ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಕೆ, ಕನ್ನಿಮೋಳಿ ಮೇಲೆ ಏಕೆ ದಾಳಿಯಿಲ್ಲ : ಸ್ವಾಮಿ ಪ್ರಶ್ನೆ

By Prasad
|
Google Oneindia Kannada News

ಚೆನ್ನೈ, ನವೆಂಬರ್ 09 : "ಶಶಿಕಲಾ ನಟರಾಜನ್ ಅವರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ನೀಡುವುದರ ಜೊತೆಗೆ, ಎಂ ಕರುಣಾನಿಧಿ ಮತ್ತು ಅವರ ಮಗಳು ಕನ್ನಿಮೋಳಿ ಮಾಡಿರುವ ಭಾನಗಡಿಗಳ ಬಗ್ಗೆಯೂ 30 ಪುಟಗಳ ವರದಿಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರ ಮೇಲೆ ಏಕೆ ಆದಾಯ ತೆರಿಗೆ ದಾಳಿ ನಡೆದಿಲ್ಲ?"

ಹೀಗೆಂದು ಪ್ರಶ್ನಿಸಿದುರವ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ. ಅವರ ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಮತ್ತು ಇದರಿಂದ ಬಿಜೆಪಿ ನಾಯಕರು ಮುಜುಗರಕ್ಕೀಡಾಗುವ ಸಂಭವನೀಯತೆಯೂ ಇದೆ.

ಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ಕಣ್ಣು: ಚೆನ್ನೈನ 187 ಕಡೆ ಐಟಿ ದಾಳಿಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ಕಣ್ಣು: ಚೆನ್ನೈನ 187 ಕಡೆ ಐಟಿ ದಾಳಿ

Why no raids on MK, Kanimozhi : Subramanian Swamy

ನರೇಂದ್ರ ಮೋದಿಯವರು ಕೆಲ ದಿನಗಳ ಹಿಂದೆ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಎಂಕೆ ಅಧಿನಾಯಕ ಎಂ ಕರುಣಾನಿಧಿಯವರು ಸ್ವತಃ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಮೋದಿಯವರು ಔಪಚಾರಿಕವಾಗಿ ಮಾತನಾಡುತ್ತ, ದೆಹಲಿಯಲ್ಲಿರುವ ನನ್ನ ಮನೆಗೆ ಬನ್ನಿ ಎಂದು ಕರುಣಾನಿಧಿಗೆ ಆಹ್ವಾನ ನೀಡಿದ್ದರು.

ಎಐಎಡಿಎಂಕೆ ಮುಖ್ಯಸ್ಥನ ಮನೆ ಮೇಲೆ ಬೆಂಗಳೂರಿನಲ್ಲೂ ಐಟಿ ದಾಳಿಎಐಎಡಿಎಂಕೆ ಮುಖ್ಯಸ್ಥನ ಮನೆ ಮೇಲೆ ಬೆಂಗಳೂರಿನಲ್ಲೂ ಐಟಿ ದಾಳಿ

ಎಂಕೆ ಕರುಣಾನಿಧಿ ಮತ್ತು ಅವರ ಕುಟುಂಬವನ್ನು ನರೇಂದ್ರ ಮೋದಿ ಭೇಟಿ ಮಾಡಿದ್ದು ಎಐಎಡಿಎಂಕೆ ಪಕ್ಷದ ನಾಯಕರನ್ನು ಹುಬ್ಬೇರಿಸುವಂತೆ ಮಾಡಿತ್ತು. ಕೆಲವರು ಹಲವಾರು ರೀತಿಯಲ್ಲಿ ಅದಾಗಲೇ ವ್ಯಾಖ್ಯಾನ ನೀಡಲು ಪ್ರಾರಂಭಿಸಿದ್ದರು. ಅಷ್ಟರಲ್ಲಿ ಎಐಎಡಿಎಂಕೆ ಪಕ್ಷದ ಮೇಲೆ ಐಟಿ ದಾಳಿ ನಡೆದಿದೆ.

'ವಿಶ್ರಾಂತಿಗೆ ನಮ್ಮ ಮನೆಗೆ ಬನ್ನಿ', ಕರುಣಾನಿಧಿಗೆ ಮೋದಿ ಆಹ್ವಾನ'ವಿಶ್ರಾಂತಿಗೆ ನಮ್ಮ ಮನೆಗೆ ಬನ್ನಿ', ಕರುಣಾನಿಧಿಗೆ ಮೋದಿ ಆಹ್ವಾನ

ನರೇಂದ್ರ ಮೋದಿಯವರು ಭೇಟಿ ಮಾಡಿ ಅಪನಗದೀಕರಣದ ವಾರ್ಷಿಕೋತ್ಸವಕ್ಕೆ ಎರಡು ದಿನ ಮೊದಲು. ಅಪನಗದೀಕರಣದ ವಿರುದ್ಧ ಮಾಡಬೇಕಾಗಿದ್ದ ಪ್ರತಿಭಟನೆಯನ್ನೂ ಡಿಎಂಕೆ ಕೈಬಿಟ್ಟಿತ್ತು. ಈಗ ನೋಡಿದರೆ ಎಐಎಡಿಎಂಕೆ ಮೇಲೆ ಐಟಿ ಮುಗಿಬಿದ್ದಿದೆ. ಈ ಬೆಳವಣಿಗೆಯ ಹಿಂದೆ ರಾಜಕೀಯವೇನಾದರೂ ಇದೆಯಾ ಎಂದು ಟ್ವಿಟ್ಟಿಗರು ಕೇಳುತ್ತಿದ್ದಾರೆ.

ಗುರುವಾರ ಬೆಳಿಗ್ಗೆಯಿಂದಲೇ ಎಐಎಡಿಎಂಕೆ ಪಕ್ಷದ ಚೆನ್ನೈ ಮತ್ತು ಬೆಂಗಳೂರು ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜನರು ಇದೆಲ್ಲವನ್ನೂ ನೋಡುತ್ತಿದ್ದಾರೆ. ಅವರಿಗೆ ಇಲ್ಲೇನು ನಡೆಯುತ್ತಿದೆ ಎಂದು ಎಲ್ಲವೂ ಅರ್ಥವಾಗುತ್ತದೆ. ಇಂಥ ದಾಳಿ ನಡೆಸುವ ಮೂಲಕ ನಮ್ಮನ್ನು ಸರ್ವನಾಶ ಮಾಡಬಹುದು ಎಂದು ಕೇಂದ್ರ ಅಂದುಕೊಂಡಿದ್ದರೆ ಅವರು ಹಗಲು ಕನಸು ನೋಡುತ್ತಿದ್ದಾರೆ ಎಂದು ಟಿಟಿವಿ ದಿನಕರನ್ ಅವರು

English summary
In addition to data on Sasikala in the courts I had given a 30 page Note to Authorities on M Karunanidhi and daughter Kanimozhi frauds. Why no raids yet? BJP leader Subramanian Swamy has asked. Will Narendra Modi answer to this question by Swamy?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X