ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಟಿವಿ ಎಕ್ಸಿಟ್ ಪೋಲ್ : ಟಿಟಿವಿ ದಿನಕರನ್ ಗೆ ಮುನ್ನಡೆ

By Mahesh
|
Google Oneindia Kannada News

Recommended Video

ತಮಿಳುನಾಡಿನ ಆರ್ ಕೆ ನಗರ ಫಲಿತಾಂಶ : ಮತ ಎಣಿಕೆ ಸ್ಥಗಿತ | ಇಪಿಎಸ್ ಓಪಿಎಸ್ ಬಣದ ಗಲಾಟೆ | Oneindia Kannada

ಚೆನ್ನೈ, ಡಿಸೆಂಬರ್ 21 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕಾಗಿ ರಾಧಾಕೃಷ್ಣನ್ ನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರಕ್ಕೆ ಗುರುವಾರದಂದು ಭರ್ಜರಿ ಮತದಾನ ಕಂಡು ಬಂದಿದೆ. ಶೇ 77ರಷ್ಟು ಮತದಾನ ಕಂಡಿರುವ ಈ ಕ್ಷೇತ್ರದ ಚುನಾವಣೋತ್ತರ ಸಮೀಕ್ಷೆ ವರದಿ ಇಲ್ಲಿದೆ.

ಕಾವೇರಿ ಟಿವಿ ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ ಶಶಿಕಲಾ ನಟರಾಜನ್ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಅವರು ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನ ನಗೆ ಬೀರಲಿದ್ದಾರೆ.

ಆರ್ ಕೆ ನಗರ ಕ್ಷೇತ್ರದಿಂದ ಬರೋಬ್ಬರಿ 59 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರಲ್ಲಿ 47 ಜನ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ. ಡಿಎಂಕೆಯಿಂದ ಮರುದು ಗಣೇಶನ್, ಎಐಎಡಿಎಂಕೆಯಿಂದ ಇ. ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಸ್ಪರ್ಧೆಯಲ್ಲಿದ್ದಾರೆ. ಡಿ.24 ರಂದು ಮತಎಣಿಕೆ ನಡೆಯಲಿದ್ದು, ಜಯಾ ಅವರ ಸಾವಿನ ನಂತರ ಪ್ರತಿಷ್ಠಿತ ಕ್ಷೇತ್ರಕ್ಕೆ ಯಾರು ಶಾಸಕರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

 ಯಾರಿಗೆ ಎಷ್ಟು ಶೇಕಡಾವರು ಬೆಂಬಲ?

ಯಾರಿಗೆ ಎಷ್ಟು ಶೇಕಡಾವರು ಬೆಂಬಲ?

ಸಮೀಕ್ಷೆಯಲ್ಲಿ ಶೇ 64ರಷ್ಟು ಪುರುಷರು ಹಾಗೂ ಶೇ36ರಷ್ಟು ಮಹಿಳಾ ಮತದಾರರು ಪಾಲ್ಗೊಂಡಿದ್ದರು.
* ದಿನಕರನ್(ಸ್ವತಂತ್ರ ಅಭ್ಯರ್ಥಿ)- ಶೇ 37ರಷ್ಟು ಮತಗಳು
* ಮಧುಸೂದನ್ (ಎಐಎಡಿಎಂಕೆ) -ಶೇ 26
* ಮರದು ಗಣೇಶ್(ಡಿಎಂಕೆ) -ಶೇ 18
* ಇತರೆ -ಶೇ 17

ವೋಟಿಗಾಗಿ ನೋಟು?

ವೋಟಿಗಾಗಿ ನೋಟು?

ಶೇ 90 ಮತದಾರರು ನಾವು ಮತದಾನ ಮಾಡಲು ಲಂಚ ಪಡೆದಿಲ್ಲ ಎಂದಿದ್ದಾರೆ. ಶೇ10ರಷ್ಟು ಮಂದಿ ಪಕ್ಷಗಳಿಂದ ಹಣದ ಆಮಿಷ ಸಿಕ್ಕಿದ್ದು ನಿಜ, ಹಣ ಪಡೆದು ಮತ ಹಾಕಿದ್ದೇವೆ ಎಂದಿದ್ದಾರೆ.

ಹಣ ಪಡೆದ ಮೇಲೂ ಹಣ ನೀಡಿದ ಅಭ್ಯರ್ಥಿಗೆ ಮತ ಹಾಕಲಿಲ್ಲ ಬೇರೆಯವರಿಗೆ ಮತ ಹಾಕಿದ್ದೇವೆ ಎಂದಿದ್ದಾರೆ. ಶೇ3ರಷ್ಟು ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ.

ಜಯಲಲಿತಾ ವಿಡಿಯೋ

ಜಯಲಲಿತಾ ವಿಡಿಯೋ

ಡಿಸೆಂಬರ್ 21ರಂದು ಮತದಾನಕ್ಕೂ ಮುಂಚಿತವಾಗಿ ಜಯಲಲಿತಾ ಅವರ ವಿಡಿಯೋ ಬಿಡುಗಡೆಯಾಗಿದ್ದರಿಂದ ಏನಾದರೂ ಮತದಾರರ ಮೇಲೆ ಪರಿಣಾಮ ಬೀರಿದಿಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಶೇ95ರಷ್ಟು ಮಂದಿ ಇದರಿಂದ ಯಾವುದೇ ಪರಿಣಾಮವಾಗಿಲ್ಲ ಎಂದಿದ್ದಾರೆ. ಶೇ 5ರಷ್ಟು ಮಂದಿ ಇದರಿಂದ ಸ್ವಲ್ಪ ಮಟ್ಟಿನ ಪರಿಣಾಮವಾಗಿದೆ ಎಂದಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಟ್ವೀಟ್

ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ ಟಿಟಿವಿ ದಿನಕರನ್ ಗೆಲುವು ಒಳ್ಳೆ ಸುದ್ದಿ ಎಂದಿದ್ದಾರೆ. ಕಾವೇರಿ ಟಿವಿ ಹಾಗು ನ್ಯೂಸ್ ಎಕ್ಸ್ ನೀಡಿರುವ ಚುನಾವಣೋತ್ತರ ಸಮೀಕ್ಷೆ ಬಹುತೇಕ ಸಾಮ್ಯತೆ ಹೊಂದಿದೆ.

English summary
Cauvery TV conducted an Exit poll in the just concluded RK Nagar by poll and has predicted that Dinakaran will emerge as the winner in the seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X