ಜಯಲಲಿತಾಗೆ ಅವಮಾನ, ಲಂಕಾ ವಿರುದ್ಧ ಪ್ರತಿಭಟನೆ

ನವದೆಹಲಿ/ಚೆನ್ನೈ,ಆ.4: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಶ್ರೀಲಂಕಾ ವೆಬ್ ಸೈಟ್ ನಲ್ಲಿ ಬಂದಿರುವ ಅವಹೇಳನಕಾರಿ ಲೇಖನದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಉಭಯ ಸದನಗಳ ಕಲಾಪ ಮುಂದೂಡಬೇಕಾಯಿತು. ಅತ್ತ ಚೆನ್ನೈನಲ್ಲಿ ಪಕ್ಷಾತೀತವಾಗಿ ಕಾಲಿವುಡ್ ತಾರೆಯರು ಶ್ರೀಲಂಕಾ ವಿರುದ್ಧ ಪ್ರತಿಭಟನೆ ನಡೆಸಿದರು.

ಸೋಮವಾರ ಲೋಕಸಭೆಯಲ್ಲಿ ಸದನ ಆರಂಭವಾಗುತ್ತಿದ್ದಂತೆಯೇ ಎಐಎಡಿಎಂಕೆ ಸಂಸದರು ಜಯಲಲಿತ ವಿರುದ್ಧ ಶ್ರೀಲಂಕಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿ, ಶ್ರೀಲಂಕಾದ ರಕ್ಷಣಾ ಸಚಿವ ಹಾಗೂ ಆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸದನದ ಬಾವಿಗಿಳಿದು ಪದೇ ಪದೇ ಎಐಎಡಿಎಂಕೆ ಸದಸ್ಯರು ದಾಂಧಲೆ ನಡೆಸಿದ್ದಾಗ ಸ್ಪೀಕರ್ ಸುಮಿತ್ರ ಮಹಾಜನ್ ಕಲಾಪವನ್ನು ಮಧ್ಯಾಹ್ನ 12.30ರವರೆಗೆ ಮುಂದೂಡಿದರು. ಅತ್ತ ರಾಜ್ಯ ಸಭೆಯಲ್ಲಿ ಇದೇ ಪರಿಸ್ಥಿತಿ ಪುನರಾವರ್ತನೆಯಾಯಿತು. ಅಲ್ಲಿಯೂ ಎಐಎಡಿಎಂಕೆ ಸದಸ್ಯರು ಶ್ರೀಲಂಕಾ ಸರ್ಕಾರದ ವಿರುದ್ಧ ಘೋಷಣೆಗನ್ನು ಕೂಗಿದರು. ಈ ವಿವಾದ ಈಗಾಗಲೇ ಶ್ರೀಲಂಕಾ ರಕ್ಷಣಾ ಸಚಿವಾಲಯ ಕ್ಷಮಾಪಣೆ ಕೇಳಿದೆ ಮತ್ತು ಆ ಲೇಖನವನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.[ಜಯಲಲಿತಾ ಮೇಡಂ 'ಸ್ಸಾರಿ' ಎಂದ ಶ್ರೀಲಂಕಾ]

ಕ್ಷಮೆ ಕೇಳಿದ ಮೇಲೂ ಈ ರೀತಿ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಸಭಾಧ್ಯಕ್ಷ ಹಮೀದ್ ಅನ್ಸಾರಿ ಸದಸ್ಯರಿಗೆ ಸೂಚಿಸಿದರು. ತಮಿಳು ಚಿತ್ರರಂಗದ ತಾರೆಯರು ಶ್ರೀಲಂಕಾ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಎಂ ಜಯಾ ಪರ ಪಕ್ಷಾತೀತ ಬೆಂಬಲ

ಸಿಎಂ ಜಯಾ ಪರ ಪಕ್ಷಾತೀತ ಬೆಂಬಲ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಶ್ರೀಲಂಕಾ ವೆಬ್ ಸೈಟ್ ನಲ್ಲಿ ಬಂದಿರುವ ಅವಹೇಳನಕಾರಿ ಲೇಖನದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಉಭಯ ಸದನಗಳ ಕಲಾಪ ಮುಂದೂಡಬೇಕಾಯಿತು. ಅತ್ತ ಚೆನ್ನೈನಲ್ಲಿ ಪಕ್ಷಾತೀತವಾಗಿ ಕಾಲಿವುಡ್ ತಾರೆಯರು ಶ್ರೀಲಂಕಾ ವಿರುದ್ಧ ಪ್ರತಿಭಟನೆ ನಡೆಸಿದರು.

