ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮವಾಗಿ ಸಾಗಿಸುತ್ತಿದ್ದ 965 ಕೆ.ಜಿ. ರಕ್ತಚಂದನ ವಶಕ್ಕೆ

|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 17: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 965 ಕೆ.ಜಿ ತೂಕದ ರಕ್ತ ಚಂದನವನ್ನು ವಶಪಡಿಸಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ರಕ್ತ ಚಂದನ ಸಾಗಣೆ ಮಾಡುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಣ್ಯ ಘಟಕದ ಸಿಐಡಿ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲೆಯ ಚೆದಲಪುರ ಸರ್ಕಲ್ ನ ರಾಷ್ಟ್ರೀಯ ಹೆದ್ದಾರಿ ಬಳಿ ದಾಳಿ ನಡೆಸಿ 965 ಕೆ.ಜಿ. ತೂಕದ ಮೂವತ್ತು ರಕ್ತ ಚಂದನದ ಮರದ ತುಂಡುಗಳನ್ನು ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ದೊಡ್ಡಬಳ್ಳಾಪುರದಲ್ಲಿ 5 ಕೋಟಿ ಮೌಲ್ಯದ ರಕ್ತ ಚಂದನ ವಶದೊಡ್ಡಬಳ್ಳಾಪುರದಲ್ಲಿ 5 ಕೋಟಿ ಮೌಲ್ಯದ ರಕ್ತ ಚಂದನ ವಶ

ಈ ರಕ್ತಚಂದನ ಮೌಲ್ಯ 38,60,000 ರೂ ಎಂದು ಅಂದಾಜಿಸಲಾಗಿದೆ. ಈ ರಕ್ತ ಚಂದನವು ಶೇಷಾಚಲಂ ಅರಣ್ಯ ಮೂಲದ್ದಾಗಿದ್ದು, ತಮಿಳು ಗ್ಯಾಂಗ್ ಕಳ್ಳತನ ಮಾಡಿ, ಕರ್ನಾಟಕ ತಂಡ ಇದರ ಸಾಗಣೆ ಮಾಡುವ ಜಾಲ ಹೊಂದಿದೆ ಎಂದು ತಿಳಿದುಬಂದಿದೆ. ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡು ಅರಣ್ಯ ಸಂರಕ್ಷಣಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

965 KG Red Sandalwood Seized In Chikkaballapur

Recommended Video

Air Indiaದಲ್ಲಿ ಹಿರಿಯ ನಾಗರಿಕರಿಗೆ 50% ಕಡಿಮೆ ದರದಲ್ಲಿ ಟಿಕೆಟ್ | Oneindia Kannada

ಸಿಬ್ಬಂದಿಗಳಾದ ಸಂಜೀವ ಕುಮಾರ್ ಮಹಾಜನ್, ಅಶೋಕ್ ಜೆ, ರವಿಕುಮಾರ್ ಎಚ್ ಕೆ, ಹರೀಶ್ ಪಿ, ಪದ್ಮಾವತಿ, ಸುದರ್ಶನ್, ಮಂಜಪ್ಪ ಶಿಗ್ಲಿ ಅವರ ಈ ಕಾರ್ಯಕ್ಕೆ ಡಿಜಿಪಿ ರವೀಂದ್ರನಾಥ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

English summary
38 lakhs rs worth 965 kg red sandalwood seized in chikkaballapur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X