ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆಯರ ಮೇಲಿನ ದಾಳಿಗೆ ಅಮೆರಿಕದ ಎಲಿಸಾನ್ ಆತಂಕ

|
Google Oneindia Kannada News

ಚೆನ್ನೈ, ಮೇ 5: ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಲಯೋಲ ಕಾಲೇಜಿನ ಸಹಭಾಗಿತ್ವದಲ್ಲಿ ಈಚೆಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಆಚರಿಸಿತು. 'ಆಧುನಿಕ ಮಾಧ್ಯಮ ಪರಿಸರಲ್ಲಿ ನೈತಿಕ ಪತ್ರಿಕೋದ್ಯಮ' ಎಂಬ ವಿಷಯವಾಗಿ ಅಮೆರಿಕದ ಪತ್ರಕರ್ತರಾದ ಎಲಿಸಾನ್ ಬೆಥೆಲ್ ಮೆಕೆಂಜಿ ಮಾತನಾಡಿದರು.

ದಕ್ಷಿಣ ಭಾರತದ ಹಿರಿಯ ಸಂಪಾದಕರ ಜತೆಗೆ ಸಂವಾದ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ಅಮೆರಿಕ ರಾಯಭಾರ ಕಚೇರಿಯ ಪೊಲ್ಲಾಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. "ಸರಕಾರವು ಜನರಿಂದ ನಿಯಂತ್ರಿಸಲ್ಪಡಬೇಕು ಹಾಗೂ ಸರಕಾರ ಇರುವುದೇ ಜನರ ಸೇವೆಗಾಗಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳ್ತಾರೆ" ಎಂದು ಆಕೆ ಹೇಳಿದರು.

World Press Freedom Day event at the Loyola College

ಅಮೆರಿಕ ದೇಶದ ನಿರ್ಮತೃಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯ ನೀಡಿದ ವಿಚಾರ ಪದೇಪದೇ ಕೇಳಿಬಂತು. ಎಲಿಸಾನ್ ಬೆಥೆಲ್ ಮಾತನಾಡಿ, ಮಾಧ್ಯಮಗಳಿಗೆ ಸಮಾಜದ ಬೆಂಬಲ, ಸ್ವಾತಂತ್ರ್ಯದ ಅಗತ್ಯವಿದೆ. ಪತ್ರಕರ್ತರ ಮೇಲೆ ದೈಹಿಕ ಹಾಗೂ ಮಾತಿನ ಮೂಲಕ ದಾಳಿಗಳಾಗುತ್ತಿವೆ. ಅದರಲ್ಲೂ ಪತ್ರಕರ್ತೆಯರ ಮೇಲೆ ಆನ್ ಲೈನ್ ಮೂಲಕ ದಾಳಿ ಹೆಚ್ಚುತ್ತಿದೆ ಎಂದು ಹೇಳಿದರು.

ದಿನಮಣಿ ಸಂಪಾದಕ ಕೃಷ್ಣನ್ ವೈದ್ಯನಾಥನ್, ಹಿಂದೂ ಹಿರಿಯ ಸಹ ಸಂಪಾದಕ ವಿ ಸುದರ್ಶನ್ ಮತ್ತಿತರರು ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು.

English summary
U.S. Consulate General in Chennai partnered with Chennai’s Loyola College to commemorate World Press Freedom Day 2017. The program held at the LICET Seminar Hall Loyola-ICAM College of Engineering and Technology included remarks by award-winning American journalist and media educator Alison Bethel McKenzie on “Ethical Journalism in a Modern Media Environment”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X