ತಮಿಳುನಾಡಿನ ಸಿನಿಮಾ ಸಂಘದಿಂದ ಪ್ರತಿಭಟನೆ

ತಮಿಳುನಾಡಿನ ಸಿನಿಮಾ ಸಂಘದಿಂದ ಪ್ರತಿಭಟನೆ

ತಮಿಳು ನಟರಾದ ವಿಜಯ್, ಸೂರ್ಯ, ಶಿವಕುಮಾರ್, ವಿನಯ್ ರೈ ಅವರು ತಮಿಳಗ ವಳವುರಿಮೈ ಕಚ್ಚಿ(ಟಿವಿಕೆ), ಎಐಎಡಿಎಂಕೆ ಕಾರ್ಯಕರ್ತರ ಜತೆ ಶ್ರೀಲಂಕಾ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶ್ರೀಲಂಕಾ ಕ್ರಿಕೆಟ್ ತಂಡ ವಾಪಸ್

ಶ್ರೀಲಂಕಾ ಕ್ರಿಕೆಟ್ ತಂಡ ವಾಪಸ್

ಚೆನೈನಲ್ಲಿ ಕ್ರಿಕೆಟ್ ಟೂರ್ನಿ ಆಡಲು ಬಂದಿದ್ದ ಶ್ರೀಲಂಕಾದ 16 ವರ್ಷ ವಯೋಮಿತಿ ಒಳಗಿನ ತಂಡವನ್ನು ಸುರಕ್ಷತಾ ಕಾರಣಗಳಿಂದ ಹಿಂದಕ್ಕೆ ಕರೆಸಲಾಗಿದೆ ಎಂದು ತಮಿಳುನಾಡಿನ ಸರ್ಕಾರ ಹೇಳಿದೆ.

ಶ್ರೀಲಂಕಾ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ

ಶ್ರೀಲಂಕಾ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮುಂದೆ ಶ್ರೀಲಂಕಾ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ. ಶ್ರೀಲಂಕಾದ ರಕ್ಷಣಾ ಇಲಾಖೆಯ ಅಧಿಕೃತ ವೆಬ್​ಸೈಟ್​ ನಲ್ಲಿ ಆಗಿರುವ ಪ್ರಮಾದದಿಂದ ಭಾರತದಲ್ಲಿ ಸಂಚಲನ ಉಂಟಾಗಿತ್ತು. ಲಂಕನ್ ವೆಬ್ ತಾಣದಲ್ಲಿ ಜಯಲಲಿತಾ ವಿರುದ್ಧದ ಅವಹೇಳನಕಾರಿ ಲೇಖನ ಪ್ರಕಟವಾಗಿತ್ತು

ಸ್ಪಷ್ಟನೆಗೆ ಜಗ್ಗದ ತಮಿಳುನಾಡಿನ ಜನತೆ

ಸ್ಪಷ್ಟನೆಗೆ ಜಗ್ಗದ ತಮಿಳುನಾಡಿನ ಜನತೆ

How Meaningful are Jayalalithaa's Love Letters to Narendra Modi' ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿರುವ ಲೇಖನ ಕ್ಕೂ ಶ್ರೀಲಂಕಾ ರಕ್ಷಣಾ ಇಲಾಖೆಗೂ ಸಂಬಂಧವಿಲ್ಲ ಇದು ಜನರ ಅಭಿಪ್ರಾಯ ಎಂದು ಸ್ಪಷ್ಟನೆ ನೀಡಲಾಗಿತ್ತು.

ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ

ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ

ಇದು ದೊಡ್ಡ ಪ್ರಮಾದ ಈ ಬಗ್ಗೆ ಶ್ರೀಲಂಕಾ ರಾಯಭಾರಿ ಕಚೇರಿ ಪ್ರಮುಖರಿಗೆ ಸಮನ್ಸ್ ಕಳಿಸಲು ವಿದೇಶಾಂಗ ಸಚಿವಾಲಯ ಮುಂದಾಗಿದೆ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+