ಜಯಲಲಿತಾ ಪಾರ್ಥಿವ ಶರೀರ ಸುಡದೆ, ಹೂಳಿದ್ದು ಏಕೆ?
ಜಯಲಲಿತಾ ಅಂತ್ಯಕ್ರಿಯೆ ವಿಧಾನವನ್ನು ನಿರ್ಧರಿಸಿದ್ದು ಎಐಎಡಿಎಂಕೆ. ಇದರಲ್ಲಿ ಅಮ್ಮನ ಕುಟುಂಬದವರ ತೀರ್ಮಾನದಂತೆ ಏನೂ ಆಗಿಲ್ಲ. ಹಾಗಿದ್ದರೆ ಪಕ್ಷದ ಉದ್ದೇಶವೇನು, ಜಯಲಲಿತಾ ತಮ್ಮ ಅಂತ್ಯಸಂಸ್ಕಾರ ಹೇಗೆ ಆಗಬೇಕು ಎಂದು ಮುಂಚೆಯೇ ತಿಳಿಸಿದ್ದರಾ?
ಚೆನ್ನೈ, ಡಿಸೆಂಬರ್ 7: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಸುಡದೆ, ಹೂಳಿದ್ದು ಏಕೆ ಎಂಬ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಜಯಲಲಿತಾ ತಮಿಳು ಅಯ್ಯಂಗಾರ್ ಕುಟುಂಬಕ್ಕೆ ಸೇರಿದವರು. ಆ ಸಂಪ್ರದಾಯದಂತೆ ದಹನ ಮಾಡುತ್ತಾರೆ. ಆದರೆ ಈಗ ಹೂಳಲಾಗಿದೆ.[ಜಯಲಲಿತಾ ಅಪರೂಪದ ಚಿತ್ರಗಳು]
ಜಯಲಲಿತಾ ಅವರು ಕಳೆದ ಸೋಮವಾರ ರಾತ್ರಿ ನಿಧನರಾದರು. ಮರೀನಾ ಬೀಚ್ ನಲ್ಲಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ, ಜಯಾ ರಾಜಕೀಯ ಗುರು ಎಂ.ಜಿ.ರಾಮಚಂದ್ರನ್ ಸ್ಮಾರಕದ ಪಕ್ಕದಲ್ಲೇ ಆಕೆಯ ಅಂತ್ಯಕ್ರಿಯೆಯು ಆಯಿತು. ಈ ರೀತಿಯ ಅಂತ್ಯಕ್ರಿಯೆ ಮಾಡುವುದಕ್ಕೆ ಎರಡು ಕಾರಣಗಳಿವೆ.[ಮಂಡ್ಯದಲ್ಲಿ ಜಯಲಲಿತಾ ಸಮಾಧಿ, ಜೆಡಿಎಸ್ ಸಂಸದರ ಆಲೋಚನೆ!]

ಎಂಜಿಆರ್ ಹಾಗೂ ಅಣ್ಣಾ ದೊರೈ ಅವರಿಗೆ ಮಾಡಿದಂತೆ ಜಯಲಲಿತಾ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಎಐಎಡಿಎಂಕೆ ಪಕ್ಷದ ಇಂಗಿತ. ಆದ್ದರಿಂದ ಜಯಾ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂಬುದು ಪಕ್ಷದ ನಿರ್ಧಾರವಾಗಿತ್ತೇ ಹೊರತು ಕುಟುಂಬದವರ ತೀರ್ಮಾನ ಇದರಲ್ಲಿ ಇರಲಿಲ್ಲ.[ಪನ್ನೀರ್ ಸೆಲ್ವಂ ಅಂತಿಮವಾಗಿದ್ದು ಹೇಗೆ: ಎಐಎಡಿಎಂಕೆ ಒಳಸುಳಿಗಳು]
ಸ್ಮಾರಕ ನಿರ್ಮಾಣ ಮಾಡಾಬೇಕು ಎಂಬ ಕಾರಣಕ್ಕಾಗಿ ದೇಹವನ್ನು ಹೂಳಲಾಯಿತು. ಇನ್ನೊಂದು ಕಾರಣ ದ್ರಾವಿಡ ಸಂಸ್ಕೃತಿ. ಆ ಪ್ರಕಾರ ಯಾವುದೇ ಸಂಪ್ರದಾಯ ಆಚರಣೆಗೆ ಅವಕಾಶ ಇಲ್ಲ. ಕೆಲವು ಅಧಿಕಾರಿಗಳು ಹೇಳುವ ಪ್ರಕಾರ, ತನ್ನ ರಾಜಕೀಯ ಗುರು ಎಂಜಿಆರ್ ಪಕ್ಕದಲ್ಲೇ ಹೂಳಬೇಕು ಎಂಬುದು ಜಯಲಲಿತಾ ಅವರ ಇಚ್ಛೆಯಾಗಿತ್ತು.












Click it and Unblock the Notifications