• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಿನಕರನ್ ಸಖ್ಯ ತೊರೆದು ಎಐಎಡಿಎಂಕೆಗೆ ಪುಗಳೇಂದಿ

|
Google Oneindia Kannada News

ಚೆನ್ನೈ, ನವೆಂಬರ್ 11: ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಕರ್ನಾಟಕ ಘಟಕದ ಕಾರ್ಯದರ್ಶಿ ವಿ ಪುಗಳೇಂದಿ ಅವರು ಆಡಳಿತಾರೂಢ ಎಐಎಡಿಎಂಕೆ ಸೇರುತ್ತಿರುವುದಾಗಿ ಘೋಷಿಸಿದ್ದಾರೆ. ಎಎಂಎಂಕೆ ಸ್ಥಾಪಕ ಅಧ್ಯಕ್ಷ ಟಿ.ಟಿ. ವಿ ದಿನಕರನ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

"ನಾನು ನನ್ನ ಬೆಂಬಲಿಗರು ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದೇನೆ. ಸಾವಿರಾರು ಕಾರ್ಯಕರ್ತರು ಹಗಲು ರಾತ್ರಿ ಶ್ರಮವಹಿಸಿ ಮಾಡಿದ ಕಾರ್ಯಗಳೆಲ್ಲವೂ ನಷ್ಟವಾಗಿದೆ. ಎಎಂಎಂಕೆ ಒಂದು ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳಲು ವಿಫಲವಾಗಿದೆ. ದಿನಕರನ್ ಅವರು ಮುಖಂಡರಾಗಿ ಮುನ್ನಡೆಸಲು ವಿಫಲರಾಗಿದ್ದು, ನಿರಾಶೆಯಿಂದ ಎಎಂಎಂಕೆ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ"

ಎಎಂಎಂಕೆ ಪರ ಇದ್ದ ಕಾರ್ಯಕರ್ತರೆಲ್ಲರೂ ಎಐಎಡಿಎಂಕೆ ಸೇರಲು ಬಯಸಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಎಐಎಡಿಎಂಕೆ ಸೇರುವ ದಿನಾಂಕ ನಿಗದಿಯಾಗಲಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಎಎಂಎಂಕೆ ತೊರೆದು ಎಐಎಡಿಎಂಕೆ ಸೇರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

English summary
Amma Makkal Munnetra Kazhagam (AMMK) Karnataka unit secretary V. Pugazhendhi said he and his supporters would join the parent party - the ruling AIADMK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X