ಜಲ್ಲಿಕಟ್ಟು ,ಅಪಾಯಕಾರಿ ರೋಮಾಂಚನಕಾರಿ : ಟ್ವೀಟ್ಸ್
ಚೆನ್ನೈ, ಜ. 08: ಪ್ರತಿರೋಧದ ನಡುವೆ ಜಲ್ಲಿಕಟ್ಟು ಹೋರಿ ಕಾಳಗಕ್ಕೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಸಿಗುತ್ತಿರುವ ಸುದ್ದಿ ಈಗಾಗಲೇ ಓದಿರುತ್ತೀರಿ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮುಕ್ತ ಸ್ವಾಗತ ಸಿಕ್ಕಿದೆ. ಜಲ್ಲಿ ಕಟ್ಟು ನಿಷೇಧಿಸಲು ಕರೆ ನೀಡುವವರು ಸ್ಪೇನಿನ ಗೂಳಿ ಕಾಳಗ ಆನಂದಿಸುವುದಿಲ್ಲವೇ ಎಂದು ಪ್ರಶ್ನಿಸಲಾಗಿದೆ.
ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟವಾಗಿದೆ.ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವ ಗೂಳಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಪ್ರಾಣಿ ದಯಾ ಸಂಘಗಳು, ಪೆಟಾ ಆಕ್ಷೇಪ ವ್ಯಕ್ತಪಡಿಸಿತ್ತು. [ಜಲ್ಲಿಕಟ್ಟು ನಿಷೇಧ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿ]
ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಗೂಳಿಗಳಿಗೆ ಹಿಂಸೆ ನೀಡಲಾಗಿಲ್ಲ ಮತ್ತು ಮಾದಕ ವಸ್ತು ತಿನ್ನಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಅವುಗಳ ಆರೋಗ್ಯ ತಪಾಸಣೆ ನಡೆಸಿ ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಜಲ್ಲಿಕಟ್ಟು ನಿಯಂತ್ರಣ ಕಾಯಿದೆಯನ್ವಯ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ.
ತಮಿಳುನಾಡಿನ ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ. ಹಬ್ಬದ ಸಂದರ್ಭದಲ್ಲಿ ಬೇಕಾದ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಲ್ಲಿ ಕಟ್ಟು ಕ್ರೀಡೆಯಿಂದ ಪ್ರಾಣಿಗಳಿಗೆ ಹಾನಿಯಾಗುವುದಿಲ್ಲ ಎಂದು ತಮಿಳುನಾಡು ಸರ್ಕಾರದಿಂದ ಭರವಸೆ ನೀಡಿದೆ. ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳು ಇಲ್ಲಿವೆ...

ಪಟಾಕಿ ಸಿಡಿಸುವ ಮೂಲಕ ಸ್ವಾಗತ
ಪ್ರಾಣಿ ಪ್ರಿಯ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ತಮಿಳುನಾಡಿನ ಸಾಂಪ್ರದಾಯಿಕ ಹೋರಿ ಕಾಳಗ (ಜಲ್ಲಿ ಕಟ್ಟು) ಕ್ಕೆ ಕೇಂದ್ರ ಪರಿಸರ ಖಾತೆ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಲಾಗಿದೆ.

ಅಸೆಂಬ್ಲಿ ಚುನಾವಣೆ ತಂತ್ರಗಾರಿಕೆಯೇ?
ಸಂಕ್ರಾಂತಿ(ಪೊಂಗಲ್) ಸಂದರ್ಭದಲ್ಲಿ ಮದುರೈ ಸೇರಿದಂತೆ ಅನೇಕ ಕಡೆಗಳಲ್ಲಿ ಜಲ್ಲಿಕಟ್ಟು ಆಚರಿಸಲಾಗುತ್ತದೆ. ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟವಾಗಿದೆ. ತಮಿಳುನಾಡು ಅಸೆಂಬ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಘಟಕ ಒತ್ತಡ ಹೇರಿ ಕೇಂದ್ರ ಸರ್ಕಾರದ ಸಮ್ಮತಿ ಪಡೆದಿದೆ ಎಂಬ ಕೂಗು ಕೇಳಿ ಬಂದಿದೆ.
|
ಜಲ್ಲಿಕಟ್ಟು ಇರುವುದರಿಂದ ಗೂಳಿಗಳು ಜೀವಂತ
ಜಲ್ಲಿಕಟ್ಟು ಇರುವುದರಿಂದ ಹೋರಿಗಳು ಜೀವಂತವಾಗಿ ದಷ್ಟಪುಷ್ಟವಾಗಿ ಬದುಕಿವೆ. ಇಲ್ಲದಿದ್ದರೆ ಕಸಾಯಿಖಾನೆ ಸೇರುತ್ತಿತ್ತು ಎಂಬುದನ್ನು ಮರೆಯುವಂತಿಲ್ಲ.
|
ಕುದುರೆ ರೇಸ್ ಓಕೆ, ಜಲ್ಲಿಕಟ್ಟು ನಿಷೇಧ ಏಕೆ?
ಕುದುರೆ ರೇಸ್ ಓಕೆ, ಗೋಹತ್ಯೆ ಓಕೆ ಜಲ್ಲಿಕಟ್ಟು ನಿಷೇಧ ಏಕೆ? ನಮ್ಮ ಸಂಪ್ರದಾಯ, ಆಚರಣೆಗೆ ನಿಮ್ಮ ಅನುಮತಿ ಬೇಕಿಲ್ಲ.
|
ಕಾನೂನು ಸಮರ ಮುಂದುವರೆಯಲಿದೆ: ಪೆಟಾ
ಕಾನೂನು ಸಮರ ಮುಂದುವರೆಯಲಿದೆ, ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಪೆಟಾ ಸಂಸ್ಥೆಯ ಡಾ. ಚೈತನ್ಯ ಕೊಡುರಿ ಹೇಳಿದ್ದಾರೆ.
|
ಜಲ್ಲಿಕಟ್ಟು ನಿಷೇಧ ರದ್ದು ಸೂಪರ್ ಸುದ್ದಿ
ಜಲ್ಲಿಕಟ್ಟು ನಿಷೇಧ ರದ್ದು ಸೂಪರ್ ಸುದ್ದಿ ಎಂದ ತಮಿಳುನಾಡು ಜನತೆ.
|
ಸ್ಪೇನಿನ ಗೂಳಿ ಕಾಳಗ ನೋಡುತ್ತಾರೆ
ಜಲ್ಲಿಕಟ್ಟು ನಿಲ್ಲಿಸಿ ಎನ್ನುವ ಎನ್ ಜಿಒ ಜನ ಸ್ಪೇನಿಗೆ ಹಾರಿ ಗೂಳಿ ಕಾಳಗ ನೋಡುತ್ತಾರೆ ಇದನ್ನು ಹೇಗೆ ಸಹಿಸಲು ಸಾದ್ಯ?
ಜಲ್ಲಿಕಟ್ಟು ಅಪಾಯಕಾರಿ ರೋಮಾಂಚನಕಾರಿ : ಟ್ವೀಟ್ಸ್
ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟದ ಝಲಕ್ ನೋಡಿ...