ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ಹಿಂದೂ ದೇವಸ್ಥಾನ ಸೇರಿ ಇಡೀ ಹಳ್ಳಿಯೇ ವಕ್ಫ್ ಮಂಡಳಿ ಪಾಲು!

|
Google Oneindia Kannada News

ಚೆನ್ನೈ, ಸೆ.15: ಮಗಳ ಮದುವೆಗೆಂದು ತಮ್ಮ ಜಮೀನು ಮಾರಲು ಯತ್ನಿಸಿದ ರೈತನಿಗೆ ಆ ಜಮೀನು ತನ್ನದಲ್ಲ ಅದು ವಕ್ಫ್ ಮಂಡಳಿಯ ಆಸ್ತಿ ಎಂದು ತಿಳಿದು ಬಂದಿರುವ ಆಘಾತಕಾರಿ ಪ್ರಕರಣವೊಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ತಮಿಳುನಾಡಿನ ತಿರುಚಿರಾಪಳ್ಳಿಯ ತಿರುಚೆಂದೂರೈ ಗ್ರಾಮಸ್ಥರು ತಮ್ಮ ಇಡೀ ಗ್ರಾಮವನ್ನು ರಾಜ್ಯ ವಕ್ಫ್ ಮಂಡಳಿಯ ಆಸ್ತಿ ಎಂದು ಘೋಷಿಸಿರುವುದನ್ನು ತಿಳಿದು ಭಾರಿ ಆತಂಕ್ಕಕೆ ಒಳಗಾಗಿದ್ದಾರೆ. ಜೊತೆಗೆ ಇಡೀ ಗ್ರಾಮವೇ ವಕ್ಫ್ ಮಂಡಳಿಯ ಆಸ್ತಿ ಎಂಬ ಸುದ್ದಿ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಇದು ಇಂಡಿಯಾ, ಹಿಂದಿಯಾ ಅಲ್ಲ: ಅಮಿತ್‌ ಶಾಗೆ ಸ್ಟಾಲಿನ್‌ ಪ್ರತಿಕ್ರಿಯೆಇದು ಇಂಡಿಯಾ, ಹಿಂದಿಯಾ ಅಲ್ಲ: ಅಮಿತ್‌ ಶಾಗೆ ಸ್ಟಾಲಿನ್‌ ಪ್ರತಿಕ್ರಿಯೆ

ವರದಿಗಳ ಪ್ರಕಾರ, ಎನ್ ರಾಜಗೋಪಾಲ್ ಅವರು ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂಡುರೈ ಗ್ರಾಮದಲ್ಲಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಲು ಬಯಸಿದ್ದರು ಆದರೆ ಅವರಿಗೆ ಆಘಾತವಾಗುವಂತೆ, ಅವರು ಹೊಂದಿರುವ 1.2 ಎಕರೆ ಜಮೀನು ತಮಿಳುನಾಡು ವಕ್ಫ್ ಮಂಡಳಿಗೆ ಸೇರಿದ್ದು ಮತ್ತು ಅದನ್ನು ಮಾರಾಟ ಮಾಡಲು ಬಯಸಿದರೆ, ವಕ್ಫ್ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಹಳ್ಳಿ ಜೊತೆಗೆ ಹಿಂದೂ ದೇವಾಲಯವೂ ಮುಸ್ಲಿಂ ಮಂಡಳಿಯ ಆಸ್ತಿ!

ಹಳ್ಳಿ ಜೊತೆಗೆ ಹಿಂದೂ ದೇವಾಲಯವೂ ಮುಸ್ಲಿಂ ಮಂಡಳಿಯ ಆಸ್ತಿ!

ಘಟನೆ ಬಗ್ಗೆ ವಿಚಾರಿಸಿದಾಗ ಇಡೀ ತಿರುಚೆಂದೂರೈ ಗ್ರಾಮ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕುತೂಹಲಕಾರಿಯಾಗಿ, ಈ ತಿರುಚೆಂದೂರೈ ಗ್ರಾಮವು ಹಿಂದೂ ಪ್ರಾಬಲ್ಯದ ಪ್ರದೇಶವಾಗಿದೆ . ಆದರೆ, ಇಲ್ಲಿ ಎರಡು ಸಮುದಾಯಗಳು ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಕೃಷಿಕ ರಾಜಗೋಪಾಲ್ ಸಮರ್ಥಿಸಿಕೊಂಡಿದ್ದಾರೆ.

