ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಶಾಲೆ, ಕಾಲೇಜುಗಳಲ್ಲಿ 'ವಂದೇ ಮಾತರಂ' ಕಡ್ಡಾಯ

By Mahesh
|
Google Oneindia Kannada News

ಚೆನ್ನೈ, ಜುಲೈ 25: ತಮಿಳುನಾಡಿನ ಎಲ್ಲ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಾರದಲ್ಲಿ ಒಮ್ಮೆಯಾದ್ರೂ ಕಡ್ಡಾಯವಾಗಿ ವಂದೇ ಮಾತರಂ ಮೊಳಗಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಸರ್ಕಾರಿ ಹಾಗೂ ಖಾಸಗಿ ಕಚೇರಿ, ಕಾರ್ಖಾನೆಗಳಲ್ಲಿ ತಿಂಗಳಲ್ಲಿ ಒಮ್ಮೆಯಾದ್ರೂ ರಾಷ್ಟ್ರೀಯ ಗೀತೆ ಹಾಡಬೇಕು ಎಂದು ಕೋರ್ಟ್ ಆದೇಶಿಸಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ರಾಷ್ಟ್ರೀಯ ಗೀತೆಯನ್ನು ಹಾಡಲು ಅಥವಾ ನುಡಿಸಲು ಕಷ್ಟವಾದರೆ ಅವರಿಗೆ ಹಾಡುವಂತೆ ಒತ್ತಾಯಿಸಬಾರದು. ಹಾಡದೇ ಇರುವುದಕ್ಕೆ ಸರಿಯಾದ ಕಾರಣವನ್ನು ನೀಡಬೇಕು ಎಂದು ಕೋರ್ಟ್ ಆದೇಶದಲ್ಲಿ ಹೇಳಲಾಗಿದೆ.

Vande Mataram compulsory in all Tamil Nadu schools, colleges: Madras HC

ದೇಶದ ಎಲ್ಲ ಚಿತ್ರಮಂದಿರಗಳಲ್ಲಿ ಸಿನೆಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಮಹತ್ವದ ಆದೇಶ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ತಮಿಳು ಹಾಗೂ ಇಂಗ್ಲೀಷ್ ವರ್ಶನ್‌ನಲ್ಲಿರುವ ವಂದೇ ಮಾತರಂ ಗೀತೆಯನ್ನು ಸರ್ಕಾರದ ವೆಬ್‌ಸೈಟ್‌ನಲ್ಲಿ ಅಪ್‌ ಲೋಡ್ ಮಾಡಲಾಗಿದೆ.

ಕೆ.ವೀರಮಣಿ ಎಂಬುವವರು ಶಿಕ್ಷಕರ ನೇಮಕಾತಿ ಮಂಡಳಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ವಂದೇ ಮಾತರಂ ಹಾಡನ್ನು ಬಂಗಾಳಿಯಲ್ಲಿ ಬರೆದಿರುವುದಕ್ಕೆ 89 ಮಾರ್ಕ್ ನೀಡಲಾಗಿತ್ತು. ವೀರಮಣಿ ಕೇವಲ ಒಂದು ಅಂಕದಿಂದ ಶಿಕ್ಷಕನಾಗುವ ಅವಕಾಶ ವಂಚಿತರಾಗಿದ್ದರು. ವೀರಮಣಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ವೀರಮಣಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಸರಕಾರ ವೀರಮಣಿಯನ್ನು ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಸರಕಾರಕ್ಕೆ ಆದೇಶಿಸಿದೆ.

English summary
The Madras High Court has said that singing Vande Mataram in all schools and colleges in Tamil Nadu is compulsory. The court however made it clear that Vande Mataram would need to be played and sung in all schools and colleges at least once a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X