Dr. K Sudhakar Assets: ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಆಸ್ತಿ ವಿವರ
ಚಿಕ್ಕಬಳ್ಳಾಪುರ, ಮಾರ್ಚ್ 02: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಗೆಲ್ಲಿಸಲು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಂದುಗೂಡಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತಕ್ಕಾಗಿ ಒಂದಾಗಿ ಕೈ ಜೋಡಿಸಿದ್ದಾರೆ. ಅದೇ ರೀತಿ ವಿಕಸಿತ ಚಿಕ್ಕಬಳ್ಳಾಪುರಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂಬ ಸಂದೇಶ ರವಾನೆಯಾಗಿದೆ. ಅದರಂತೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಭೆಗಳು ನಡೆಯುತ್ತಿದ್ದು, ಎಲ್ಲರೂ ಒಂದಾಗಿ ಕೆಲಸ ಮಾಡುವ ಪಣ ತೊಟ್ಟಿದ್ದಾರೆ.

ಸೋಮವಾರ ಡಾ.ಕೆ.ಸುಧಾಕರ್ ಅವರು ಚುನಾವಣಾ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಎಂಟಿಬಿ ನಾಗರಾಜ್, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡರಾದ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ ಅವರೊಂದಿಗೆ ನಾಮಪತ್ರ ಸಲ್ಲಿಸಿದ ಅವರು ಎಲ್ಲರ ಸಹಕಾರವನ್ನು ಕೋರಿದರು. ಇದಕ್ಕೂ ಮುನ್ನ ಮನೆ ದೇವರಾದ ಚನ್ನಕೇಶವಸ್ವಾಮಿ ಹಾಗೂ ಭೋಗನಂದೀಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಡಾ.ಕೆ ಸುಧಾಕರ್ ಕುಟುಂಬದ ಆಸ್ತಿ ವಿವರ
ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಒಟ್ಟು ಆಸ್ತಿ 49 ಕೋಟಿ 82 ಲಕ್ಷ 41 ಸಾವಿರದ 646 ರೂಪಾಯಿ ಎಂದು ನಾಮಪತ್ರದ ಜೊತೆಗೆ ಜೊತೆಗೆ ಅಫಿಡವಿಟ್‌ನಲ್ಲಿ ಸಲ್ಲಿಕೆ ಮಾಡಿದ್ದಾರೆ. 3ಲಕ್ಷ 55 ಸಾವಿರ 320 ಮೌಲ್ಯದ 160 ಗ್ರಾಂ ಚಿನ್ನಾಭರಣ, ಪತ್ನಿ ಪ್ರೀತಿ ಸುಧಾಕರ್ ಬಳಿ 1 ಕೆಜಿ ಚಿನ್ನ 4 ಜೊತೆ ವಜ್ರಾಭಾರಣಗಳಿರುವ ಬಗ್ಗೆ ತಿಳಿಸಿದ್ದಾರರ. ಸುಧಾಕರ್ ಬಳಿ ಇರುವ ನಗದು- 10,680 ರೂಪಾಯಿ, ಪತ್ನಿ ಪ್ರೀತಿ ಸುಧಾಕರ್ ಬಳಿ ನಗದು - 5,10,000 ರೂಪಾಯಿ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಸುಧಾಕರ್ ಸಾಲದ ವಿವರ
ಸುಧಾಕರ್ ಮಾಡಿರುವ ಒಟ್ಟು ಸಾಲ - 1,31,28,130 ರೂಪಾಯಿ, ಪತ್ನಿ ಪ್ರೀತಿ ಸುಧಾಕರ್ ಸಾಲ 19,03,92,819 ರೂಪಾಯಿ, ಡಾ.ಕೆ ಸುಧಾಕೆರ್ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿರುವ ಒಟ್ಟು ಹಣ 11 ಕೋಟಿ 76 ಲಕ್ಷ 7 ಸಾವಿರದ 833 ರೂಪಾಯಿ, ಡಾ.ಕೆ ಸುಧಾಕರ್ ಪತ್ನಿ ಪ್ರೀತಿ ವಿವಿಧ ಬ್ಯಾಂಕ್‌ಗಳಲ್ಲಿರುವ ಒಟ್ಟು ಹಣ 38,14,348 ಲಕ್ಷ ರೂಪಾಯಿ, ವಿವಿಧ ಸಂಸ್ಥೆಗಳೊಂದಿಗೆ ಡಾ.ಕೆ. ಸುಧಾಕರ್ ಹೊಂದಿರುವ ಷೇರುಗಳು 86,20,329 ರೂಪಾಯಿ, ಡಾ.ಕೆ. ಸುಧಾಕರ್ ಪತ್ನಿ ಪ್ರೀತಿ ಹೊಂದಿರುವ ಒಟ್ಟು ಷೇರುಗಳು 1,89,74,056 ರೂಪಾಯಿ ಒಟ್ಟು ಕುಟುಂಬದ ಕಂಪನಿ ಷೇರುಗಳು 149,46,420 ರೂಪಾಯಿ .ಲ್ಯಾನ್ಸರ್, ಮೂರು ಟ್ರ್ಯಾಕ್ಟರ್‌ಗಳು ಹಾಗೂ ಪತ್ನಿ ಹೆಸರಲ್ಲಿ ಹೊಂಡಾ ಆ್ಯಕ್ಟೀವಾ ಇರುವ ಬಗ್ಗೆ ಅಫಿಡವಿಟ್‌ನಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications