ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ!
Recommended Video

ಚೆನೈ, ಅಕ್ಟೋಬರ್ 12: 136 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನವೊಂದು ವಿಮಾನ ನಿಲ್ದಾಣದ ಕಾಂಪೌಂಡ್ ಗೆ ಬಡಿದ ಘಟನೆ ತಮಿಳುನಾಡಿನ ತಿರುಚಿಯಲ್ಲಿ ನಡೆದಿದೆ.
ತಮಿಳುನಾಡಿನ ತಿರುಚಿಯಿಂದ ದುಬೈಗೆ ತೆರಳಬೇಕಿದ್ದ ವಿಮಾನ ಟೇಕಾಫ್ ಆಗುತ್ತಿದ್ದ ಸಮಯದಲ್ಲಿ ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆಗೆ ಆಕಸ್ಮಿಕವಾಗಿ ಡಿಕ್ಕಿಹೊಡೆದಿದೆ. ವಿಮಾನದ ಸಣ್ಣ ಚಕ್ರಗಳು ಗೋಡೆಗೆ ಬಡಿದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.ಬೆಳಗ್ಗಿನ ಜಾವ 1.20 ರ ಸಮಯದಲ್ಲಿ ಈ ಘಟನೆ ನಡೆದಿದೆ.(ಚಿತ್ರಕೃಪೆ: ಎಎನ್ ಐ)

ಘಟನೆಯ ನಂತರ ವಿಮಾನವನ್ನು ಮುಂಬೈನಲ್ಲಿ ಇಳಿಸಿ, ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಯಿತು. 136 ಪ್ರಯಾಣಿಕರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಏರ್ ಇಂಡಿಯಾ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.
ಇತ್ತೀಚೆಗಷ್ಟೇ ಮುಂಬೈಯಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಸಿಬ್ಬಂದಿಯು ಕ್ಯಾಬಿನ್ ಪ್ರೆಶರ್ ನಿರ್ವಹಣೆಯ ಸ್ವಿಚ್ ಅನ್ನು ಒತ್ತುವುದಕ್ಕೇ ಮರೆತು 166 ಕ್ಕೂ ಹೆಚ್ಚು ಪ್ರಯಾಣಿಕರು ಉಸಿರಾಟದ ಸಮಸ್ಯೆ, ತಲೆ ನೋವು ಇತ್ಯಾದಿ ಸಮಸ್ಯೆಯಿಂದ ಬಳಲಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications