Chandrayaan 3: ಚಂದ್ರಯಾನ 3ರ ಯಶಸ್ವಿನ ಹಿಂದೆ ಚಿಕ್ಕಬಳ್ಳಾಪುರದ ವಿಜ್ಞಾನಿ !

ಚಿಕ್ಕಬಳ್ಳಾಪುರ, ಜುಲೈ. 14: ದೇಶದ ಬಹುನಿರೀಕ್ಷಿತ 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'ಯ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಶ್ರೀಹರಿಕೋಟಾದ ಸತೀಶ್ ದವನ್ ಸ್ಪೇಸ್ ಸೆಂಟರ್‌ನಿಂದ ನಭಕ್ಕೆ ಜಿಮ್ಮಿದ ಚಂದ್ರಯಾನ ನೌಕೆಯು ಮೂರು ಹಂತ ದಾಟಿ ನಿಗದಿತ ಕಕ್ಷೆ ಸೇರಿದೆ. ಈ ಸಾಧನೆಗಾಗಿ ವಿಜ್ಞಾನಿಗಳಿಗೆ ಮತ್ತು ತಂತ್ರಜ್ಞರಿಗೆ ಅಭಿನಂದನೆಗಳು ಬರುತ್ತಿವೆ.

ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಗ್ರಾಮದ ವಿಜ್ಞಾನಿ ಗುರ್ರಪ್ಪ ಈ ಭಾರಿಯ ಚಂದ್ರಯಾನ 3ರ ಉಡಾವಣೆಯಲ್ಲಿ ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇದಕ್ಕೆ ಗುಡುಬಂಡೆ ತಾಲೂಕಿನ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Chandrayaan 3

ವಿಜ್ಞಾನಿ ಗುರ್ರಪ್ಪ ಅವರು ತಾಲೂಕಿನ ಕುಗ್ರಾಮವಾದ ಜಂಗಾಲಹಳ್ಳಿಯಲ್ಲಿ ಚನ್ನಪ್ಪಯ್ಯ ಮತ್ತು ತಿಮ್ಮಕ್ಕ ರವರ ಮಗನಾಗಿ ಜನಸಿದ್ದಾರೆ. ಇವರು 2013ರ ಮಂಗಳಯಾನ ಉಡಾವಣೆಯಲ್ಲೂ ಸಹ ಪ್ರಮುಖ ಪಾತ್ರವನ್ನು ಸಹ ವಹಿಸಿದ್ದರು. ತಮ್ಮ ಕೆಲಸದಿಂದ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದರು. ಈಗ ಚಂದ್ರಯಾನ 3ರ ಉಡಾವಣೆಯಲ್ಲಿ ಇನ್ನು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಈ ಹೆಮ್ಮೆಯ ಚಂದ್ರಯಾನ 3ರ ಉಡಾವಣೆಯಲ್ಲಿ ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವುದಕ್ಕೆ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.

2013ರ ಮಂಗಳಯಾನ ಉಡಾವಣೆಯಲ್ಲಿ ವಿಜ್ಞಾನಿ ಗುರ್ರಪ್ಪ ರವರು ಪ್ರಮುಖ ಪಾತ್ರ ವಹಿಸಿದ್ದರು. ಮಂಗಳಯಾನ ಉಡಾವಣೆ ಯಶಸ್ವಿಯಾದ ಸಂದರ್ಭದಲ್ಲಿ ಗುರ್ರಪ್ಪ ರವರನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತ ಲಾಘವ ಮಾಡಿ ಶ್ಲಾಘಿಸಿದ್ದರು. ಇನ್ನು, ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ರವರು ಚಂದ್ರಯಾನ 3ರ ಉಡಾವಣೆಯಲ್ಲಿ ಪ್ರಮುಖ ವಿಭಾಗದಲ್ಲಿ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸುವುದು ಸಂತಸದ ವಿಚಾರವಾಗಿದೆ ಎಂದು ಗ್ರಾಮಸ್ಥರು ಖುಷಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+