಂತಹ ಘಟನೆಗಳಿಂದಲೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಂಗ್ರೆಸ್ ಕಣ್ಮರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಕಂಡು ಹತಾಶರಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಆಡಳಿತ ಹಿಡಿಯಲಿದೆ. ಎಲ್ಲ ವಿಭಾಗಗಳಲ್ಲಿಯೂ ಬಿಜೆಪಿ ಗಾಳಿ ಬೀಸುತ್ತಿದೆ, ಪ್ರಧಾನಿ ಬಂದ ಕಡೆ ಶೇಖಡಾ ವಾರು ಮತಗಳು ಹೆಚ್ಚುತ್ತಿದೆ, ಮೋದಿ ಅಂದರೆ ವಿಶ್ವಾಸ, ಹಾಗಾಗಿಯೇ ಬಿಜೆಪಿಯೇ ಭರವಸೆ, ಡಬಲ್ ಎಂಜಿನ್ ಸರ್ಕಾರವೇ ರಾಜ್ಯಕ್ಕೆ ಭರವಸೆ ಎಂದರು.
ಪ್ರಸ್ತುತ ಚುನಾವಣೆಗಳು ಮುಗಿದ ಕೂಡಲೇ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಮಂಚನಬಲೆ ಗ್ರಾಮವನ್ನು ನಗರಸಭೆಗೆ ಸೇರಿಸುವ ಜೊತೆಗೆ ಕೋಟ್ಯಂತರ ರುಪಾಯಿ ಅನುದಾನ ತಂದು ಅಬಿವೃದ್ಧಿ ಮಾಡಲಾಗುವುದು. ಈಗಾಗಲೇ 3 ಕೋಟಿ ವೆಚ್ಚದಲ್ಲಿ ಈ ಗ್ರಾಮದ ರಸ್ತೆ ಅಬಿವೃದ್ದಿ ಮಾಡಲಾಗಿದೆ. ಗುಂಡ್ಲಗುರ್ಕಿ, ಸಬ್ಬೇನಹಲ್ಳಿ, ಕಾಮಶೆಟ್ಟಿಹಳ್ಳಿಗಳಲ್ಲಿ ನಮ್ಮ ಅಭಿವೃದ್ಧಿಯ ಹೆಜ್ಜೆ ಗುರುತು ಬಿಡಲಾಗಿದೆ. ಈ ಸೇವೆ ಮುಂದುವರಿಯಲು ನೀವು ಮತ್ತೆ ಬೆಂಬಲಿಸಬೇಕು, ಈ ಬಾರಿ ಬಿಜೆಪಿಗೆ ಮತ ನೀಡಿದರೆ ಪ್ರತಿ ಮನೆಗೆ ಉದ್ಯೋಗ ನೀಡುವ ಕೆಲಸ ಮಾಡುವುದಾಗಿ ಅವರು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆ 10 ಲಕ್ಷಕ್ಕೆ ಏರಿಕೆ
ಮಂಚನಬಲೆ ಗ್ರಾಮಕ್ಕೆ ಸಮೀಪದಲ್ಲಿರುವ ದಿಬ್ಬೂರಿನಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಕ್ಷೇತ್ರದ ಪ್ರತಿಯೊಬ್ಬರ ಆರೋಗ್ಯವೂ ಮುಖ್ಯ ಎಂದು ಭಾವಿಸಿರುವ ತಾವು, ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೈದ್ಯಕೀಯ ಕಾಲೇಜು ಸಿದ್ಧವಾಗಿದೆ. ಮೂರೇ ವರ್ಷದಲ್ಲಿ ವೈದ್ಯಕೀಯ ಕಾಲೇಜು ತಂದು ಉದ್ಘಾಟನೆ. 800 ಕೋಟಿ ವೆಚ್ಚದ ವೈದ್ಯಕೀಯ ಕಾಲೇಜು ಸಿದ್ಧವಾಗಿದ್ದು, ಮುಂದಿನ ತಿಂಗಳಿನಿಂದ ಸೇವೆಗೆ ಸಮರ್ಪಣೆಯಾಗಲಿದೆ ಎಂದರು.
ಈ ಹಿಂದೆ 800 ಕೋಟಿ ವೆಚ್ಚದ ಯೋಜನೆಯನ್ನು ಈ ಕ್ಷೇತ್ರಕ್ಕೆ ತಂದ ಉದಾಹರಣೆಯೇ ಇಲ್ಲ. ಎಚ್ಎನ್ ವ್ಯಾಲಿ ಯೋಜನೆ 1,400 ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಿದ ಪರಿಣಾಮ ರೈತರಿಗೆ ತುಂಬಾ ಅನುಕೂಲವಾಗಿ, ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ನೀರು ಬರಲು ಕಾರಣವಾಗಿದೆ. ಆಯುಷ್ಮಾನ್ ಭಾರತ್ ಯೋಜನೆ 5 ಲಕ್ಷದಿಂದ 10 ಲಕ್ಷಕ್ಕೆ ಏರಿಸಲಾಗಿದೆ. ಚುನಾವಣೆ ನಂತರ ಬಾಕಿ ಉಳಿದಿರುವ ನಿವೇಶನಗಳನ್ನು ಬಡವರಿಗೆ ಹಂಚಲಾಗುವುದು. ಬಡವರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಪ್ರತಿ ಗ್ರಾಮದಲ್ಲಿಯೂ ಶುದ್ಧನೀರಿನ ಘಟಕ ಮಾಡಲಾಗಿದೆ. ಜಾತಿ, ಧರ್ಮ ನೋಡದೆ, ಭ್ರಷ್ಟಾಚಾರ ಇಲ್ಲದೆ ಪಾರದರ್ಶಕತೆಯಿಂದ ನಿವೇಶನ ಹಂಚಲಾಗಿದೆ, ಈ ನಿವೇಶನಗಳಲ್ಲಿ ಮನೆ ನಿರ್ಮಿಸಲು 5 ಲಕ್ಷ ಅನುದಾನ ನೀಡಲಾಗುವುದು ಎಂದು ಹೇಳಿದರು.
ಮೋದಿ ಆಗಮನದಿಂದ ಬಿಜೆಪಿ ಮತ ಹೆಚ್ಚಳ
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ರಾಜ್ಯದಲ್ಲಿ ಬಿಜೆಪಿ ಉತ್ಸಾಹ ಹೆಚ್ಚಾಗಿದೆ. ಬಿಜೆಪಿ ಪರ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನೂರಕ್ಕೆ ನೂರು ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಹಿಡಿಯುವುದು ದೃಢ. ಪ್ರಧಾನಿ ಆಗಮನದಿಂದ ರಾಜ್ಯದಲ್ಲಿ ಶೇ.5ಕ್ಕೂ ಹೆಚ್ಚು ಶೇಖಡಾವಾರು ಮತ ಹೆಚ್ಚಳವಾಗಲಿದೆ, ಕೇವಲ ಗ್ರಾಪಂ ನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಕಾರ್ಯಕರ್ತರ ಹುರುಪು ನೋಡಿದರೆ ರಾಜ್ಯದಲ್ಲಿ ದಾಖಲೆ ಮಟ್ಟದ ಸ್ಥಾನ ಗಳಿಸುವುದು ಗ್ಯಾರೆಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಜನತೆ ನಿಮ್ಮನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್, ರಾಜ್ಯದ ಎಲ್ಲ ಶಾಸಕರೂ ಅವರವರ ಕ್ಷೇತ್ರದ ಮುಖ್ಯಮಂತ್ರಿಯೇ ಆಗಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ, ವರಿಷ್ಠರು ಉತ್ತಮ ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಮಾತ್ರ ನಮಗೆ ಮುಖ್ಯ ಎಂದು ಹೇಳಿದರು.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ











Click it and Unblock the Notifications