ಇನ್ನು, 1500 ವರ್ಷಗಳಷ್ಟು ಹಳೆಯದಾದ ಸುಂದರೇಶ್ವರ ದೇವಸ್ಥಾನವು 369 ಎಕರೆ ವಿಸ್ತಿರ್ಣದ ಆಸ್ತಿಯನ್ನು ಹೊಂದಿದೆ. ಅದು ಕೂಡ ವಕ್ಫ ಮಂಡಳಿಗೆ ಸೇರಿದೆ ಎನ್ನಲಾಗಿದೆ. ಇದಕ್ಕೆ ಗ್ರಾಮಸ್ಥರು ಅಷ್ಟು ಹಳೆಯ ದೇವಾಲಯ ಅವರಿಗೆ ಸೇರಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ರೈತ ರಾಜಗೋಪಾಲ್ 1992 ರಲ್ಲಿ ಭೂಮಿಯನ್ನು ಖರೀದಿಸುವಾಗ ಅದನ್ನು ಸರಿಯಾಗಿ ನೋಂದಾಯಿಸಿದ್ದೇನೆ ಎಂದು ಹೇಳಿದ್ದಾರೆ.

ಜಮೀನು ಮಾರಾಟ ಮಾಡಲು ವಕ್ಫ್ ಬೋರ್ಡ್‌ ಅನುಮತಿ ಕಡ್ಡಾಯ!

ಜಮೀನು ಮಾರಾಟ ಮಾಡಲು ವಕ್ಫ್ ಬೋರ್ಡ್‌ ಅನುಮತಿ ಕಡ್ಡಾಯ!

ತಿರುಚೆಂದೂರೈ ಗ್ರಾಮದ ಎಲ್ಲಾ ಜಮೀನು ವಕ್ಫ್ ಬೋರ್ಡ್‌ಗೆ ಸೇರಿದ್ದು, ಯಾರಾದರೂ ಭೂಮಿಯನ್ನು ಮಾರಾಟ ಮಾಡಲು ಬಯಸಿದರೆ, ಅವರು ಚೆನ್ನೈನಲ್ಲಿರುವ ಮಂಡಳಿಯಿಂದ ಎನ್‌ಒಸಿ ಪಡೆಯಬೇಕು ಎಂದು ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಕ್ಫ್ ಮಂಡಳಿಯು ತಮಿಳುನಾಡು ರಾಜ್ಯದಾದ್ಯಂತ ಸಾವಿರಾರು ಎಕರೆ ಆಸ್ತಿಯನ್ನು ಹೊಂದಿದೆ, ವಿಶೇಷವಾಗಿ ಬಹುಸಂಖ್ಯಾತ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ 18 ಹಳ್ಳಿಗಳನ್ನು ಹೊಂದಿದೆ ಎಂಬುದು ಈಗ ಬೆಳಕಿಗೆ ಬಂದಿದೆ.

ದೇವಾಲಯ ಮುಸ್ಲಿಮರಿಗೆ ಸೇರಲು ಸಾಧ್ಯವಿಲ್ಲ ಎಂದ ಗ್ರಾಮಸ್ಥರು

ದೇವಾಲಯ ಮುಸ್ಲಿಮರಿಗೆ ಸೇರಲು ಸಾಧ್ಯವಿಲ್ಲ ಎಂದ ಗ್ರಾಮಸ್ಥರು

"ಗ್ರಾಮದಲ್ಲಿ ಯಾವುದೇ ಆಸ್ತಿ ಹೊಂದಿರುವ ಮುಸ್ಲಿಮರ ಬಗ್ಗೆ ಯಾವುದೇ ಮಾಹಿತಿಯಿಲ್ಲ. 1927-1928 ರಲ್ಲಿ ಆಸ್ತಿಗಳ ಪುನರ್ವಸತಿ ನಡೆದಿದೆ ಎಂದು ದಾಖಲೆಗಳು ಸಹ ಸೂಚಿಸುತ್ತವೆ. 1500 ವರ್ಷಗಳಷ್ಟು ಹಳೆಯದಾದ ಸುಂದರೇಶ್ವರ ದೇವಸ್ಥಾನವು 369 ಎಕರೆ ವಿಸ್ತಿರ್ಣ ಹೊಂದಿದೆ, ಅದು ಸ್ಪಷ್ಟವಾಗಿ ಮುಸ್ಲಿಮರಿಗೆ ಸೇರಲು ಸಾಧ್ಯವಿಲ್ಲ. ಇದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳು ಲಭ್ಯವಿವೆ" ಎಂದು ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ದಾನಪಾಲ್ ಹೇಳಿದರು.

ಸಬ್ ರಿಜಿಸ್ಟ್ರಾರ್ ಕಚೇರಿಯು ತಮಿಳುನಾಡು ವಕ್ಫ್ ಮಂಡಳಿಯ 20 ಪುಟಗಳ ಪತ್ರವನ್ನೂ ಗ್ರಾಮಸ್ಥರಿಗೆ ತೋರಿಸಿದ್ದು, ಗ್ರಾಮದ ಆಸ್ತಿಯ ಮಾಲೀಕತ್ವವನ್ನು ಹೊಂದಿದೆ ಎಂದಿದ್ದಾರೆ. ರಾಜಗೋಪಾಲ್ ಅವರ ಸ್ವಂತ ಜಮೀನಿನ ಈ ಮಾಹಿತಿ ನೋಡಿ ತಬ್ಬಿಬ್ಬಾದರು. ಅವರ ಆಸ್ತಿ ಪತ್ರಗಳನ್ನು ಪರಿಶೀಲಿಸಿದ್ದಾರೆ. ಆದರೆ, ಹಕ್ಕುಪತ್ರದಲ್ಲಿ ಸತ್ಯಾಂಶ ಕಾಣದ ಗ್ರಾಮಸ್ಥರು ಮಾಲೀಕತ್ವ ಹಸ್ತಾಂತರ ವಿರೋಧಿಸಿ ಜಿಲ್ಲಾಡಳಿತ ಕಚೇರಿ ಎದುರು ಧರಣಿ ಕುಳಿತರು.

ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಗೋಪಾಲ್, 1996 ರಲ್ಲಿ ಗ್ರಾಮದಲ್ಲಿ ಒಂದು ತುಂಡು ಭೂಮಿಯನ್ನು ಖರೀದಿಸಿದ್ದೆ. ಅದು ವಕ್ಫ್ ಬೋರ್ಡ್ ಜಮೀನಾಗಿರಲಿಲ್ಲ. ತನ್ನ ಬಳಿ ಜಮೀನಿನ ಎಲ್ಲಾ ದಾಖಲೆಗಳಿವೆ ಆದರೆ ಅದನ್ನು ಮಾರಾಟ ಮಾಡಲು ಬಯಸಿದಾಗ ರಿಜಿಸ್ಟ್ರಾರ್ ಅದು ವಕ್ಫ್ ಮಂಡಳಿಗೆ ಸೇರಿದ್ದು ಎನ್ನುತ್ತಿದ್ದಾರೆ ಎಂದಿದ್ದಾರೆ.

ನಮ್ಮ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ನಿವಾಸಿಗಳು!

ನಮ್ಮ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ನಿವಾಸಿಗಳು!

ಗ್ರಾಮದ ಜಮೀನಿನ ಮಾಲೀಕತ್ವದ ಕುರಿತು ತಮಿಳುನಾಡು ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಹಮಾನ್ ಅವರನ್ನು ಕೇಳಿದಾಗ, "ಈ ಆಸ್ತಿಗಳನ್ನು ಹಲವಾರು ವಕ್ಫ್ ಸಂಸ್ಥೆಗಳ ಅಡಿಯಲ್ಲಿ ನೋಂದಾಯಿಸಲಾಗಿದೆ. ಮಂಡಳಿಯು ಸಾಮಾನ್ಯವಾಗಿ ಭೂಮಿಯನ್ನು ಜನರಿಗೆ ದಾನವಾಗಿ ಬಳಸಲು ಅನುಮತಿಸುತ್ತದೆ. ಆದರೆ, ವಿವಿಧ ಸ್ಥಳಗಳಲ್ಲಿ ಅತಿಕ್ರಮಣಗಳು ನಡೆದಿವೆ. ವಹಿವಾಟುಗಳನ್ನು ನಿಲ್ಲಿಸುವ ಸಲುವಾಗಿ, ತಮಿಳುನಾಡು ವಕ್ಫ್ ಮಂಡಳಿಯು ಅಧಿಕೃತವಾಗಿ ಉಪ-ರಿಜಿಸ್ಟ್ರಾರ್ ಕಚೇರಿಗಳಿಗೆ ಎಲ್ಲಾ ಸರ್ವೆ ಸಂಖ್ಯೆಗಳನ್ನು ನೀಡಿದೆ" ಎಂದು ಮಾಹಿತಿ ನೀಡಿದ್ದಾರೆ.

"ಅನೇಕ ಸ್ಥಳೀಯರು ವಕ್ಫ್‌ಗೆ ಸೇರಿದ ಆಸ್ತಿಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಯಾವುದೇ ವಹಿವಾಟು ಮಾಡಲು ಸಾಧ್ಯವಿಲ್ಲ. ನಮಗೆ ಸೇರಿರುವ 389 ಎಕರೆ ಭೂಮಿ ಇದೆ. ನಾವು ಎಲ್ಲಾ ವಿವರಗಳನ್ನು ಒದಗಿಸಿದ್ದೇವೆ. ಅವುಗಳೆಲ್ಲ ಸರ್ಕಾರದ ಆರ್ಕೈವ್ಸ್ ಇಲಾಖೆಯಲ್ಲಿ ಲಭ್ಯವಿವೆ. ವಕ್ಫ್ ಬೋರ್ಡ್ ಆಸ್ತಿಗಳನ್ನು ಜನರ ಕಲ್ಯಾಣಕ್ಕೆ ಮೀಸಲಿಟ್ಟರೆ, ಗ್ರಾಮಸ್ಥರು ಕೋಮುವಾದದ ವಿಷಯಗಳನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಿರುಚೆಂದೂರೈ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಕಾವೇರಿ ನದಿಯ ದಡದಲ್ಲಿರುವ ಒಂದು ಹಳ್ಳಿ. j

English summary
Tamil Nadu: Waqf Board claims ownership of entire village in Tamil Nadu's Tiruchirappalli, including 1500-year-old Hindu temple. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X