ಚೆನ್ನೈ : ಹಾಸನ ಮೂಲದ ಟಿಸಿಎಸ್ ಟೆಕ್ಕಿ ನಾಪತ್ತೆ
ಚೆನ್ನೈ, ಡಿ. 22 : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಟಿಸಿಎಸ್ ಕಂಪನಿ ಉದ್ಯೋಗಿಯೊಬ್ಬರು ನಾಪತ್ತೆಯಾದ ಘಟನೆ ಚೆನ್ನೈನ ಕಾಂಚೀಪುರಂ ಬೀಚ್‌ನಲ್ಲಿ ನಡೆದಿದೆ. ನಾಪತ್ತೆಯಾದ ಟೆಕ್ಕಿ ಕರ್ನಾಟಕದ ಹಾಸನ ಜಿಲ್ಲೆಯವರಾಗಿದ್ದಾರೆ.
ಭಾನುವಾರ ಸಂಜೆ ನಾಲ್ವರು ಸ್ನೇಹಿತರೊಂದಿಗೆ ಹಾಸನ ಮೂಲಕ ತ್ರಿನೇಶ್ (28) ಕಾಂಚೀಪುರಂ ಬೀಚ್‌ಗೆ ಈಜಲು ತೆರಳಿದ್ದರು. ಆದರೆ, ಅವರು ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಸ್ನೇಹಿತರು ಕುಟುಂಬದವರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೂ ದೂರು ನೀಡಿದ್ದಾರೆ.

ತ್ರಿನೇಶ್ ಚೆನ್ನೈನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಕತ್ತಲಾದ್ದರಿಂದ ತ್ರಿನೇಶ್ ಹುಡುಕಾಟ ನಡೆಸಲು ಸಾಧ್ಯವಾಗಿಲ್ಲ. ಇಂದು ಕಾಂಚೀಪುರಂ ಪೊಲೀಸರು ತ್ರಿನೇಶ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. [ಟಿಸಿಎಸ್ ಟೆಕ್ಕಿ ಕೊಂದು, ಕಾರಿನೊಂದಿಗೆ ಪರಾರಿ]












Click it and Unblock the Notifications